ಸೇನಾ ನೇಮಕಾತಿ ರ್ಯಾಲಿ ಮೂಲ ಸೌಕರ್ಯ ಒದಗಿಸಲು ಜಿಲ್ಲಾಧಿಕಾರಿ ಎಂ.ಜಿ. ಹೀರೆಮಠ ಸೂಚನೆ

0

 

ಬೆಳಗಾವಿ ಡಿ. 6  : ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮೈದಾನದಲ್ಲಿ ಫೆಬ್ರವರಿ 04 ರಿಂದ 15 ರವರೆಗೆ ಸೇನಾ ನೇಮಕಾತಿ ರ್ಯಾಲಿ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ. ಜಿ. ಹಿರೇಮಠ ಅವರು ತಿಳಿಸಿದರು.

ಜ. 06 ಬುಧವಾರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮಾತಾನಾಡಿದ ಅವರು ರಾಜ್ಯದ 6 ಜಿಲ್ಲೆಗಳಲಿಂದ ಅಭ್ಯರ್ಥಿಗಳು ಬರಲಿದ್ದು ಮೂಲ ಸೌಕರ್ಯ ಕಲ್ಪಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸೇನಾ ನೇಮಕಾತಿ ಪ್ರಧಾನ ಕಚೇರಿ ವಲಯದ ಆಶ್ರಯದಲ್ಲಿ ಬೆಳಗಾವಿ, ರಾಯಚೂರು, ಯಾದಗಿರಿ ಬೀದರ್, ಕೊಪ್ಪಳ ಮತ್ತು ಕಲಬುರ್ಗಿ ಜಿಲ್ಲೆಗಳಿಂದ ಪ್ರವೇಶ ಪತ್ರ ಪಡೆದ ಅಭ್ಯರ್ಥಿಗಳು ಬರಲಿದ್ದಾರೆ ಎಂದು ತಿಳಿಸಿದರು.

ಸೈನ್ಯದ ನಿಗದಿತ ವಿಭಾಗಗಳಲ್ಲಿ ದಾಖಲಾತಿಗಾಗಿ ವಯಸ್ಸು, ಶೈಕ್ಷಣಿಕ ಅರ್ಹತೆ ಮತ್ತು ಇತರ ಮಾನದಂಡಗಳ ವಿವರಗಳನ್ನು ಸೈನ್ಯದ ನೇಮಕಾತಿ ಕಚೇರಿ ಬೆಳಗಾವಿ ಡಿ.04 2020 ರಂದು ಭಾರತೀಯ ಸೇನಾ ವೆಬ್‍ಸೈಟ್ ಮೂಲಕ ಅಭ್ಯರ್ಥಿಗಳ ಆನ್‍ಲೈನ್ ನೋಂದಣಿ ಮಾಡಲು ಅಧಿಸೂಚನೆಯನ್ನು ನೀಡಲಾಗಿತ್ತು.

ರಾಜ್ಯದ ಮೇಲಿನ ಜಿಲ್ಲೆಗಳಿಂದ ಒಟ್ಟು 40.000 ಅಭ್ಯರ್ಥಿಗಳನ್ನು ಆನ್‍ಲೈನ್‍ನಲ್ಲಿ ನೋಂದಾಯಿಸಲಾಗಿದೆ. www.joinindianarmy.gov.in ವೆಬ್‍ಸೈಟ್ ನಲ್ಲಿ ಅಭ್ಯರ್ಥಿಗಳ ಆನ್‍ಲೈನ್ ನೋಂದಣಿ ಹೊಂದಿದ ಪ್ರವೇಶ ಪತ್ರಗಳನ್ನು ನೀಡಲಾಗುವುದು.

ಮುಂಬರುವ ನೇಮಕಾತಿ ರ್ಯಾಲಿಯನ್ನು ಯಶಸ್ವಿಯಾಗಿ ನಡೆಸಲು ಜಿಲ್ಲಾಡಳಿತ ಹಾಗೂ ಪೆÇಲೀಸ ಇಲಾಖೆ ಸಂಪೂರ್ಣ ಬೆಂಬಲ, ಸಹಕಾರ ನೀಡಲು ಸೇನೆಯ ನೇಮಕಾತಿ ನಿರ್ದೇಶಕರು ತಿಳಿಸಿದರು.

ಸೇನಾ ನೇಮಕಾತಿ ನಿರ್ದೇಶಕ ರಾಹುಲ್ ಆರ್ಯ, ಡಿಸಿಪಿ ವಿಕ್ರಂ ಆಮ್ಟೆ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಎ.ಜಿ. ಬುಜಾರ್ಕಿ, ಡಿ.ಎಸ್.ಪಿ ಕರುಣಾಕರ ಶೆಟ್ಟಿ, ಎ.ಸಿ.ಪಿ ಗಣಪತಿ ಗುಡಚಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಶಶಿಕಾಂತ ಮುನ್ಯಾಳ, ಜಿಲ್ಲಾ ಕ್ರೀಡಾ ಅಧಿಕಾರಿ ವಿ.ಎಸ್.ಪಾಟೀಲ, ಬಿ.ಎಸ್.ಎನ್.ಎಲ್. ಅಧಿಕಾರಿ ಎನ್. ಟಿ ಬಾಳೇಕುಂದ್ರಿ ಸಭೆಯಲ್ಲಿ ಉಪಸ್ಥಿತರಿದ್ದರು.