ಪಲ್ಸ್ ಪೊಲೀಯೋ ಕಾರ್ಯಕ್ರಮ ಜ.17 ರಂದು: ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ

0

ಬೆಳಗಾವಿ,ಜ.07 : ಇದೇ ಜನವರಿ 17 ರಂದು ನಡೆಯಲಿರುವ ಪಲ್ಸ್ ಪೆÇೀಲಿಯೋ ಕಾರ್ಯಕ್ರಮ ಯಶಸ್ವಿಯಾಗಬೇಕು. ಈ ನಿಟ್ಟಿನಲ್ಲಿ ಎಲ್ಲ ಇಲಾಖೆಯ ಅಧಿಕಾರಿಗಳು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ನೀಡಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಸೂಚನೆ ನೀಡಿದರು.
ಜನವರಿ 17 ರಂದು ಜರಗುವ ರಾಷ್ಟ್ರೀಯ ಪಲ್ಸ್ ಪೆÇೀಲಿಯೋ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಗುರುವಾರ(ಜ.7) ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಒಂಬತ್ತು ವರ್ಷಗಳಿಂದ ದೇಶದಲ್ಲಿ ಯಾವುದೆ ಒಂದು ಪೆÇೀಲಿಯೋ ಪ್ರಕರಣವು ದಾಖಲಾಗಿಲ್ಲ. ಈ ಬೆಳವಣಿಗೆಯು ಹೀಗೇ ಮುಂದುವರೆಯಬೇಕು. ಪಲ್ಸ್ ಪೆÇಲಿಯೊ ಕಾರ್ಯಕ್ರಮಕ್ಕೆ ಬೇಕಾದಂತಹ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಬೇಕು.
ಕಳೆದ ವರ್ಷ ನಡೆದ ಪೆÇೀಲಿಯೋ ಕಾರ್ಯಕ್ರಮದಲ್ಲಿ 100 ಕ್ಕೆ ಪ್ರತಿಶತ 102.47 ರಷ್ಟು ಗುರಿಯನ್ನು ಸಾಧಿಸಿದೆ. ಈ ವರ್ಷವು ಸಹ ಗಣನೀಯವಾಗಿ ಹೆಚ್ಚಳ ಆಗಬೇಕು. ಇದಕ್ಕೆ ಎಲ್ಲ ಅಧಿಕಾರಿಗಳು ಕೈಜೋಡಿಸಬೇಕು.
ಪೆÇೀಲಿಯೋ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಅಂಗನವಾಡಿ ಕಾರ್ಯಕರ್ತೆಯರು ಸಿಬ್ಬಂದಿಗಳು ಹಾಗೂ ಶಿಕ್ಷಣ ಇಲಾಖೆಯವರು ಪ್ರಮುಖ ಪಾತ್ರ ವಹಿಸಬೇಕು. ಎಲ್ಲ ಇಲಾಖೆಯವರು ಹಾಗೂ ಸರ್ಕಾರಿ, ಸರ್ಕಾರೇತರ ಆಸ್ಪತ್ರೆಗಳಲ್ಲಿ ಬೂತ್ ಗಳ ಮೂಲಕ ಪೆÇೀಲಿಯೋ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಮಾತನಾಡಿದ ಆರ್ಸಿ.ಎಚ್.ಓ. ಡಾ.ಆರ್.ಐ.ಗಡಾದ ಅವರು, ಪೆÇೀಲಿಯೋ ಕಾರ್ಯಕ್ರಮದ ಸಿದ್ಧತೆಗಳ ಕುರಿತು ಮಾಹಿತಿಯನ್ನು ನೀಡಿದರು.

ಮೂರು ದಿನ ಪೆÇಲೀಯೋ ಲಸಿಕೆ:
ಒಟ್ಟು ಮೂರು ದಿನಗಳ ಕಾಲ ಪೆÇೀಲಿಯೋ ಕಾರ್ಯಕ್ರಮ ನಡೆಸಲಾಗುವುದು. ಮೊದಲನೇ ದಿನ ಪೆÇೀಲಿಯೋ ಬೂತ್ ಗಳಲ್ಲಿ ಪೆÇೀಲಿಯೊ ಹನಿ ನೀಡಲಾಗುವುದು ಹಾಗೂ ಎರಡು ಮತ್ತು ಮೂರನೇ ದಿನ ಮನೆಮನೆಯ ಭೇಟಿ ನೀಡುವ ಮೂಲಕ 0-5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಪೆÇೀಲಿಯೊ ಹನಿ ನೀಡಲಾಗುವುದು ಎಂದು ಡಾ.ಗಡಾದ ಅವರು ತಿಳಿಸಿದರು.
ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಹೆಚ್.ವ್ಹಿ, ಮಹಾನಗರ ಪಾಲಿಕೆ ಆಯುಕ್ತ ಜಗದೀಶ್ ಕೆ.ಎಚ್, ಉಪ ಪೆÇೀಲಿಸ್ ಆಯುಕ್ತರು ವಿಕ್ರಂ ಆಮಟೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಎಸ್.ವಿ.ಮುನ್ಯಾಳ, ಬಿಮ್ಸ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಗಿರೀಶ್ ದಂಡಗಿ, ಜಿಲ್ಲಾ ಕ್ಷಯರೋಗ ಹಾಗೂ ಏಡ್ಸ್ ನಿಯಂತ್ರಾಣಾಧಿಕಾರಿ ಅನಿಲ ಕೊರಬು, ಜಿಲ್ಲಾ ಕುಷ್ಠರೋಗ ಮತ್ತು ಅಂಧತ್ವ ನಿಯಂತ್ರಾಣಾಧಿಕಾರಿ ಸಿ.ಜೆ.ದೇವಡಿ, ಜಿಲ್ಲಾ ರೋಗವಾಹಕ ಅಶ್ರಿತ ರೋಗಗಳ ನಿಯಂತ್ರಾಣಾಧಿಕಾರಿ ಎಮ್.ಎಸ್.ಪಲ್ಲೇದ, ಜಿಲ್ಲಾ ಸಮೀಕ್ಷಣಾಧಿಕಾರಿ ಬಿ.ಎಸ್.ತುಕ್ಕಾರ ಸೇರಿದಂತೆ ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ, ಹೆಸ್ಕಾಂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಸಂಬಂಧಪಟ್ಟ ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.