ಅಭಯ ಪಾಟೀಲರಿಂದ ಬಹಿರಂಗ ಸವಾಲ್…ಎಂಈಎಸ್ ನಾಯಕನ ಕಂಗಾಲ್…!!!

0

ಬೆಳಗಾವಿ- ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಎದುರು,ಎಂಈಎಸ್ ನಾಯಕರು ಹೈಡ್ರಾಮಾ ನಡೆಸಿ ಮುಖಭಂಗ ಕ್ಕೊಳಗಾದ ಘಟನೆ ಬೆಳಗಾವಿಯ ಪಾಲಿಕೆಯ ಸಭಾಂಗಣದಲ್ಲಿ ನಡೆಯಿತು.

ಸಚಿವ ಭೈರತಿ ಬಸವರಾಜ್ ಅವರು ಸ್ಮಾರ್ಟ್ ಸಿಟಿ ಕಾಮಗಾರಿಗಳ ಪ್ರಗತಿ ಪರಶೀನೆ ನಡೆಸಿದ ಬಳಿಕ ಮಾಜಿ ನಗರ ಸೇವಕರ ಸಂಘ ಸಚಿವರಿಗೆ ಮನವಿ ಅರ್ಪಿಸಲು ವೇದಿಕೆ ಏರಿತು,ಬೆಳಗಾವಿ ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕಳಪೆ ಕಾಮಗಾರಿಗಳು ನಡೆಯುತ್ತಿವೆ ಎಂದು ಎಂಈಎಸ್ ಮಾಜಿ ಮೇಯರ್ ನಾಗೇಶ್ ಸಾತೇರಿ ಹೋಲ್ ಸೇಲ್ ಆರೋಪ ಮಾಡಿದರು.

ಈ ಸಂಧರ್ಭದಲ್ಲಿ ಮದ್ಯಪ್ರವೇಶಿಸಿದ ಶಾಸಕ ಅಭಯ ಪಾಟೀಲ,ಕಳಪೆ ಕಾಮಗಾರಿ,ಎಲ್ಲಿ ಹೇಗೆ ನಡೆಯುತ್ತಿದೆ ಎಂದು ಫೆಸಪಿಕ್ ಆಗಿ ಹೇಳಿ ಸುಮ್ಮನೇ ಆರೋಪ ಮಾಡಬೇಡಿ ಎಂದಾಗ ಎಂಈಎಸ್ ಮಾಜಿ ಮೇಯರ್ ನಾಗೇಶ ಸಾತೇರಿ ನೀವು ಸುಮ್ಮನಿರೀ ಎಂದು ಅಭಯ ಪಾಟೀಲರಿಗೆ ಹೇಳಿದಾಗ ಶಾಸಕ ಅಭಯ ಪಾಟೀಲ ನನಗೆ ಸುಮ್ಮನೀರು ಅಂತೀಯಾ,ಎಂದು ಮಾಜಿ ಮೇಯರ್ ಸಾತೇರಿಯನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಾಗ ಎಂಈಎಸ್ ನಾಯಕ ಸಾತೇರಿ ಅಲ್ಲಿಂದ ಜಾಗ ಖಾಲಿ ಮಾಡಿದ್ರು

ಈ ಸಂಧರ್ಭದಲ್ಲಿ ಮಾತನಾಡಿ ಶಾಸಕ ಅಭಯ ಪಾಟೀಲ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳು ಎಲ್ಲ ಕಡೇ ಸರಿಯಾಗಿ ನಡೆಯುತ್ತಿವೆ ಎಂದು ನಾವೂ ಹೇಳುತ್ತಿಲ್ಲ,ಕೆಲವು ಕಡೆ ಸಮಸ್ಯೆ ಆಗಿದ್ದು ನಿಜ ಆದ್ರೆ ಎಲ್ಲ ಕಡೆ ಕಳಪೆ ಕಾಮಗಾರಿ ನಡೆಯುತ್ತಿವೆ ಎಂದು ಸಾಮಾನ್ಯವಾಗಿ ಆರೋಪ ಮಾಡುವದು

ಸರಿಯಲ್ಲ,ಫೆಸಪಿಕ್ ಆಗಿ ಎಲ್ಲಿ ಕಳಪೆ ಕಾಮಗಾರಿ ನಡೆಯುತ್ತಿದೆ ಹೇಳಿ,ಬೆಳಗಾವಿಯ ಇಬ್ಬರೂ ಶಾಸಕರು ಅಲ್ಲಿಗೆ ಬರ್ತೇವಿ,ನೀವು ಹೇಳಿದ ಸಂಸ್ಥೆಯಿಂದಲೇ ಥರ್ಡ್ ಪಾರ್ಟಿ ಇನಸ್ಪೆಕ್ಷನ್ ಮಾಡಸ್ತೀವಿ,ನಿಜಬವಾಗಿಯೂ ಕಳಪೆ ಕಾಮಗಾರಿ ನಡೆದಿದ್ದು ಸಾಭೀತಾದರೆ ಸ್ಥಳದಲ್ಲೇ ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಶಾಸಕ ಅಭಯ ಪಾಟೀಲ ಚಾಲೇಂಜ್ ಮಾಡಿದ ಬಳಿಕ ಮಾಜಿ ನಗರ ಸೇವಕರ ಗುಂಪು ಟ್ಯುನ್ ಚೇಂಜ್ ಮಾಡಿತು..

ಶಾಸಕ ಅಭಯ ಪಾಟೀಲ್ ಮಾಜಿ ನಗರಸೇವಕರಿಗೆ ಬಹಿರಂಗ ಸವಾಲು ಹಾಕಿದ ಬಳಿಕ,ಸಚಿವ ಭೈರತಿ ಬಸವರಾಜ್ ಏನೇ ಸಮಸ್ಯೆ ಇದ್ದರೂ ಅದಕ್ಕೆ ಸ್ಪಂದಿಸುತ್ತೇವೆ ಎಂದು ಭರವಸೆ ನೀಡುವ ಮೂಲಕ ವಾಕ್ ವಾರ್ ಗೆ ವಿರಾಮ ನೀಡಿದ್ರು‌…