ಕಸ ವಿಲೆವಾರಿ ವಿಷಯದಲ್ಲಿ ಕೆಲವು ತೊಂದರೆಗಳು ಆಗುತ್ತಿವೆ ಆದಷ್ಟು ಬೇಗನೆ ಅವುಗಳನ್ನು ಸರಿಪಡಿಸಿಕೊಳ್ಳುವ ಕಾರ್ಯ ಮಾಡಬೇಕು ಎಂದು ಶಾಸಕ ಮಹಾಂತೇಶ ದೊಡ್ಡಗೌಡರ ಅಧಿಕಾರಿಗಳನ್ನು ತರಾಟೆಗೆ

0

ಚನ್ನಮ್ಮನ ಕಿತ್ತೂರು: ಸ್ಥಳೀಯ ಪಟ್ಟಣ ಪಂಚಾಯತ ಆವರಣದಲ್ಲಿ ಇರುವ ಸಭಾ ಭವನದಲ್ಲಿ ಜ 8 ರಂದು ಚನ್ನಮ್ಮನ ಕಿತ್ತೂರು ಪಟ್ಟಣ ಪಂಚಾಯತ ಸಾಮಾನ್ಯ ಸಭೆ ಜರುಗಿತು.

ಪಟ್ಟಣ ಪಂಚಾಯತ ಸದಸ್ಯರು ಹೇಳಿದ ಅಭಿವೃದ್ಧಿ ಕೆಲಸವನ್ನು ಚಾಚು ತಪ್ಪದೆ ಮಾಡಬೇಕು ಮತ್ತು ಕಿತ್ತೂರು ಪಟ್ಟಣದಲ್ಲಿ ಕಸ ವಿಲೆವಾರಿ ವಿಷಯದಲ್ಲಿ ಕೆಲವು ತೊಂದರೆಗಳು ಆಗುತ್ತಿವೆ ಆದಷ್ಟು ಬೇಗನೆ ಅವುಗಳನ್ನು ಸರಿಪಡಿಸಿಕೊಳ್ಳುವ ಕಾರ್ಯ ಮಾಡಬೇಕು ಎಂದು ಶಾಸಕ ಮಹಾಂತೇಶ ದೊಡ್ಡಗೌಡರ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಈ ವೇಳೆ 2020-21 ನೇ ಸಾಲಿನಲ್ಲಿ 15 ನೇ ಹಣಕಾಸು ಯೋಜನೆಯಡಿ ಕರೆದ ಟೆಂಡರ ದರಗಳಿಗೆ ಅನುಮೋದನೆ ನೀಡುವ, ಪ.ಪಂ ಮಾಲಿಕತ್ವದ ಎಂಟು ವಾಣಿಜ್ಯ ಮಳಿಗೆಗಳ ಲೀಲಾವು ದರಗಳ ಮಂಜೂರಿ, ಆಸ್ತಿಕರ ವಸೂಲಾತಿ ಮತ್ತು ಆಸ್ತಿಕರ ವಸೂಲಾತಿ ಕುರಿತು ಸಾರ್ವಜನಿಕರಿಂದ ತಕರಾರು ಅರ್ಜಿ, ಸ್ಥಾಯಿ ಸಮಿತಿ ರಚಿಸುವ ಕುರಿತು, ಅಧ್ಯಕ್ಷರ ಅಪ್ಪನೆ ಮರೆಗೆ ಇನ್ನಿತರ ವಿಷಯಗಳ ಕುರಿತು ಮತ್ತು 2021 ಸಾಲಿಗೆ ಅಗತ್ಯ ಇರುವ ನೀರು, ರಸ್ತೆ, ಚರಂಡಿಗಳ ಕುರಿತು ಚರ್ಚಿಸಲಾಯಿತು.

ಈ ವೇಳೆ ಪಟ್ಟಣದಲ್ಲಿ ಇರುವ ಅನಧಿಕೃತ ನಳಗಳನ್ನು ಬಂದ ಮಾಡಬೇಕು ಮತ್ತು ನೀರು ಸಾಕಾದ ನಂತರ ನಲ್ಲಿಯನ್ನು ಬಂದು ಮಾಡದೆ ಹಾಗೆ ನೀರು ಬಿಟ್ಟಿರುತ್ತಾರೆ ಹಾಗೆ ಬಿಡದೆ ಅವುಗಳಿಗೆ ನಳ ಅಳವಡಿಸಿ ನಲ್ಲಿಯನ್ನು ಬಂದ ಮಾಡಲು ಸಾರ್ವಜನಜಕರಿಗೆ ತಿಳಿಸಬೇಕು ಎಂದು ಸದಸ್ಯರು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಕಿರಣ ವಾಳದ ಅವರನ್ನು ಸ್ಥಾಯಿ ಸಮಿತಿ ಅಧ್ಯಕ್ಷನನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು ಮತ್ತು ಬೆಳಗಾವಿ ಡಿ.ಸಿ.ಸಿ ಬ್ಯಾಂಕನ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾದ ಶಾಸಕ ಮಹಾಂತೇಶ ದೊಡ್ಡಗೌಡರ ಅವರನ್ನು ಪ.ಪಂ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಈ ವೇಳೆ ಪ.ಪಂ. ಅಧ್ಯಕ್ಷ ಹಣುಮಂತ ಲಂಗೋಟಿ, ಉಪಾದ್ಯಕ್ಷೆ ಶೋಭಾ ದರ್ಶಿ, ಸರ್ವ ಸದಸ್ಯರು, ಬೆಳಗಾವಿ ಸ್ಲಂ ಬೋರ್ಡ ಎಇಇ ಬಿ.ಎಸ್. ಶಂಬುಲಿಂಗಪ್ಪ, ಮಖ್ಯಾಧಿಕಾರಿ ಪ್ರಕಾಶ ಮಠದ, ಅಭಿಯಂತರ ರವೀಂದ್ರ ಗಡಾದ, ಸಿಬ್ಬಂದಿ ಸೇರಿದಂತೆ ಇನ್ನೂ ಅನೇಕರು ಸಾಮಾನ್ಯ ಸಭೆಯಲ್ಲಿ ಇದ್ದರು.