ರಾಜ್ಯ ವಕೀಲರ ಪರಿಷತ್ ಉಪಾಧ್ಯಕ್ಷರಾಗಿ ಬೆಂಗಳೂರಿನಲ್ಲಿ ಅಧಿಕಾರ ಸ್ವೀಕರಿಸಿದರು.

0

ಚಿಕ್ಕೋಡಿ : ಇಲ್ಲಿನ ನ್ಯಾಯವಾದಿಗಳ ಸಂಘದ ಸದಸ್ಯ ಕಲ್ಮೇಶ ಕಿವಡ ಅವರು  ರಾಜ್ಯ ವಕೀಲರ ಪರಿಷತ್ ಉಪಾಧ್ಯಕ್ಷರಾಗಿ ಬೆಂಗಳೂರಿನಲ್ಲಿ ಅಧಿಕಾರ ಸ್ವೀಕರಿಸಿದರು.

ತಾಲೂಕಾ ನ್ಯಾಯವಾದಿಗಳ ಸಂಘದಿಂದ ಪ್ರಥಮ ಬಾರಿಗೆ ರಾಜ್ಯ ವಕೀಲರ ಪರಿಷತ್‍ಗೆ ಸದಸ್ಯರಾಗಿ ಆಯ್ಕೆಯಾದರು. ಈಗ ವಕೀಲ ಕಲ್ಮೇಶ ಕಿವಡ ಅವರು ಪ್ರಥಮ ಬಾರಿಗೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

 

ಸಂಘದ ಹಿರಿಯ ಸದಸ್ಯರಾದ ಸದಾಶಿವ ರೆಡ್ಡಿ, ಜಯಕುಮಾರ ಪಾಟೀಲ ನೇತೃತ್ವದಲ್ಲಿ ರಾಜ್ಯ ವಕೀಲರ ಪರಿಷತ್ ಅಧ್ಯಕ್ಷರಾಗಿ ಎಲ್.ಶ್ರೀನಿವಾಸಬಾಬು ಹಾಗೂ ಉಪಾಧ್ಯಕ್ಷರಾಗಿ ಕಲ್ಮೇಶ ಕಿವಡ ಅವಿರೋಧವಾಗಿ ಆಯ್ಕೆಗೊಂಡು ಅಧಿಕಾರ ಸ್ವೀಕರಿಸಿದರು.

 

ಇದೇ ವೇಳೆ ರಾಜ್ಯ ವಕೀಲರ ಪರಿಷತ್‍ಗೆ ಅವಿರೋಧ ಆಯ್ಕೆಯಾದ ಅಧ್ಯಕ್ಷ ಎಲ್.ಶ್ರೀನಿವಾಸಬಾಬು ಹಾಗೂ ಉಪಾಧ್ಯಕ್ಷ ಕಲ್ಮೇಶ ಕಿವಡ ಅವರನ್ನು ಚಿಕ್ಕೋಡಿ ವಕೀಲರ ಸಂಘದಿಂದ ಸನ್ಮಾನಿಸಿದರು.

 

ಈ ಸಂದರ್ಭದಲ್ಲಿ ಚಿಕ್ಕೋಡಿ ನ್ಯಾಯವಾದಿಗಳ ಸಂಘದ ಅಧ್ಯಕ್ಷ ನಾಗೇಶ ಕಿವಡ, ಸದಸ್ಯರಾದ ಎಚ್.ಎಸ್.ನಸಲಾಪೂರೆ, ರವಿ ಹಿರೇಕೊಡಿ, ಸುನೀಲ ಟವಳೆ ಮುಂತಾದವರು ಇದ್ದರು.