ಮಟ್ಕಾ ; 11 ಜನರ ಬಂಧನ….

0

ಬೆಳಗಾವಿ, ಜ. 5- ತಾಲೂಕಿನ ಮುತಗಾ ಗ್ರಾಮದಲ್ಲಿ ಮಟ್ಕಾ ಆಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ 11 ಜನರನ್ನು ಬಂಧಿಸಿದ್ದು, ಅವರಿಂದ ರೂ .42,800 / ನಗದು, 5 ಮೊಬೈಲ್ ಮತ್ತು 1 ಟ್ಯಾಬ್ ವಶಪಡಿಸಿಕೊಂಡಿದ್ದಾರೆ..

ಬಂಧಿತರನ್ನು ಪ್ರತೀಕ್ ಅಶೋಕ್ ಇಂಗಳೆ – ಮುತಗಾ (24), ಯಲ್ಲಪ್ಪ ಕಮ್ಮಾರ – ಶಿಂದೊಳ್ಳಿ(45), ನಿಲಜಿ ಗ್ರಾಮದ ಸತೀಶ್ ರಾಜು ಪಾಟೀಲ್ – (22) , ವಿಕಾಸ್ ಸೋಮನಾಥ್ ಮೋದಗೆಕರ್ – , ಗಜನಂದ ಪರಶುರಾಮ್ ಸುತಾರ್ (19), ಸಾಂಬ್ರಾ ಗ್ರಾಮದ ಮಹದೇವ್ ರಾಮಚಂದ್ರ ನೀಲಗಾರ (48) ಪರಶುರಾಮ್ ಕೇದಾರಿ ಚಿಂಗಳೆ (48), ಸದಾಶಿವ ಬಸನಗೌಡ ಪಾಟೀಲ್ (29), ಮುತಗಾ ಗ್ರಾಮದ ಮನೋಹರ್ ಬಾವು ಕಣ್ಣಾ ಚೌಗುಲೆ (58), ಸಾಂಬ್ರಾ ಗ್ರಾಮದ ಶಿವಾಜಿ ಜೋತಿಬಾ ಕುರಿಹಾಳ (63), ಪಾಂಡುರಂಗ ಮಹದೇವ್ ಬಿರ್ಜೆ (50) ಎಂಬಾತರನ್ನು ಬಂಧಿಸಲಾಗಿದೆ.

ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಡಿಸಿಪಿ ವಿಕ್ರಂ ಅಮಟೆ ಅವರು ತಿಳಿಸಿದ್ದಾರೆ..