ಸಿಟಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಶಾಸಕ ಅನಿಲ ಬೆನಕೆ :

0

ಬೆಳಗಾವಿ 06 : ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆರವರು ಸ್ಮಾರ್ಟ ಸಿಟಿ ಅಧಿಕಾರಿಗಳೊಂದಿಗೆ ಆಂಜನೇಯ ನಗರ, ಕಣಬರ್ಗಿ ಹಾಗೂ ರಾಮತೀರ್ಥ ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ ಸಿಟಿ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಆಚಿಜನೇಯ ನಗರ, ರಾಮತೀರ್ಥ ನಗರ ಹಾಗೂ ಕಣಬರ್ಗಿಯಲ್ಲಿನ ಕಾಮಗಾರಿಗಳ ಪರಿಶೀಲನೆ ನಡೆಸಿದ ಶಾಸಕರು ಸ್ಮಾರ್ಟ ಸಿಟಿ ಅಡಿಯಲ್ಲಿ ನಡೆಯುತ್ತಿರುವ ವಿವಿಧ ಅಭಿವೃಧ್ದಿ ಕಾಮಗಾರಿಗಳ ಅವಧಿ ಮೀರಿದರು ಇನ್ನೂ ಪೂರ್ಣಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆಂಜನೇಯ ನಗರದಲ್ಲಿನ ರಸ್ತೆ ಕಾಮಗಾರಿ ಹಾಗೂ ಕಣಬರ್ಗಿಯಲ್ಲಿನ ಕೆರೆಯಲ್ಲಿನ ಪುಟಪಾತ ಅಭಿವೃದ್ದಿ ಕಾಮಗಾರಿ ಮತ್ತು ರಾಮತೀರ್ಥ ನಗರದಲ್ಲಿ ಕಾಮಗಾರಿಗಳ ಬಗ್ಗೆ ಸ್ಮಾರ್ಟ ಸಿಟಿ ಅಧಿಕಾರಿಗಳಿಗೆ ತ್ವರಿತವಾಗಿ ನಿಗದಿತ ಸಮಯದಲ್ಲಿ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಹೇಳಿದ ಅವರು ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಕೈಗೊಳ್ಳಲಾಗುವ ಕಾಮಗಾರಿಗಳ ಬಗ್ಗೆ ಚರ್ಚಿಸಿದರು.


ಈ ಸಂದರ್ಭದಲ್ಲಿ ಶಾಸಕ ಅನಿಲ ಬೆನಕೆ, ಸ್ಮಾರ್ಟ ಸಿಟಿ ನಿರ್ದೇಶಕ ಶಶಿಧರ ಕುರೇರ, ಹಾಗೂ ಇತರ ಅಧಿಕಾರಿಗಳು ಮತ್ತು ಅಲ್ಲಿನ ಕಾರ್ಯಕರ್ತರು ಉಪಸ್ಥಿತರಿದ್ದರು.