ಅಕ್ರಮ ಮದ್ಯ ಸೇವಿಸಿ 7ಕ್ಕೂ ಹಚ್ಚು ಮಂದಿ ಅಸ್ವಸ್ಥರಾಗಿರುಲವ ಐವರು ಮೃತ ಘಟನೆ

0

ಬುಲಹಂದ್ಶೆಹರ್: ಉತ್ತರಪ್ರದೇಶದ ಬುಲಹಂದ್ಶೆಹರ್ ನಲ್ಲಿ ಅಕ್ರಮ ಮದ್ಯ ಸೇವಿಸಿ ಐವರು ಮೃತಪಟ್ಟು, 7ಕ್ಕೂ ಹಚ್ಚು ಮಂದಿ ಅಸ್ವಸ್ಥರಾಗಿರುಲವ ಘಟನೆ ಶುಕ್ರವಾರ ನಡೆದಿದೆ.

ಈ ಕುರಿತು ಬುಲಂದ್ ಶೆಹರ್ ಜಿಲ್ಲಾ ಮ್ಯಾಜಿಸ್ಟ್ರೇಟ್ ರವೀಂದ್ರ ಕುಮಾರ್ ಅವರು ಮಾಹಿತಿ ನೀಡಿದ್ದು, ಅಕ್ರಮ ಸೇವನೆ ಮಾಡಿ 5 ಮಂದಿ ಸಾವನ್ನಪ್ಪಿದ್ದು, ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಪ್ರಸ್ತುತ ಅಸ್ವಸ್ಥರಾಗಿ ಆಸ್ಪತ್ರೆಗೆ ಸೇರಿರುವವರಿಗೆ ಚಿಕಿತ್ಸೆ ನೀಡುವುದು ನಮ್ಮ ಆದ್ಯತೆಯಾಗಿದೆ. 16 ಮಂದಿಗೆ ಡಯಾಲಿಸಿಸ್ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಹೊರಗಿನಿಂದ ಬಂದ ವ್ಯಕ್ತಿಯೊಬ್ಬ ವಿಷಪೂರಿತ ಮದ್ಯವನ್ನು ಮಾರಾಟ ಮಾಡಿದ್ದ ಎಂದು ಪ್ರತ್ಯಕ್ಷದರ್ಶಿಗಳು ಹೇಳಿಕೆ ನೀಡಿದ್ದಾರೆ. ಈ ಸಂಬಂಧ ಮದ್ಯದಂಗಡಿಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ ಎಂದಿದ್ದಾರೆ.