ಕರಪತ್ರಗಳನ್ನುಪುಜೆ ಮಾಡುವುದರೊಂದಿಗೆ ಚಾಲನೆ

0

ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ 

ಬೆಳಗಾವಿ 11 : ಬೆಳಗಾವಿ ಉತ್ತರ ಮತಕ್ಷೇತ್ರದ ಶಾಹೂ ನಗರದಲ್ಲಿನ ಶಿವಾಲಯದಲ್ಲಿ ವಿಶ್ವ ಹಿಂದು ಪರಿಷದ್ , ಶಾಸಕ ಅನಿಲ ಬೆನಕೆ ಹಾಗೂ ಕಾರಂಜಿ ಮಠದ ಶ್ರೀಗಳಿಂದ ರಾಮ ಮಂದಿರದ ನಿಧಿ ಸಮರ್ಪಣಾ ಅಭಿಯಾನದ ರಶೀದಿ ಹಾಗೂ ಕರಪತ್ರಗಳನ್ನುಪುಜೆ ಮಾಡುವುದರೊಂದಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಹಿಂದೂಗಳ ಪವಿತ್ರ ಸ್ಥಳವಾದ ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿರುವುದು ಎಲ್ಲ ಭಾರತೀಯರಲ್ಲಿ ಹೆಮ್ಮೆಯ ಸಂಗತಿಯಾಗಿದ್ದು, ಭವ್ಯ ಮಂದಿರ ನಿರ್ಮಾಣಕ್ಕೆ ಎಲ್ಲ ಭಾರತೀಯರಿಂದ ನಿಧಿ ಸಮರ್ಪಣಾ ಅಭಿಯಾನಕ್ಕೆ ಇಂದು ಚಾಲನೆ ನೀಡಲಾಗಿದೆ ಎಂದ ಅವರು ಮೊದಲ ರಶೀದಿಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣಕ್ಕೆ 5 ಲಕ್ಷ ದೇಣಿಗೆಯನ್ನು ಜಮೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ದೇಶದ ಪ್ರತಿಯೊಬ್ಬರು ಶ್ರೀ. ರಾಮ ಮಂದಿರ ನಿರ್ಮಾಣಕ್ಕೆ ಕೈಗೊಂಡಿರುವ ನಿಧಿ ಸಮರ್ಪಣಾ ಅಭಿಯಾನವನ್ನು ಯಶಸ್ವಿಗೊಳಿಸಬೆಕು ಎಂದು ಮನವಿಯನ್ನು ಮಾಡಿದರು.
ಈ ಸಂದರ್ಭದಲ್ಲಿ ಶಾಸಕ ಅನಿಲ ಬೆನಕೆ, ಕಾರಂಜಿ ಮಠದ ಶ್ರೀಗಳಾದ ಶ್ರೀ. ಪರಮೇಶ್ವರ ಹೆಗಡೆ, ಕೃಷ್ಣಾ ಭಟ, ಶ್ರೀಕಾಂತ ಕದಮ, ಅಶೋಕ ಶಿಂತ್ರೆ ಹಾಗೂ ಇತರರು ಉಪಸ್ಥಿತರಿದ್ದರು.