ಹಂಜಾ ಹುಸೇನ್ ರವರಿಗೆ ರಾಷ್ಟ್ರಪತಿಗಳ ಪೊಲೀಸ್ ಶ್ಲಾಘನೀಯ ಸೇವಾ ಪದಕ

0

ಬೆಳಗಾವಿ ಕೆಎಸ್‍ರ್‍ಪಿ 2ನೇ ಪಡೆ ಕಮಾಂಡೆಂಟ್ ಹಂಜಾ ಹುಸೇನ್ ಅವರಿಗೆ 2019ನೇ ಸಾಲಿನ ರಾಷ್ಟ್ರಪತಿಗಳ ಪೆÇಲೀಸ್ ಶ್ಲಾಘನೀಯ ಸೇವಾ ಪದಕ ಸಂದಿದೆ.


ಬೆಂಗಳೂರಿನ ರಾಜಭವನದಲ್ಲಿ ಕಳೆದ ಗುರುವಾರ ನಡೆದ ಕಾರ್ಯಕ್ರಮದಲ್ಲಿ  ರಾಜ್ಯಪಾಲ ವಜುಭಾಯಿ ವಾಲಾ ಅವರು ರಾಷ್ಟ್ರಪತಿಗಳ ಪೆÇಲೀಸ್ ಶ್ಲಾಘನೀಯ ಸೇವಾ ಪದಕ ಪ್ರದಾನ ಮಾಡಿದರು. ಮುಖ್ಯಮಂತ್ರಿ  ಬಿ.ಎಸ್.ಯಡಿಯೂರಪ್ಪ, ಗೃಹಸಚಿವ ಬಸವರಾಜ ಬೊಮ್ಮಾಯಿ ಮತ್ತಿತರರು ಇದ್ದರು.

ರಾಷ್ಟ್ರಪತಿಗಳ ಶ್ಲಾಘನೀಯ ಹಾಗೂ ವಿಶಿಷ್ಠ ಸೇವಾ ಪದಕಗಳನ್ನು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ರಾಜ್ಯಪಾಲ ವಜೂಭಾಯಿ ವಾಲಾ ರಾಜಭವನದಲ್ಲಿ  ಪ್ರದಾನ ಮಾಡಿದರು.
ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ನಿಸ್ವಾರ್ಥ ದಕ್ಷತೆ  ಹಾಗೂ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿ ರುವ  ಸೇವೆ ಗುರುತಿಸಿ ಬೆಳಗಾವಿ ಕೆಎಸ್‍ರ್‍ಪಿ 2ನೇ ಪಡೆ ಕಮಾಂಡೆಂಟ್ ಹಂಜಾ ಹುಸೇನ್ ಅವರು ರಾಷ್ಟ್ರಪತಿಗಳ ಪೆÇಲೀಸ್ ಶ್ಲಾಘನೀಯ ಪದಕಕ್ಕೆ ಭಾಜನರಾಗಿದ್ದಾರೆ ಇವರಿಗೆ ಪದಕ ಸಿಕ್ಕಿರುವದಕ್ಕೆ
ಪೊಲೀಸ್ ಅಧಿಕಾರಗಳು, ಸಿಬ್ಬಂದಿಗಳು, ಅವರ ಹಿತೈಷಿಗಳು, ಹಾಗೂ ರಾಜ್ಯದ ವಿವಿಧ ಸಂಘ- ಸಂಸ್ಥೆಗಳು ಹಾಗೂ ಸಾರ್ವಜನಿಕರು ಮೆಚ್ಚುಗೆ ಸೂಚಿಸಿ ಅಭಿನಂದಿಸಿದ್ದಾರೆ.

ಮೂಲತಃ ವಿಜಯಪುರ (ಬಿಜಾಪುರ) ಮೂಲದ ಹಂಜಾ ಹುಸೇನ್ ರವರ ತಂದೆ  ಎನ್.ಕೆ.ಡಖಾನಿ ಮತ್ತು ಜಮಿಲಾ.ಎನ್.ಡಖಾನಿ. ಹಂಜಾ ಹುಸೇನ್ ರವರು ಪ್ರಸ್ತುತ ಕೆ.ಎಸ್.ಆರ್.ಪಿ 2 ನೇ ಬಿ.ಎನ್ ನಲ್ಲಿ ಕಮಾಂಡೆಂಟ್  ಆಗಿ ಕೆಲಸ ಮಾಡುತ್ತಿದ್ದಾರೆ.

ವಿಶೇಷವೆಂದರೆ ಸೇವೆಗೆ ಸೇರುವ ಮೊದಲು, ಅವರು 1992 ರಿಂದ 2002 ರ ಅವಧಿಯಲ್ಲಿ ದೂರದರ್ಶನ ಮತ್ತು ಆಲ್ ಇಂಡಿಯಾ ರೇಡಿಯೋ (ಆಕಾಶವಾಣಿ) ಬೆಂಗಳೂರಿನಲ್ಲಿ ಕನ್ನಡ ನ್ಯೂಸ್ರೀಡರ್ ಆಗಿ ಅತ್ಯಂತ ಯಶಸ್ವಿಯಾಗಿ ಸೇವೆ ಸಲ್ಲಿಸಿದರು. ಕ್ರೀಡಾ ಮತ್ತು ಸಾಂಸ್ಕøತಿಕ ಚಟುವಟಿಕೆಗಳಲ್ಲಿ ನಿರೂಪಕರಾಗಿಯೂ ಸಹ
ಸೈ ಎನಿಸಿಕೊಂಡವರು.

ದಕ್ಷಿಣ ಭಾರತದ “ಕುಖ್ಯಾತ” ಅರಣ್ಯಗಳ್ಳ ವೀರಪ್ಪನ್ ಮತ್ತು ರಾಜ್ಯಗಳ ವಿವಿಧ ಭಾಗಗಳಲ್ಲಿನ ನಕ್ಸಲರ ವಿರುದ್ಧ ಅವರು ಮಾಡಿದ ಧೈರ್ಯಶಾಲಿ ಮತ್ತು ನಿಸ್ವಾರ್ಥ ಸೇವೆಗಳು ಎಲ್ಲರ ಮೆಚ್ಚುಗೆಯನ್ನು ಗಳಿಸಿವೆ. ಅವರು “ನ್ಯಾಷನಲ್ ಸೆಕ್ಯುರಿಟಿ ಗಾರ್ಡ್”  (ಹರಿಯಾಣ) ದಿಂದ “ಕಮಾಂಡೋ” ಆಗಿ ತರಬೇತಿ ಪಡೆದಿದ್ದಾರೆ ಮತ್ತು “ಆಂಟಿ ನಕ್ಸಲ್ ಕಾರ್ಯಾಚರಣೆಗಳು” ಮತ್ತು “ಗುಪ್ತಚರಕ್ಕೆ  ಸಂಬಂಧಿಸಿದ ಮಾಹಿತಿಯ ಸಂಗ್ರಹ” ದಲ್ಲಿ 6000 ಕ್ಕೂ ಹೆಚ್ಚು ಅಧಿಕಾರಿಗಳು / ಸಿಬ್ಬಂದಿಗೆ ಪರಿಣಾಮಕಾರಿ ತರಬೇತಿಯನ್ನು ನೀಡಿದ್ದಾರೆ.

ಹಲವಾರು ಸಂದರ್ಭಗಳಲ್ಲಿ ಪ್ರತಿಷ್ಠಿತ “ರಾಜ್ಯ,  ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವಿವಿಐಪಿಗಳ ಭದ್ರತೆ” ಗಾಗಿ ಅವರು ವಿಶೇಷವಾಗಿ ಕಾರ್ಯ ನಿರ್ವಹಿಸಿದ್ದಾರೆ.

ನಕ್ಸಲಿಸಮ್, ಭಯೋತ್ಪಾದನೆ, ಸೈಬರ್ ಅಪರಾಧ ಮತ್ತು ಗುಪ್ತಚರ ವಿಷಯಗಳಿಗೆ ಸಂಬಂಧಿಸಿದ ಅತ್ಯಂತ ಸವಾಲಿನ ವಿಷಯಗಳ ಕುರಿತು ಪುಸ್ತಕಗಳನ್ನು ಓದುವುದು ಮತ್ತು ವಿವಿಧ ಸರ್ಕಾರಿ ಇಲಾಖೆಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಉಪನ್ಯಾಸಗಳನ್ನು ನೀಡುವುದು ಮುಂತಾದ ವ್ಯಾಪಕವಾದ ಹವ್ಯಾಸಗಳ ಜೊತೆ  ಅವರ ಯಶಸ್ವಿ ಕತ್ರ್ಯವ್ಯ ನಿರ್ವಹಣೆ ಶ್ಲಾಘನೀಯ. ಹಂಜಾ ಹುಸೇನ್ ರವರ ಬಗ್ಗೆ ಹೇಳಿದಷ್ಟು
ಪುಟ ತುಂಬುತ್ತಲೇ ಇರುತ್ತದೆ, ಮುಂದಿನ ಸಂಚಿಕೆಗಳಲ್ಲಿ ಅವರ ಜೀವನಗಾಥೆಯನ್ನು ಪೂರ್ಣವಾಗಿ ನಿಮಗೆ ತಿಳಿಸುತ್ತೇವೆ.

ಸದ್ಯ ಈಗ ಇವರಿಗೆ ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕ ಸಿಕ್ಕಿರುವುದು  ಅವರ ತವರಾದ ವಿಜಯಪುರ ಜಿಲ್ಲೆಗೆ ಮತ್ತು
ಕರ್ತವ್ಯ ನಿರ್ವಹಿಸುತ್ತಿರುವ ಬೆಳಗಾವಿ ಜಿಲ್ಲೆಗೆ  ಹಾಗೂ ಪೊಲೀಸ್ ಇಲಾಖೆಗೆ ಹೆಮ್ಮೆ ಪಡುವ ವಿಷಯವಾಗಿದೆ. ಈ ಮೂಲಕ “ಬೆಳಗಾವಿ ವರದಿ” ಪತ್ರಿಕೆ  ಹಾಗೂ ನ್ಯೂಸ್ ಬೆಳಗಾಂ ಇನ್ ಸಹ  ಅವರಿಗೆ ಶುಭ ಕೋರುತ್ತೇವೆ