ಗ್ರಾಮದ ಅಭಿವೃದ್ಧಿಗೆ ಮಾಡಲು ನೂತನ ಸದಸ್ಯರು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ನಿವೃತ್ತ ಶಿಕ್ಷಕ ಪ್ರಕಾಶ ಕೊಳದೂರ

0

 

ಬೈಲಹೊಂಗಲ- ಗ್ರಾಮದ ಅಭಿವೃದ್ಧಿಗೆ ಮಾಡಲು ನೂತನ ಸದಸ್ಯರು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ನಿವೃತ್ತ ಶಿಕ್ಷಕ ಪ್ರಕಾಶ ಕೊಳದೂರ ಹೇಳಿದರು.

ತಾಲೂಕಿನ ನೇಸರಗಿ ಗ್ರಾಮದ ಗ್ರಾ.ಪಂ ಗೆ ನೂತನವಾಗಿ 2 ನೇ ವಾರ್ಡಿನಿಂದ ಮಲ್ಲಿಕಾರ್ಜನ ಸೋಮನ್ನವರ, 3 ನೇ ವಾರ್ಡಿನಿಂದ ಆಯ್ಕೆಯಾದ ತೇಜಪ್ಪಗೌಡ ಪಾಟೀಲ ಇವರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿ, ಗ್ರಾ.ಪಂಯಿಂದ ಗ್ರಾಮ ಸುಧಾರಣೆಯಾಗಬೇಕೆಂದರೆ ಹೊಸದಾಗಿ ಆಯ್ಕೆಯಾದ ಸದಸ್ಯರು ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡು ಮುನ್ನೆಡೆದರೆ

ಗಾಂಧೀಜಿಯ ಗ್ರಾಮ ಸ್ವರಾಜ್ಯ ಮಾಡಲು ಸಾಧ್ಯವಿದೆ. ನೂತನ ಸದಸ್ಯರು ಅಭಿವೃದ್ಧಿಗೆ ಗಮನ ಹರಿಸಬೇಕೆಂದರು.

ಸನ್ಮಾನ ಸ್ವೀಕರಿಸಿದ ನೂತನ ಸದಸ್ಯರಾದ ತೇಜಪ್ಪಗೌಡ ಪಾಟೀಲ, ಮಲ್ಲಿಕಾರ್ಜುನ ಸೋಮನ್ನವರ ಮಾತನಾಡಿ, ಗ್ರಾಮದಲ್ಲಿಯ ಎಲ್ಲ ಸಮಸ್ಯೆಗಳನ್ನು ತಿಳಿದುಕೊಂಡು ಅಭಿವೃದ್ಧಿಗೆ ಪಣತೊಡುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಕುಂದರಗಿಯ ಮಾಜಿ ಉಪಾಧ್ಯಕ್ಷ ಶಿವಾನಂದ ತೋಟಗೇರ, ಗ್ರಾ.ಪಂ ಕಾರ್ಯದರ್ಶಿ ಲಕ್ಷ್ಮಣ ತಳವಾರ, ನಾಗಪ್ಪ ತಳವಾರ, ಸೋಮಪ್ಪ ಮಾಳನ್ನವರ, ಎಂ.ಟಿ.ಪಾಟೀಲ, ಶಂಕರೆಪ್ಪ ಮಲ್ಲಪ್ಪದವರ,

ಚಂದ್ರಕಾಂತ ಪಾಟೀಲ, ಸಂತೋಷ ಹಂಪನ್ನವರ, ಮಹಮ್ಮದಸಾ ಮುಲ್ಲಾ, ಮಹಮ್ಮದಅಲಿ ಬಾಗವಾನ, ಚನಗೌಡ ಪಾಟೀಲ, ನಿವೃತ್ತ ಪಿಡಿಓ ಸೋಮಪ್ಪ ಮಲ್ಲಪ್ಪದವರ, ಯಲ್ಲಪ್ಪ ರೊಟ್ಟಿ, ಚನ್ನಬಸಪ್ಪ ಹೊಂಡಪ್ಪನ್ನವರ, ಎಂ.ಎಸ್.ಪಾಟೀಲ,

ಮಹಾದೇವ ಮೆಣಸಿನಕಾಯಿ, ಮಾರುತಿ ಹುಡೇದ, ಬಸಪ್ಪ ಕಗ್ಗಣಗಿ, ಬಾಬು ಪಾಟೀಲ, ರಾಮನಗೌಡ ಚೋಬಾರಿ, ಮಲ್ಲೇಶ ಮಾಳನ್ನವರ, ಸಿದ್ದಪ್ಪ ಜ್ಯೋತಿ ಇತರರು ಪಾಲ್ಗೊಂಡಿದ್ದರು.
ಚೇತನ ಕೊಳದೂರ ಸ್ವಾಗತಿಸಿದರು. ಸಿ.ವೈ.ಮೆಣಶಿನಕಾಯಿ ವಂದಿಸಿದರು.