ವಿವಿಧ ಅಭಿವೃಧ್ದಿ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ಅನಿಲ ಬೆನಕೆ

0

ಬೆಳಗಾವಿ 11: ದಂದು ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ರವರು ಮಹಾನಗರ ಪಾಲಿಕೆ ಅನುದಾನದಡಿಯಲ್ಲಿ ನಗರದ ದೆವರಾಜ ಅರಸ ಕಾಲೋನಿಯ ಕೆ.ಎಚ್.ಬಿ ಕಾಲೊನಿಯಲ್ಲಿ ರಸ್ತೆ ಮರು ಡಾಂಬರೀಕರಣ ಹಾಗೂ ಅಶೋಕ ನಗರದಲ್ಲಿ ಯು.ಜಿ.ಡಿ ಪೈಪಲೈನ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆಯನ್ನು ಸಲ್ಲಿಸಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಮಹಾನಗರ ಪಾಲಿಕೆಯ ರೂ. 2.00 ಕೋಟಿಗಳಲ್ಲಿ ನಗರದ ದೇವರಾಜ ಅರಸ್ ಕಾಲೊನಿ ಕೆ.ಎಚ್.ಬಿಯಲ್ಲಿ ರಸ್ತೆ ಮರು ಡಾಂಬರಿಕರಣ ಕಾಮಗಾರಿಯನ್ನು ಕೈಗೊಳ್ಳಲು ಹಾಗೂ ಅಶೋಕ ನಗರದ ಮಿಶ್ರಿಕೋಟೆ ಮನೆಯಿಂದ ಡಬಲ್ ರಸ್ತೆ ವರೆಗೆ ಯು.ಜಿ.ಡಿ ಪೈಪಲೈನ್ ಅಳವಡಿಕೆ ಕಾಮಗಾರಿಯನ್ನು ಮಹಾನಗರ ಪಾಲಿಕೆಯ ರೂ. 32.16 ¯ಕ್ಷಗಳಲ್ಲಿ ಕೈಗೊಳ್ಳಲು ಭೂಮಿ ಪೂಜೆಯನ್ನು ಸಲ್ಲಿಸಲಾಗಿದೆ ಎಂದು ತಿಳಿಸಿದರು. ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸಾರ್ವಜನಿರಿಗೆ ಯಾವುದೇ ಅನಾನುಕೂಲಗಳನ್ನು ಮಾಡದೆ ಕಾಮಗಾರಿಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸುವಂತೆ ಸೂಚಿಸಿದ ಅವರು ಅಭಿವೃಧ್ದಿ ಕಾಮಗಾರಿಗಳಿಗೆ ಸಾರ್ವಜನಿಕರು ಅಧಿಕಾರಿಗಳೊಂದಿಗೆ ಸಹಕರಿಸಬೇಕೆಂದರು.

ಈ ಸಂದರ್ಭದಲ್ಲಿ ಶಾಸಕರೊಂದಿಗೆ ಮಹಾನಗರ ಪಾಲಿಕೆಯ ಅಧಿಕಾರಿಗಳಾದ ಕಾರ್ಯನಿರ್ವಾಹಕ ಇಂಜಿನೀಯರ ಈಶ್ವರ, ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರುಗಳಾದ ಸಚೀನ ಕಾಂಬಳೆ, ಮಹೇಶ ನರಸನ್ನವರ, ಗುತ್ತಿಗೆದಾರರಾದ ಎನ್. ಕೆ. ದಾಮಣೇಕರ, ಭರತೇಶ ಬುಡವಿ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.