ಕ.ಸಾ.ಪ.ಬೆಳಗಾವಿ ಜಿಲ್ಲೆಯ ವಿವಿಧ ದತ್ತಿ ಕಾರ್ಯಕ್ರಮ

0

ಬೆಳಗಾವಿ, ಜ.5 : ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ದಿ.ಎಸ್.ವ್ಹಿ.ಬಾಗಿ ದತ್ತಿ, ದಿ.ಡಾ.ಸ.ಜ.ನಾಗಲೋಟಿಮಠ ದತ್ತಿ, ದಿ.ಶ್ರೀಮತಿ.ಜ್ಯೋತಿ ಮೂಗಿ ದತ್ತಿ, ದಿ.ಕೃಷ್ಣಶರ್ಮ ಬೆಟಗೇರಿ ದತ್ತಿ, ದಿ.ಮರಿಕಲ್ಲಪ್ಪ ರುದ್ರಪ್ಪ ಮಲಶೆಟ್ಟಿ ದತ್ತಿ, ದಿ.ನೇಮಿನಾಥ ಕಲ್ಲಪ್ಪ ಇಂಚಲ ದತ್ತಿ ಕಾರ್ಯಕ್ರಮಗಳು ಬುಧವಾರ ದಿ.06 ರಂದು ಜರುಗಲಿದೆ.
ಬೆಳಗಾವಿಯ ನೆಹರು ನಗರದಲ್ಲಿರುವ ಕನ್ನಡ ಭವನದಲ್ಲಿ ಮಧ್ಯಾಹ್ನ 3 ಗಂಟೆಗೆ ಜರುಗುವ ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕ.ಸಾ.ಪ. ಅಧ್ಯಕ್ಷೆ ಮಂಗಲಾ ಶ್ರೀಶೈಲ ಮೆಟಗುಡ್ಡ ಅಧ್ಯಕ್ಷತೆ ವಹಿಸಲಿದ್ದು ಶ್ರೀಮತಿ.ಶಿವಲೀಲಾ ಬಾಗಿ, ಶ್ರೀಮತಿ.ಶಾಂತಕ್ಕಾ ನಾಗಲೋಟಿಮಠ, ಸುಭಾಷ ಏಣಗಿ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಉಪನ್ಯಾಸಕರಾಗಿ ಶ್ರೀಮತಿ ಅಕ್ಕಮಹಾದೇವಿ ತೆಗ್ಗಿ ಅವರು ಶರಣರು ಮತ್ತು ವಚನ ಸಾಹಿತ್ಯದ ಬಗ್ಗೆ ಹಾಗೂ ಪ್ರೋ.ಸಿ.ಜಿ.ಮಠಪತಿ ಅವರು ಪೂಜ್ಯ ಹಾನಗಲ್ ಕುಮಾರ ಸ್ವಾಮಿಗಳ ಸಾಮಾಜಿಕ ಚಿಂತನೆ ಎಂಬ ವಿಷಯ ಕುರಿತು ಉಪನ್ಯಾಸ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಸಾಂಸ್ಕøತಿಕ ಜಾನಪದ ಕಾರ್ಯಕ್ರಮಗಳು ನಡೆಯಲಿವೆ.
ಬೆಳಗಾವಿಯ ಎಮ್.ವಾಯ್.ಮೆಣಸಿನಕಾಯಿ ಅವರು ದತ್ತಿ ಪರಿಚಯ ಮಾಡುವರು. ಶ್ರೀಮತಿ ಜ್ಯೋತಿ ಬದಾಮಿ ಅವರು ಕಾರ್ಯಕ್ರಮ ನಿರೂಪಣೆ ಮಾಡುವರು. ಕ.ಸಾ.ಪ. ಬೆಳಗಾವಿ ಜಿಲ್ಲೆಯ ಎಲ್ಲ ತಾಲೂಕಾ ಅಧ್ಯಕ್ಷರುಗಳು ಹಾಗೂ ಕ.ಸಾ.ಪ. ಕಾರ್ಯಕಾರಿ ಸಮಿತಿ ಸಭೆಯ ಸರ್ವ ಸದಸ್ಯರು ಉಪಸ್ಥಿತರಿರುವರು. ಸಾಹಿತಿಗಳು, ಸಮಸ್ತ ಕನ್ನಡ ಅಭಿಮಾನಿಗಳು, ಕನ್ನಡಪರ ಸಂಘಟನೆಗಳು ಈ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಕ.ಸಾ.ಪ.ಬೆಳಗಾವಿ ಜಿಲ್ಲಾಧ್ಯಕ್ಷರಾದ ಮಂಗಲಾ ಶ್ರೀಶೈಲ ಮೆಟಗುಡ್ಡ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.