ಸಿಎಂ ಬದಲಾವಣೆ ಆಗ್ತಾರೆ ಎನ್ನುವುದನ್ನ ಬಿಜೆಪಿಯವರೇ ನನಗೆ ಹೇಳಿದ್ದಾರೆ. ಆರ್​ಆರ್​ಎಸ್​ನವರು ನನಗೆ ಮಾಹಿತಿ ಕೊಟ್ಟಿದ್ದಾರೆ ; ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ

0

ಹುಬ್ಬಳ್ಳಿ:  ಸಿಎಂ ಬದಲಾವಣೆ ಆಗ್ತಾರೆ ಎನ್ನುವುದನ್ನ ಬಿಜೆಪಿಯವರೇ ನನಗೆ ಹೇಳಿದ್ದಾರೆ. ಆರ್​ಆರ್​ಎಸ್​ನವರು ನನಗೆ ಮಾಹಿತಿ ಕೊಟ್ಟಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿಯೋದು ಸತ್ಯ ಎಂಬುದನ್ನು ಒತ್ತಿ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಇಷ್ಟು ದಿನ ಏಕೆ ಯಡಿಯೂರಪ್ಪನವರಿಗೆ ಮಂತ್ರಿಮಂಡಲ ವಿಸ್ತರಣೆಗೆ ಅವಕಾಶ ಕೊಟ್ಟಿರಲಿಲ್ಲ .ಸಿಎಂ ಆಗಿ ಮುಂದುವರೆಸುದಾಗಿದ್ರೆ ಇಷ್ಟು ದಿನ ಏಕೆ ಅವಕಾಶ ಕೊಟ್ಟಿರಲಿಲ್ಲ. ಉಪಚುನಾವಣೆಗಳು ನಡೆದು ಎಷ್ಟು ದಿನಗಳಾಗಿವೆ.  ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿಗಳಿಗೆ ಅವಕಾಶ ಕೊಟ್ಟಿದ್ದಾರೆ ಇವರಿಗ್ಯಾಕೆ ಕೊಟ್ಟಿಲ್ಲ, ಏನಿದರ ಅರ್ಥ(?) ಎಂದು ಪ್ರಶ್ನೆ ಮಾಡಿದ್ದಾರೆ.

ಏಳು ಜನರನ್ನ ಸಚಿವರನ್ನಾಗಿ ಮಾಡ್ತಾರೆ ಎನ್ನುವ ಖಾತರಿ ಈಗಲು ಇಲ್ಲ. ಯಡಿಯೂರಪ್ಪ ಮತ್ತು ಅವರ ದುಡ್ಡು ಇಲ್ಲದೆ ಯಾವುದೇ ಫೈಲ್​ ಕ್ಲೀಯರ್​ ಮಾಡಲ್ಲ. ಅಧಿಕಾರಿಗಳು ದುಡ್ಡು ಕೊಟ್ಟು ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದಾರೆ. ಏಳು ಕೋಟಿ ನಲವತ್ತು ಲಕ್ಷವನ್ನ ಆರ್​ಟಿಜಿಎಸ್​ ಮೂಲಕ ತೆಗೆದುಕೊಂಡಿದ್ದಾರೆ. ಅಕೌಂಟ್ ನಂಬರ್, ಅದು ಯಾರದ್ದು ಎನ್ನುವುದನ್ನು ಹೇಳಿದ್ದೇನೆ ಎಂದರು.

ನಾ ಕಾವುಂಗಾ ನಾ ಕಾಯೆದುಂಗಾ ಅಂತಾ ಮೋದಿ ಹೇಳ್ತಾರೆ. ಆದರೆ, ಕರ್ನಾಟಕದಲ್ಲಿ ನಡೆಯುತ್ತಿರೋದೇನು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿಯನ್ನು ಟೀಕಿಸಿದರು.