ಹುಕ್ಕೇರಿ ಹಿರೇಮಠದಲ್ಲಿ ಆರಂಭವಾದ ಸುವಿಚಾರ ಚಿಂತನ

0

 

ಬೆಳಗಾವಿ :   ಹುಕ್ಕೇರಿ ಹಿರೇಮಠದಲ್ಲಿ ಆರಂಭವಾದ ಸುವಿಚಾರ ಚಿಂತನ  ಕಳೆದ 9 ತಿಂಗಳಿನಿಂದ ಕೊರೋನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ಸುವಿಚಾರ ಚಿಂತನಕ್ಕೆ ಕಡಿವಾಣ ಹಾಕಲಾಗಿತ್ತು. ತಿಂಗಳ ಮೊದಲ ರವಿವಾರ ಬಂತು ಎಂದರೆ ಬೆಳಗಾವಿಯ ನಗರದ ಜನ ಆತುರದಿಂದ ಕಾಯುತ್ತಿರುವುದು ನಗರದ ಹುಕ್ಕೇರಿ ಹಿರೇಮಠದ ವಿಚಾರ ಚಿಂತನ ಈ ಸುವಿಚಾರ ಚಿಂತನದಲ್ಲಿ ಜಗದ್ಗುರು ಪಂಚಪೀಠಾಧೀಶ್ವರರ ಅನೇಕ ವಿರಕ್ತ ಮಠಾಧೀಶರು ಅದ್ವೈತ ಪರಂಪರೆಯ ಮಠಾಧೀಶರು ಅμÉ್ಟೀ ಏಕೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸೇರಿದಂತೆ ಸಾಹಿತಿಗಳು ಕವಿಗಳು ಕಲಾವಿದರು ಭಾಗವಹಿಸಿ ಸುವಿಚಾರ ಚಿಂತನ ಕಾರ್ಯಕ್ರಮವನ್ನು ಶ್ರೀಮಂತಗೊಳಿಸಿದ್ದಾರೆ.

ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ರಾಜ್ಯ ಹೊರರಾಜ್ಯ ಹೊರದೇಶದಲ್ಲಿ ಕೂಡ ಭಕ್ತ ಸಮೂಹವನ್ನು ಹೊಂದಿದ್ದಾರೆ. ಇವತ್ತು ಎಲ್ಲಾ ಕಡೆಯಿಂದಲೂ ಈ ಮಠಕ್ಕೆ ಆಗಮಿಸಿ ಕಾರ್ಯಕ್ರಮದಲ್ಲಿ ಬರುತ್ತಿರುವುದು ಸಂತೋಷದ ಸಂಗತಿ ಮಾರ್ಚ್ ತಿಂಗಳಿಂದ ಶ್ರೀಗಳ ಆನ್ಲೈನ್ ಪ್ರವಚನ ಮಾಡುವುದರ ಮುಖಾಂತರ ಚಿಂತನವನ್ನು ನಡೆಸುತ್ತಿದ್ದರು ಆದರೆ ಭಕ್ತರ ಒತ್ತಾಸೆ ಮತ್ತೆ ಸುವಿಚಾರ ಚಿಂತನಕ್ಕೆ ಒಂದು ಸಂತಸದ ವಾತಾವರಣ ನಿರ್ಮಾಣವಾಗಿದೆ.

ಈ ಸಂದರ್ಭದಲ್ಲಿ 38ನೇ ವಿಚಾರ ಚಿಂತನಕ್ಕೆ ಭಾಗವಹಿಸಿ ಸದಲಗಾ ಚಿಕ್ಕೋಡಿ ಮತಕ್ಷೇತ್ರದ ಗಣೇಶ್ ಹುಕ್ಕೇರಿ ಅವರು ಮಾತನಾಡುತ್ತಾ ಹುಕ್ಕೇರಿ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಎಲ್ಲರನ್ನು ಬೆಳೆಸಿದ್ದಾರೆ ನಾನು ಜಿಲ್ಲಾ ಪಂಚಾಯತಿ ಸದಸ್ಯರು ಆಗುವುದಕ್ಕಿಂತ ಮುಂಚೆಯಿಂದಲೂ ಗುರುಗಳು ನನಗೆ ಆಶೀರ್ವಾದ ಮಾಡಿದ್ದಾರೆ ಇವತ್ತು ಎರಡು ಬಾರಿ ಶಾಸಕನಾಗಿದ್ದೇನೆ ಈಗಲೂ ಶಾಸಕನಾಗಿ ಕೆಲಸ ಮಾಡುತ್ತಿದ್ದೇನೆ ಇನ್ನೂ ಹೆಚ್ಚಿನ ಕಾರ್ಯ ಮಾಡುವಂತೆ ಶ್ರೀಗಳು ಆಶೀರ್ವದಿಸಲಿ ಶ್ರೀಗಳು ಕನಸು ಕಟ್ಟಿರುವ ಬೆಳಗಾವಿ ಹುಕ್ಕೇರಿ ಹಿರೇಮಠದ ಶಾಖೆಯ ನೂತನ ಕಟ್ಟಡವನ್ನು ನಾವೆಲ್ಲರೂ ಕೂಡ ಕಟ್ಟೋಣ ನಮ್ಮ ಸೇವೆಯನ್ನು ಸಲ್ಲಿಸುವ ನಾನು ವೈಯಕ್ತಿಕವಾಗಿ ಅನ್ನಪೂರ್ಣೇಶ್ವರಿ ಫೌಂಡೇಶನ್ ನಾವು ಸ್ಥಾಪಿಸಿರುವ ದ ಪೂರ್ಣೇಶ್ವರಿ ಫೌಂಡೇಶನ ದಿಂದ ಶ್ರೀಮಠಕ್ಕೆ ಹೆಚ್ಚಿನ ಸೇವೆಯನ್ನು ನಾನು ಮಾಡುತ್ತೇನೆ ಎಂದರು.

ಸವದತ್ತಿ ಮಠದ ಹಿರೇಮಠದ ನೆರೆಗಲ್ ಶ್ರೀ ಷ ಬ್ರ ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು ಸುವಿಚಾರ ವಿಚಾರ ತಿಂದರೆ ಪ್ರಸಾದಿ ಸ್ಥಲ ಮತ್ತು ಸಿದ್ಧಾಂತಶಿಖಾಮಣಿ ಗ್ರಂಥ ಕುರಿತು ಅದ್ಭುತವಾಗಿ ಮಾತನಾಡಿದರು ಬೆಳಗಿನಿಂದ ಸಂಜೆಯವರೆಗೆ ವಿಶೇಷವಾಗಿ ಶ್ರೀಗಳು ಭಕ್ತರಿಗೆ ಲಿಂಗ ದೀಕ್ಷೆ ಜಂಗಮರಿಗೆ ಅಯ್ಯಾಚಾರ ಕಾರ್ಯಕ್ರಮವನ್ನು ನೆರವೇರಿಸಿದರು ಪುಟ್ಟ ಕಂದಮ್ಮನ ಗೆ ತಾವೇ ತಿರುಪತಿ ಲಾಡು ತಿಳಿಸುವುದರ ಮುಖಾಂತರ ಹೊಸವರ್ಷದ ಸಂತಸವನ್ನು ಹಂಚಿಕೊಂಡರು ಬೆಳಗಾವಿ ಹುಕ್ಕೇರಿ ಹಿರೇಮಠದ ಸದ್ಭಕ್ತರು ತುಂಬಾ ಖುಷಿ ಯಾಗಿದ್ದಾರೆ ಕೋರೋಣ ಸಂದರ್ಭದೊಳಗೆ ಮಠಮಾನ್ಯಗಳ ಕಾರ್ಯಕ್ರಮಗಳಿಗೆ ಕಡಿವಾಣ ಬಿದ್ದಿತ್ತು ನಮಸ್ತೆ ಆರಂಭಗೊಂಡಿದೆ ಈ ವರ್ಷ ಸುಖ-ಶಾಂತಿ-ನೆಮ್ಮದಿ ಎಲ್ಲರಿಗೂ ಸಿಗಲಿ ಎನ್ನುವುದು ನಮ್ಮ ಉದ್ದೇಶ ಎಂದರು.