ಮೂಢನಂಬಿಕೆ ವಿರುದ್ಧ ಜನರಲ್ಲಿ ಜಾಗೃತಿ

0

ಖಾನಾಪುರ : ತಾಲ್ಲೂಕಿನ ಮಾಚಿಗಡ ಗ್ರಾಮಕ್ಕೆ ತೆರಳುವ ಕ್ರಾಸ್ ಬಳಿ ರಸ್ತೆಯ ಮಧ್ಯೆದಲ್ಲಿ ವಾಮಾಚಾರ ಮಾಡಿ ಇಟ್ಟು ಹೊಂದಂತ ವಸ್ತುಗಳು ರಸ್ತೆಯ ಪಕಕ್ಕೆ ಶಿಕ್ಷಕರೊಬ್ಬರು ಎಸೆದು , ಮೂಢನಂಬಿಕೆ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.

ಬೆಳಂಬೆಳ್ಳಿಗೆ ವಾಮಾಚಾರ ಮಾಡಿದ ವಸ್ತಗಳನ್ನು ಯಾರೋ  ನಡು ರಸ್ತೆಯಲ್ಲಿ ಇಟ್ಟು ಹೋಗಿದ್ದರು. ಇದರಿಂದ ರಸ್ತೆಯಲ್ಲಿ ಸಂಚರಿಸುತ್ತಿದ್ದ ಜನರು ಭಯದಿಂದ ಸಂಚಾರ ಮಾಡ ತೊಡಗಿದ್ದರು. ಇದನ್ನು ಕಂಡ  ಪರಶುರಾಮ ಕೋಲಕಾರ ಎಂಬ ಶಿಕ್ಷಕ ನಡು ರಸ್ತೆಯಲ್ಲಿ ಇಟ್ಟಿದ್ದ ವಾಮಾಚಾರವನ್ನುತಮ್ಮ ಕೈಯಿಂದ ಎತ್ತಿ ರಸ್ತೆ ಪಕ್ಕಕ್ಕೆ ಬಿಸಾಕಿದ್ದಾರೆ.

ಬಳಿಕ ಸಂಚರಿಸುತ್ತಿದ್ದ ಜನರಿಗೆ ಮೌಢ್ಯದ ವಿರುದ್ಧ ಜಾಗೃತಿ ಪಾಠ ಮಾಡಿದ್ದಾರೆ. ಯಾರು ಸಹ ಭಯ ಪಡಬೇಕಾಗಿಲ್ಲ. ಯಾವ ವಾಮಾಚಾರವೂ ಸಹ ಏನು ಮಾಡಲಾಗುವುದಿಲ್ಲ. ನಿಮ್ಮ ತಲೆಯಲ್ಲಿನ ಆಲೋಚನೆಗಳನ್ನು ಕಿತ್ತು ಬಿಸಾಕಿ ಎಂದು ಶಿಕ್ಷಕ ಜನರಿಗೆ ಜಾಗೃತಿ ಮೂಡಿಸಿದ್ದಾರೆ. ಶಿಕ್ಷಕನ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.