ರಸ್ತೆ ಬದಿಯ ಹಳ್ಳಕ್ಕೆ ಟೆಂಪೋ ಟ್ರಾವೆಲರ್ ಉರುಳಿ ಬಿದ್ದ ಪರಿಣಾಮ ಮೂವರು ಮೃತ

0

ಚಾಮರಾಜನಗರ, ಜ. 8- ರಸ್ತೆ ಬದಿಯ ಹಳ್ಳಕ್ಕೆ ಟೆಂಪೋ ಟ್ರಾವೆಲರ್ ಉರುಳಿ ಬಿದ್ದ ಪರಿಣಾಮ ಮೂವರು ಮೃತಪಟ್ಟ ದಾರುಣ ಘಟನೆ ತಾಲೂ ಕಿನ ಸುವರ್ಣಾವತಿ ಜಲಾಶಯದ ಸಮೀಪ ಶುಕ್ರವಾರ ಬೆಳಗ್ಗೆ ನಡೆದಿದೆ..

ಈ ಟಿಟಿ ವಾಹನ ತಮಿಳುನಾಡಿನ ತಿರುಪೂರ್ನಿಂದ ಮೈಸೂರಿಗೆ ಬರುತ್ತಿದ್ದಾಗ ನಡೆದ ಘಟನೆಯಲ್ಲಿ ಇತರೆ 11 ಜನರಿಗೆ ಗಾಯಗಳಾಗಿವೆ ಎಂದು ಪೊಲಿಸ್ ಮೂಲಗಳು ಹೇಳಿವೆ.

ಮೃತಪಟ್ಟವರನ್ನು ತಮಿಳುನಾಡಿನ ತಿರುಪೂರಿನ ಕನಕಪಾಳ್ಯಂ, ಕಸ್ತೂರುಬಾಯಿ ನಗರದ ದಂಪತಿ ಸುಬ್ರಹ್ಮಣ್ಯ (75), ಅಮರಾವತಿ (65) ಎಂದು ಗುರುತಿಸಲಾಗಿದ್ದು, ಇವರ 35 ವರ್ಷದ ಮಗಳು ಮೃತಪಟ್ಟಿದ್ದು, ಈಕೆಯ ಹೆಸರು ತಿಳಿದು ಬಂದಿಲ್ಲ.