ಸರಕಾರಿ ಶಾಲೆಗಳಿಗೆ ಕೊವಿಡ್-೧೯ ತಪಾಸಣೆ ಥರ್ಮಲ್ ಸ್ಕ್ಯಾನಿಂಗ್ ಉಪರಕಣ ವಿತರಣೆ.

0

ಬೆಳಗಾವಿ : ಸರಕಾರಿ ಶಾಲೆಗಳಿಗೆ ಕೊವಿಡ್-೧೯ ತಪಾಸಣೆ ಥರ್ಮಲ್ ಸ್ಕ್ಯಾನಿಂಗ್ ಉಪರಕಣ ವಿತರಣೆ.  ಮಾಡಿದರು ಇಂದು ಸಂಜೆ ಬೆಳಗಾವಿಯ ನಗರ ವಲಯದ ಕೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಜರುಗಿದ ಸರಳ ಸಮಾರಂಭದಲ್ಲಿ ದಾನಿಗಳಾದ ಕಾಂತೀಲಾಲ ಪೋರವಾಲ ಅವರು ೦೩ ಸರಕಾರಿ ಶಾಲೆಗಳಿಗೆ ಹಾಗೂ ೦೧ ಕಿವುಡ ಮಕ್ಕಳ ಸರಕಾರಿ ವಿಶೇಷ ಶಾಲೆಗೆ ಮಕ್ಕಳ ಕೊವಿಡ್-೧೯ ತಪಾಸಣೆಗಾಗಿ ಒಟ್ಟು ೦೪ ಥರ್ಮಲ್ ಸ್ಕ್ಯಾನಿಂಗ್ ಉಪಕರಣಗಳನ್ನು ದಾನವಾಗಿ ನೀಡಿದರು.

 

ಸದರಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಬಿ.ಇ.ಓ.ರವಿ ಭಜಂತ್ರಿ ಅವರು ದಾನಿಗಳನ್ನು ಸತ್ಕರಿಸಿ, ಸರಕಾರಿ ಶಾಲೆಗಳಿಗೆ ಇಂತಹ ಸೌಲಭ್ಯವನ್ನು ಒದಗಿಸಿದ ದಾನಿಗಳನ್ನು ಕೊಂಡಾಡಿ, ಕೃತಜ್ಞತೆಯನ್ನು ಸಲ್ಲಿಸಿದರು.ಸಂಜಯ ಪೋರವಾಲ ಅವರು ಅತಿಥಿಗಳಾಗಿ ಆಗಮಿಸಿದ್ದರು. ಕಿವುಡು ಮಕ್ಕಳ ಸರಕಾರಿ ಶಾಲೆಯ ಪತ್ರಾಂಕಿತ ಅಧೀಕ್ಷಕ/ ಸಹಾಯಕ ನಿರ್ದೇಶಕರಾದ ಆರ್. ಬಿ. ಬನಶಂಕರಿ, ವಂಟಮುರಿ ಸರಕಾರಿ ಪ್ರೌಢಶಾಲೆ ಪ್ರಧಾನ ಗುರುಮಾತೆ ಸವಿತಾ ಹಲಕಿ, ಕಣಬರ್ಗಿ ಸರಕಾರಿ ಪ್ರೌಢಶಾಲೆ ಪ್ರಧಾನ ಗುರುಮಾತೆ ರೇಖಾ ನಾಯಿಕ, ಮಹಾಂತೇಶ ನಗರ ಸರಕಾರಿ ಪ್ರೌಢಶಾಲೆ ಪ್ರಧಾನ ಗುರುಮಾತೆ ಊರ್ಮಿಳಾ ವಿಭೂತಿಯವರು ದಾನಿಗಳಿಂದ, ಅತಿಥಿ ಹಾಗೂ ಅಧ್ಯಕ್ಷರಿಂದ ಥರ್ಮಾಲ್ ಸ್ಕ್ಯಾನಿಂಗ್ ಉಪಕರಣಗಳನ್ನು ಸ್ವೀಕರಿಸಿದರು.

 

ಶಿಕ್ಷಣ ಸಂಯೋಜಕರಾದ ಗೀತಾ ತಿಗಡಿ, ಗುರುಮಾತೆ ಭಾರತಿ ಮಗದುಮ್ಮ್ ಹಾಗೂ ಬಿ.ಇ.ಓ ಕಚೇರಿಯ ಗಡೆನ್ನವರ ಮೇಡಂ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆರ್. ಬಿ. ಬನಶಂಕರಿ ಅವರು ಸರ್ವರನ್ನು ಸ್ವಾಗತಿಸಿ, ವಂದನಾರ್ಪಣೆ ಸಲ್ಲಿಸಿದರು.