ನಕಲಿ ದಾಖಲೆ ಸೃಷ್ಠಿಸಿ ಸಿಪಿ ಯೋಗೇಶ್ವರ್ ಅವರು 13 ರಿಂದ 16 ಎಕರೆ ಭೂಮಿಯನ್ನು ಖರೀದಿಸಿದ್ದಾರೆ. ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಗಂಭೀರ ಆರೋಪ

0

ಬೆಂಗಳೂರು: ನಕಲಿ ದಾಖಲೆ ಸೃಷ್ಠಿಸಿ ಸಿಪಿ ಯೋಗೇಶ್ವರ್ ಅವರು  13 ರಿಂದ 16 ಎಕರೆ ಭೂಮಿಯನ್ನು ಖರೀದಿಸಿದ್ದಾರೆ. ಸುಳ್ಳು ದಾಖಲೆಗಳೊಂದಿಗೆ ಮಗಳ ಹೆಸರಿಗೆ ಮಾಡಿಸಿಕೊಟ್ಟಿರುವುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಈ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ಚನ್ನಪಟ್ಟಣ ಎಸಿ ವರ್ಗಾವಣೆಗೆ ಸಿಎಂ ಯಡಿಯೂರಪ್ಪ ಅವರೇ ಆದೇಶ ನೀಡಿದ್ರು. ಆದ್ರೇ ಅವರ ವರ್ಗಾವಣೆ ಮಾಡದಂತೆ ಕೋಟಿ ಕೋಟಿ ಡೀಲ್ ನಡೆದಿದೆ. ಎಸಿ ಕಚೇರಿಯಿಂದ ಯಾರಿಗೆ ಎಷ್ಟು ಹಣಹೋಗಿದೆ ಅಂತ ಗೊತ್ತು. ಈಗ ಎಸಿ ವರ್ಗಾವಣೆ ಎಲ್ಲಿಗೆ ನಿಂತಿದೆ ಅಂತಾನೂ ಗೊತ್ತು ಎಂದು ಹೇಳಿದ್ರು.

ಯೋಗೇಶ್ವರ್ ವಸೂಲಿ ಬಗ್ಗೆ ಊರೆಲ್ಲಾ ಚರ್ಚೆ ನಡೆಯುತ್ತಿದೆ. ನಕಲಿ ದಾಖಲೆ ಸೃಷ್ಠಿಸಿ ಭೂಮಿ ಖರೀದಿ ಮಾಡಿದ್ದಾರೆ. ಸುಳ್ಳು ದಾಖಲೆ ನೀಡಿ 13-16 ಎಕರೆ ಭೂಮಿ ಖರೀದಿ ಮಾಡಲಾಗಿದೆ. ಸುಳ್ಳು ದಾಖಲೆ ಸೃಷ್ಠಿಸಿ ಮಗಳ ಹೆಸರಿಗೆ ನೋಂದಣಿ ಮಾಡಿಸಲಾಗಿದೆ ಎಂಬುದಾಗಿ ಗಂಭೀರವಾಗಿ ಆರೋಪಿಸಿದ್ದಾರೆ. ಈ ಮೂಲಕ ಸಿಪಿ ಯೋಗೇಶ್ವರ್ ಬಗ್ಗೆ ಹೊಸ ಬಾಂಬ್ ಸಿಡಿಸಿದ್ದಾರೆ.