ಕಾವ್ಯವು ಹೊಸ ಸಂವೇದನೆಗಳಿಂದ ಕೂಡಿರಬೇಕು.

0

 

ಕಾವ್ಯವು ಹೊಸ ಸಂವೇದನೆಗಳಿಂದ ಕೂಡಿರಬೇಕು.ಅದು ಸದಾಜನಪರವಾಗಿರಬೇಕು.ಬದುಕಿನಎಲ್ಲ ಮಗ್ಗುಲಗಳನ್ನು ಪಾರದರ್ಶಕವಾಗಿ ಅನಾವರಣಗೊಳಿಸಬೇಕು.ಜಾಗತಿಕ ಸಂವೇದನೆಗಳ ಕಾವ್ಯಾಶಯಗಳನ್ನು ಹೊಂದಿರಬೇಕು ಹಾಗೂಅದುಬದ್ಧತೆಯಿಂದಕೂಡಿದ್ದಾಗ ಮಾತ್ರಕಾವ್ಯ ಹೊಸ ಪಥವನ್ನು ನಿರ್ಮಿಸಲು ಸಾಧ್ಯವಾಗುತ್ತದೆಎಂದು ಶಿವರಾಜ ಬೆಟ್ಟದೂರಮಾತನಾಡಿದರು.ಅವರುರಾಣಿಚನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಭಾಷಾಅಧ್ಯಯನ ಸಂಸ್ಥೆಯು ಏರ್ಪಡಿಸಿದ್ದ ಆನ್‍ಲೈನ್‍ಕವಿಗೋಷ್ಠಿಯಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು.ಅಲ್ಲದೇ ವೈವಿಧ್ಯಮಯ ಕವಿತೆಗಳು ನಾಡಿನಕಾವ್ಯ ಪ್ರತಿಭೆಯಜೀವಂತಿಕೆಎಂದುಅಭಿಪ್ರಾಯಪಟ್ಟರು.

ಇಂದಿನ ಕವಿಗೋಷ್ಠಿಯನ್ನು ಉದ್ಘಾಟಿಸಿದ ವಿಶ್ವವಿದ್ಯಾಲಯದಕುಲಪತಿಗಳಾದ ಪ್ರೊ.ಎಂ.ರಾಮಚಂದ್ರಗೌಡರು ಹೊಸತಲೆಮಾರಿನ ತಲ್ಲಣಗಳನ್ನು ಕಾವ್ಯ ಸಂವೇದನೆಗೆಳನ್ನು ಕಟ್ಟಿಕೊಡಬೇಕು.ಪ್ರಜಾಸತ್ತಾತ್ಮಕ ವ್ಯವಸ್ಥೆಯಜೊತೆಗೆಬೌದ್ಧಿಕ ಸ್ವಾತಂತ್ರ್ಯವನ್ನು ನಿರ್ಭಿಡೆಯಿಂದಕಾವ್ಯವುಅಭಿವ್ಯಕ್ತಿಸಬೇಕು.ಪ್ರಸ್ತುತಇಂದುಜಿಲ್ಲೆಗೊಬ್ಬರಂತೆಆಯ್ಕೆಯಾಗಿ ಪ್ರಸ್ತುತಪಡಿಸುತ್ತಿರುವಕವಿಗಳು ನಮ್ಮ ನಡುವಿರುವಕಾವ್ಯ ಸಂಪತ್ತಿನ ಪ್ರತೀಕವೆಂದುಅಭಿಪ್ರಾಯಪಟ್ಟರು.

ಆಶಯನುಡಿಗಳನ್ನಾಡಿದ ಪ್ರೊ.ಎಸ್.ಎಂ.ಗಂಗಾಧರಯ್ಯಅವರುಇಂದಿನ ಕಾವ್ಯವು ಪ್ರತಿಮೆ, ರೂಪಕ, ಉಪಮೆಗಳನ್ನಾಧರಿಸಿ ಅಭಿವ್ಯಕ್ತಿಯಾಗುತ್ತದೆ.ಬೇಂದ್ರೆ ಮತ್ತುಅಡಿಗರಕಾವ್ಯ ಮಾರ್ಗವು ನಮಗೆಆದರ್ಶ ಕಾವ್ಯಮಾರ್ಗಗಳಾಗಿ ನಿಂತಿವೆ. ಇಂದುಅಭಿವ್ಯಕ್ತಿಸಬಲ್ಲ ಕಾವ್ಯವುಕಾವ್ಯಗುಣಗಳಿಂದ ಮತ್ತು ಸಂವೇದನಾತ್ಮಕವಾಗಿ ಹೊಸಯುಗದ ತಲ್ಲಣಗಳನ್ನು ದಾಖಲಿಸಬಲ್ಲ ಪ್ರತಿಧ್ವನಿಗಳಾಗಿವೆ ಎಂದು ಹೇಳಿದರು.ಕವಿಗೋಷ್ಠಿಯನ್ನು ಆಯೋಜಿಸಿದ ಡಾ.ಶೋಭಾ ನಾಯಕಅವರು ಪ್ರಸ್ತಾವಿಕವಾಗಿ ಮಾತನಾಡಿಎಲ್ಲ ಕವಿಗಳನ್ನು ಆನ್‍ಲೈನ್‍ನಲ್ಲಿ ಸ್ವಾಗತಿಸಿಕೊಂಡರು.ಈ ಸಂದರ್ಭದಲ್ಲಿ ಮಾತನಾಡಿದಅವರುವಿಶ್ವವಿದ್ಯಾಲಯದಆವರಣಕ್ಕೆ ಬಂದು ಕವಿತೆಗಳನ್ನು ಪ್ರಸ್ತುತಪಡಿಸಬೇಕಾಗಿತ್ತು.

ಆದರೆಕಾಲದ ಸೂಕ್ಷ್ಮತೆಯನ್ನು ಹಾಗೂಧಾವಂತದ ಬದುಕಿನಕ್ರಮದ ಹಿನ್ನೆಲೆಯಲ್ಲಿಆನ್‍ಲೈನ್ ಹೆಚ್ಚು ಸೂಕ್ತವೆನಿಸಿದ ಹಿನ್ನೆಲೆಯಲ್ಲಿ ವರ್ಚುಯಲ್ ಆಗಿ ಕವಿಗೋಷ್ಠಿ ಆಯೋಜಿಸಿದ್ದೇವೆ ಎಂದರು.


ಇಂದು ಮತ್ತು ನಾಳೆ ನಡೆಯುವಎರಡು ದಿನಗಳ ಈ ಕವಿಗೋಷ್ಠಿ ಎಲ್ಲಾಜಿಲ್ಲೆಯವರನ್ನು ಒಳಗೊಂಡಿದೆ.ದಕ್ಷಿಣಕನ್ನಡದಿಂದ ವಿಲ್ಸನ್‍ಕಟೀಲ, ಹಾಸನದಿಂದಸುನಿತಾ ಹೆಬ್ಬಾರ, ಚಿಕ್ಕಮಗಳೂರಿನಿಂದ ಪ್ರೇಮ ಸಾಗರ, ಧಾರವಾಡದಿಂದ ಭಾಗ್ಯವತಿಗುಡಗೇರಿ, ದಾವಣಗೆರಿಯಿಂದ ಕೈದಾಳ ಕೃಷ್ಣಮೂರ್ತಿ, ಬಳ್ಳಾರಿಯಿಂದ ರಾಮಪ್ಪ ಕೋಟಿಹಾಳ, ಮಂಡ್ಯದಿಂದ ಸ್ಫೂರ್ತಿ ಹರವು, ಕಲಬುರ್ಗಿಯಿಂದ ಮಧು ಬಿರಾದಾರ, ಬೀದರ್ ನಿಂದ ಸ್ನೇಹಲತಾ ಗೌನಳ್ಳಿ, ರಾಯಚೂರಿನಿಂದರವಿ ಹಂಪಿ, ಹಾವೇರಿಯಿಂದ ಮಾಲತಿ ಭಟ್ಟಉಡುಪಿಯಿಂದಇಂದುಚೇತನ ಬೋರುಗಡ್ಡೆ, ಕಾಸರಗೋಡಿನಿಂದಅಕ್ಷತಾರಾಜ್ ಪೆರ್ಲಇಂದುಕಾವ್ಯವನ್ನು ಪ್ರಸ್ತುತಪಡಿಸಿದರು.

ನಾಳೆ ಉತ್ತರಕನ್ನಡಜಿಲ್ಲೆಯಿಂದಅಕ್ಷತಾಕೃಷ್ಣಮೂರ್ತಿ, ವಿಜಯಪುರದಿಂದ ಸುಮಿತ್ ಮೇತ್ರಿ, ತುಮಕೂರಿನಿಂದ ಸ್ಮಿತಾ ಮಾಕಳ್ಳಿ, ಬಾಗಲಕೋಟೆಯಿಂದಕಿರಸೂರಗಿರಿಯಪ್ಪ, ಮೈಸೂರಿನಿಂದ ಶೃತಿ ಬಿ.ಆರ್, ಬೆಳಗಾವಿಯಿಂದ ನದೀಮ ಸನದಿ, ಕೊಡಗಿನಿಂದ ಸ್ಮಿತಾ ಅಮೃತರಾಜ, ಚಿತ್ರದುರ್ಗದಿಂದಎಸ್‍ಕುಮಾರ, ಚಹಿಕ್ಕಬಳ್ಳಾಪುರದಿಂದ ಆಶಾಜಗದೀಶ, ಕೊಪ್ಪಳದಿಂದ ಮೆಹಬೂಬ ಮಠದ, ರಾಮನಗರದಿಂದ ದುಡ್ಡನಹಳ್ಳಿ ಮಂಜುನಾಥ, ಬೆಂಗಳೂರು ನಗರದಿಂದ ವಿದ್ಯಾರಶ್ಮಿ, ಕೋಲಾರದಿಂದಗಂಗಪ್ಪ ತಳವಾರ,

ಚಹಾಮನಗರದಿಂದ ಮಾಲತಿ ಶಶಿಧರ್, ಯಾದಗಿರಿಯಿಂದ ಮರಲಿಂಗ, ಗದಗಿನಿಂದ ಕಳಕೇಶ ಗುಡ್ಲಾಪೂರಕಾವ್ಯ ವಾಚನ ಮಾಡುವರು. ನಾಳೆ ಸಮಾರೋಪ ಭಾಷಣವನ್ನು ಮಾಡಲಿರುವ ವ್ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದಡಾ.ನೀತಾರಾವ್‍ಅವರು

ಮಾಡುವರು.ನಾಳಿನ ಗೋಷ್ಠಿಯಅಧ್ಯಕ್ಷತೆಯನ್ನುತಾರಿಣಿ ಶುಭದಾಯಿನಿ ವಹಿಸುವರು.ಅಧ್ಯಾಪಕರುಗಳಾದ ಡಾ.ಗಜಾನನ ನಾಯ್ಕ, ಡಾ.ಮಹೇಶಗಾಜಪ್ಪನವರ, ಡಾ.ಮೈತ್ರೇಯಿಣಿಗದಿಗೆಪ್ಪಗೌಡರ, ಹಾಗೂಡಾ.ಪಿ ನಾಗರಾಜಉಪಸ್ಥಿತರಿರುವರು.ಶ್ರೀ. ಫಕೀರಪ್ಪ ಸೊಗಲದಅವರುತಾಂತ್ರಿಕ ನೆರವನ್ನು ನೀಡಿದರು.ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಗೋಷ್ಠಿಯಲ್ಲಿ ಭಾಗವಹಿಸಿದ್ದರು.ನಾಳಿನ ಗೋಷ್ಠಿಯು ಬೆಳಗಿನ 11.00 ಗಂಟೆಯಿಂದಆರಂಭವಾಗಲಿದೆ.