ವೈಚಾರಿಕ ಚಿಂತನೆಗಳುಳ್ಳ ಸಮಾಜ ಮುಖಿ ಜೀವನವೇ ಸಾರ್ಥಕ ಜೀವನ: ಅಲ್ಲಮಪ್ರಭು

0

ಬೆಳಗಾವಿ: ವೈಚಾರಿಕ ಚಿಂತನೆಗಳುಳ್ಳ ಸಮಾಜ ಮುಖಿ ಜೀವನವೇ ಸಾರ್ಥಕ ಜೀವನ. ಆ ಆರ್ಥಕ ಜೀವನದಿಂದ ವೈಚಾರಿಕ ನೆಲೆಯಲ್ಲಿ ಹೊಸ ಸಮಾಜ ಸೃಷ್ಠಿ ಮಾಡಿರುವದರಿಂದಲೇ ಬಸವಾದಿ ಶರಣರ ಕ್ರಾಂತಿಯು ಇಂದಿನ ಆಧುನಿಕ ಜಗತ್ತಿಗೂ ಮಾದರಿಯಾಗಿದೆ ಎಂದು ನಾಗನೂರು ರುದ್ರಾಕ್ಷಿ ಮಠದ ಶ್ರೀ ಅಲ್ಲಮಪ್ರಭು ಸ್ವಾಮೀಜಿಗಳು ಹೇಳೀದ್ದಾರೆ.

ಬಸವ ಭೀಮ ಸೇನೆಯ ವತಿಯಿಂದ ಭಾನುವಾರದಂದು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಆಯೋಜಿಲಾಗಿದ್ದ ದೇಶದ ಪ್ರಥಮ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಜನ್ಮ ದಿನ ಹಾಗೂ ಅಕ್ಷರ ತಾಯಿ ಸೇರಿದಂತೆ ವಿವಿಧ ಪ್ರಶಸ್ತಿಗಳ ಪ್ರದಾನ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ಬಸವ-ಅಂಬೇಡ್ಕಕರನ್ನು ಸಮೀಕರಿಸಿ, ವೈಚಾರಿಕ ಚಿಂತನೆಗಳ ಸಮಾಜವನ್ನು ಮರು ಸೃಷ್ಠಿಸುವ ಬಸವ ಭೀಮ ಸೇನೆಯ ಅಧ್ಯಕ್ಷ ಆರ್.ಎಸ್.ದರ್ಗೆ ಅವರ ಹೋರಾಟಕ್ಕೆ ಶ್ರೀಮಠದ ಸಂಪೂರ್ಣ ಬೆಂಬಲ ಇದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪಬ್ಲಿಕ್ ಟಿವಿಯ ಜಿಲ್ಲಾ ವರದಿಗಾರ ದಿಲೀಪ ಕುರಂದವಾಡೆ, ತಮ್ಮ ವೈಚಾರಿಕ ಚಿಂತನೆಗಳಿಂದ ಸಮಾಜ ಮುಖಿ ಹೋರಾಟಕ್ಕೆ ಹೊಸ ಆಯಾಮ ನೀಡಿರುವ ದರ್ಗೆ ಅವರ ಹೋರಾಟಕ್ಕೆ ಮಾಧ್ಯಮ ಲೋಕದ ಸಂಪೂರ್ಣ ಬೆಂಬಲ ಇದೆ. ಸಮಾಜವು ಅವರಿಗೆ ಇನ್ನಷ್ಟು ಶಕ್ತಿ ತುಂಬ ಬೇಕು ಎಂದರು.

ಪೋಲಿಸ್ ಉಪ ನಿರೀಕ್ಷಕಿ ಸಿಐಡಿ ಅರಣ್ಯ ಸಂಚಾರಿ ದಳದ ರೋಹಿಣಿ ಪಾಟೀಲ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಪ್ರತಿಭೆ ಅಡಗಿದೆ. ಯಾವೊಬ್ಬ ವಿದ್ಯಾರ್ಥಿಯನ್ನು ಶಿಕ್ಷಕಿಯರು ನಿರ್ಲಕ್ಷಿಸಬಾರದು. ಬಾಲ್ಯದಲ್ಲಿ ನನ್ನ ಗುರುಗಳು ನನಗೆ ಮನೋಬಲ ತುಂಬಿದರಿಂದಲೆ ಇಂದು ನಾನು ಕೆಎಎಸ್ ಅಧಿಕಾರಿಯಾಗಲು ಸಾಧ್ಯವಾಗಿದೆ ಎಂದರು.

ಶಿಕ್ಷಕಿ ಸುಶೀಲಾ ಗುರವ, ಸಾವಿತ್ರಿಬಾಯಿ ಫುಲೆ ಅವರು ಶಾಲೆಗಳನ್ನು ಆರಂಭಿಸಿದ ಮತ್ತು ಅಂದಿನ ಮಕ್ಕಳಿಗೆ ಶಿಕ್ಷಣ ನೀಡಿದ ಪರಿಯೂ ಪ್ರತಿಯೊಬ್ಬ ಶಿಕ್ಷಕಿಗೆ ಮಾದರಿಯಾಗಿದೆ ಎಂದರು.

ಶಿಕ್ಷಕಿ ಪ್ರಭಾವತಿ ಹಾಲಣ್ಣವರ, ಪ್ರತಿ ವರ್ಷ ಸಾವಿತ್ರಿಬಾಯಿ ಫುಲೆ ಅವರ ಹೋರಾಟ ಮತ್ತು ಆದರ್ಶಗಳನ್ನು ನೆನಪಿಸುತ್ತಿರುವ ಬಸವ ಭೀಮ ಸೇನೆಗೆ ಇಡಿ ಶಿಕ್ಷಕ ವೃಂದ್ದ ಋಣಿಯಾಗಿದೆ ಎಂದರು. ಸುರೇಶ ಮರಲಿಂಗಣ್ಣವರ ವಂದಿಸಿದರು.

ಶಿಕ್ಷಕಿಯರಾದ ಎಂ.ಸುಧಾ, ಜಯಶ್ರೀ ಕಡಕೋಳ, ಸುಮಾ ದೊಡಮನಿ, ವಂದನಾ ಗಾವಡೆ, ಗೀತಾ ಜಮಖಂಡಿ, ಸುರೇಖಾ ಮಿರ್ಜೆ, ಸುವರ್ಣಾ ದಶವಂತ, ಕಿರಣ ಗಾಯಕವಾಡ, ಲೀಲಾವತಿ ದೊಡಮನಿ, ಶಿವಬಾಯವ್ವ ಮಠದ, ಪ್ರೇಮಾ ಜಡಗಿ, ಅನ್ನಪೂರ್ಣ ವಜ್ರಮಟ್ಟಿ, ನೂತನ ಕಾಗತಿ, ಎಂ.ಐ. ಬೇಪಾರಿ ಮತ್ತು ಎಸ್.ಕೆ.ಕವಿಶೆಟ್ಟಿ ಅವರುಗಳಿಗೆ ಅಕ್ಷರ ತಾಯಿ ಸಾವಿತ್ರಿಬಾಯಿ ಫುಲೆ ಅಂತಾರಾಜ್ಯ ಪ್ರಶಸಿ ಪ್ರದಾನ ಮಾಡಲಾಗುವದು.

ಡಾ.ಅನ್ನಪೂರ್ಣ ಕಾರಿ ಮತ್ತು ಲೀಲಾ ಪಾಟೀಲ ಅವರುಗಳಿಗೆ ನಾರಿಕುಲ ಚೇತನ ಸಾವಿತ್ರಿಬಾ¬ಫುಲೆ ಅಂತಾರಾಜ್ಯ ಪ್ರಶಸ್ತಿ, ಗೀತಾ ಬಸವರಾಜ ಕೋಲ್ಕಾರ ದಂಪತಿಗಳಿಗೆ
ಸಾವಿತ್ರಿಬಾಯಿ ಜ್ಯೋತಿಬಾ ಫುಲೆ, ಆದರ್ಶ ದಂಪತಿಗಳು ಅಂತಾರಾಜ್ಯ ಪ್ರಶಸ್ತಿ,
ಡಾ. ಮಲ್ಲಪ್ಪ ಬಾಗೇವಾಡಿ ಅವರಿಗೆ ಜ್ಯೋತಿಭಾ ಫುಲೆ ಜೀವಮಾನದ ಸಾಧನಾ ಅಂತಾರಾಜ್ಯ ಪ್ರಶಸ್ತಿ, ಮಹಾದೇವ ತೋಟಗಿ, ಧರೆಪ್ಪ ಠಕ್ಕಣ್ಣವರ ಮತ್ತು ರಮೇಶ ಕೊಪ್ಪದ ಅವರುಗಳಿಗೆ ಜ್ಯೋತಿಭಾ ಫುಲೆ ಸಮಾಜ ಸೇವಾ ಅಂತಾರಾಜ್ಯ ಪ್ರಶಸಿ ಪ್ರದಾನ ಮಾಡಲಾಯಿತು.

ಪ್ರಶಸ್ತಿಗಳನ್ನು ಸ್ವೀಕರಿಸಿದ ಹಾಗೂ ಕಾರ್ಯಕ್ರದ ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ ಬಸವ ಭೀಮ ಸೇನೆಯ ಅಧ್ಯಕ್ಷ ಆರ್.ಎಸ್.ದರ್ಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.