ಮೀನು ಮಾರುಕಟ್ಟೆ ಅಭಿವೃದ್ದಿಗಾಗಿ ರೂ. 50.00 ಲಕ್ಷ ಮಂಜೂರು : ಶಾಸಕ ಅನಿಲ ಬೆನಕೆ :

0

ಬೆಳಗಾವಿ 06 :ದಿನಾಂಕ 06.01.2021 ರಂದು ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ರವರು ಕ್ಯಾಂಪನಲ್ಲಿನ ಮೀನು ಅಭಿವೃದ್ದಿ ಮಾರುಕಟ್ಟೆ ಅಭಿವೃದ್ದಿ ಸಲುವಾಗಿ ಮಾನ್ಯ ಸಚಿವರಾದ ಶ್ರೀ. ಕೋಟಾ ಶ್ರೀನಿವಾಸ ಪೂಜಾರಿರವರಿಗೆ ಸಲ್ಲಿಸಿದ್ದರ ಪ್ರಯುಕ್ತ ಇಂದು ಶಾಸಕರು ಹಾಗೂ ಮೀನುಗಾರಿಕೆ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರು ಇಲ್ಲಿನ ಮೀನು ಮಾರುಕಟ್ಟೆ ಹಾಗೂ ಅಲ್ಲಿನ ಪ್ರದೇಶವನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಅನಿಲ ಬೆನಕೆರವರುಮೀನು ಅಭಿವೃದ್ದಿ ಮಾರುಕಟ್ಟೆ ಅಭಿವೃದ್ದಿ ಸಲುವಾಗಿ ಮಾನ್ಯ ಸಚಿವರಾದ ಶ್ರೀ. ಕೋಟಾ ಶ್ರೀನಿವಾಸ ಪೂಜಾರಿರವರಿಗೆ ಮನವಿ ಸಲ್ಲಿಸಲಾಗಿತ್ತು, ಅದರನ್ವಯ ಮನವಿಗೆ ಸ್ಪಂದಿಸಿ ಸುಸಜ್ಜಿತ ಮೀನು ಮಾರಾಟ ಮಾರುಕಟ್ಟೆ ನಿರ್ಮಾಣಕ್ಕೆ ಮೊದಲನೆ ಹಂತದಲ್ಲಿ ರೂ. 50.00 ಲಕ್ಷಗಳನ್ನು ಬಿಡುಗಡೆಗೊಳಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಕ್ಷೇತ್ರದಲ್ಲಿ ಈಗಾಗಲೇ ಸ್ಮಾರ್ಟ ಸಿಟಿ ಹಾಗೂ ಅನೇಕ ಇಲಾಖೆಗಳಿಂದ ಅಭಿವೃದ್ದಿ ಕಾಮಗಾರಿಗಳು ನಡೆಯುತ್ತಿದ್ದು, ಆದಷ್ಟು ಬೇಗನೆ ಮೀನು ಮಾರುಕಟ್ಟೆ ಅಭಿವೃಧ್ದಿ ಕಾಮಗಾರಿಯನ್ನು ಸಹ ಕೈಗೆತ್ತಿಕೊಂಡು ಅಭಿವೃದ್ದಿ ಪಡಿಸಲಾಗುವುದು ಎಂದ ಅವರು ಇನ್ನೂ ಎರಡನೇ ಹಂತದ ರೂ. 50.00 ಲಕ್ಷಗಳ ಅನುದಾನಕ್ಕಾಗಿ ಮಾನ್ಯ ಸಚಿವರಲ್ಲಿ ಕೋರಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಅನಿಲ ಬೆನಕೆ, ಎಮ್. ಎಲ್. ದೊಡಮನಿ (ಕೆ.ಎಫ್.ಡಿ.ಸಿ) ಮೀನುಗಾರಿಕೆ ಇಲಾಖೆ ವ್ಯವಸ್ಥಾಪಕ ನಿರ್ದೇಶಕ, ಅಮರನಾಥ ಕೆ.ಎಫ.ಡಿ.ಸಿ. ಇಂಜಿನೀಯರ, ಶ್ರೀಪಾದ ಕುಲಕರ್ಣಿ ಉಪ ನಿರ್ದೇಶಕರು ಮೀನುಗಾರಿಕೆ ಇಲಾಖೆ ಬೆಳಗಾವಿ ಹಾಗೂ ಇತರ ಸ್ಥಳೀಯ ಮೀನು ವ್ಯಾಪಾರಸ್ಥರು ಉಪಸ್ಥಿತರಿದ್ದರು.