ಹಲವು ದಾಖಲೆ ಬರೆದ ಕೆಜಿಎಫ್-2 ಟೀಸರ್

0

ಬೆಳಗಾವಿ:   ನಟ ಯಶ್ ಹುಟ್ಟಿದ ದಿನವಾದ ಇಂದು (ಜ.8)ಬಿಡುಗಡೆಯಾಗಬೇಕಿದ್ದ  ಕನ್ನಡದ ಬಹುನಿರೀಕ್ಷಿತ ಕೆಜಿಎಫ್ ಚಾಪ್ಟರ್-2 ಚಿತ್ರದ ಟೀಸರ್  ಹಲವು ಕಾರಣಗಳಿಂದ ನಿನ್ನೆ ರಾತ್ರಿಯೇ ಬಿಡುಗಡೆಯಾಗಿದೆ.  ಇದೀಗ  ಈ ಟೀಸರ್ ಹಲವು ದಾಖಲೆಗಳನ್ನು ಬರೆದಿದೆ.

ಕೆಜಿಎಫ್ ಚಾಪ್ಟರ್ 2 ಟೀಸರ್ ಬಿಡುಗಡೆಯಾಗಿ ಕೇವಲ 10 ಗಂಟೆ 30 ನಿಮಿಷದಲ್ಲಿ ಎರಡು ಮಿಲಿಯನ್ ಯೂಟ್ಯೂಬ್ ಲೈಕ್ಸ್ ಪಡೆದಿದೆ. ಅತೀ ವೇಗವಾಗಿ ಯೂಟ್ಯೂಬ್ ನಲ್ಲಿ ಎರಡು ಮಿಲಿಯನ್ ಲೈಕ್ ಪಡೆದ ಭಾರತದ ಮೊದಲ ಟೀಸರ್ ಎಂಬ ದಾಖಲೆಗೆ ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರ ಪಾತ್ರವಾಗಿದೆ.

ಕೆಜಿಎಫ್ ಚಾಪ್ಟರ್ 2 ಟೀಸರ್ ಮಾಸ್ಟರ್, ಸರ್ಕಾರ್, ಆರ್ ಆರ್ ಆರ್ ನ ರಾಮರಾಜು ಫಾರ್ ಭೀಮ್ ಮತ್ತು ಮರ್ಸಲ್ ದಾಖಲೆಗಳನ್ನು ಪುಡಿಗಟ್ಟಿದೆ.

ಚಿತ್ರದ ಟೀಸರ್ ಗುರುವಾರ ರಾತ್ರಿ 9.29ಕ್ಕೆ ಬಿಡುಗಡೆಯಾಗಿದ್ದು, ಕೇವಲ 14 ಗಂಟೆಯಲ್ಲಿ 20 ಮಿಲಿಯನ್ ವೀಕ್ಷಣೆಯಾಗಿದೆ. ಯೂಟೂಬ್ ಟ್ರೆಂಡಿಂಗ್ ನಂ 1 ರಲ್ಲಿದ್ದು, 24 ಗಂಟೆಯಲ್ಲಿ ಅತೀ ಹೆಚ್ಚು ವೀಕ್ಷಣೆ ಪಡೆದ ಟೀಸರ್ ಎಂಬ ದಾಖಲೆಯತ್ತ ಯಶ್ ಅವರ ಕೆಜಿಎಫ್ ಚಾಪ್ಟರ್ 2 ಮುನ್ನುಗ್ಗುತ್ತಿದೆ.

 ಕೆಜಿಎಫ್-2ಕನ್ನಡ ಚಿತ್ರರಂಗನಟ ಯಶಟೀಸರ್