ಗೋಹತ್ಯೆಕ್ಕಿಂತ ಅಸ್ಪೃಶ್ಯತೆ ಹೋಗಲಾಡಿಸುವುದು ಮುಖ್ಯ: ಸಂಸದ ವಿ.ಶ್ರೀನಿವಾಸ‍ಪ್ರಸಾದ್

0

ಮೈಸೂರು: ಗೋಹತ್ಯೆ ನಿಷೇಧಕ್ಕಿಂತ ಮೊದಲು   ಅಸ್ಪೃಶ್ಯತೆ ತೊಡೆದು ಹಾಕುವ ಕುರಿತು ರಾಜ್ಯ ಸರ್ಕಾರ ಗಂಭೀರ ಕ್ರಮಗಳನ್ನು ಕೈಗೊಳ್ಳಬೇಕಿತ್ತು ಎಂದು ಸಂಸದ ವಿ.ಶ್ರೀನಿವಾಸ‍ಪ್ರಸಾದ್ ಇಲ್ಲಿ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.‌

ಆಹಾರ ಪದ್ಧತಿ ತೀರಾ ವೈಯಕ್ತಿಕವಾದದ್ದು. ಸಸ್ಯಾಹಾರಿಗಳು ಮಾಂಸಾಹಾರಿಗಳಾಗುತ್ತಾರೆ,

ಮಾಂಸಾಹಾರಿಗಳು ಸಸ್ಯಾಹಾರಿಗಳಾಗುತ್ತಾರೆ. ಇದಕ್ಕಿಂತಲೂ ಹೆಚ್ಚಾಗಿ ಅಸಮಾನತೆಯನ್ನು ಹೋಗಲಾಡಿಸಲು ಸರ್ಕಾರ ಪ್ರಯತ್ನಿಸಬೇಕು.

ಈ ಕುರಿತು ಈ ಹಿಂದೆಯೇ ವಿಧಾನಸಭೆಯಲ್ಲಿ ವಿವರವಾಗಿ ಭಾಷಣ ಮಾಡಿದ್ದೆ ಎಂದು  ಸಂಸದ ವಿ.ಶ್ರೀನಿವಾಸ‍ಪ್ರಸಾದ್ ಹೇಳಿದರು.‌