ಸ್ವಯಂ ಸೇವಾ ಗೃಹರಕ್ಷಕ ಸ್ಥಾನಗಳಿಗೆ ಅರ್ಜಿ ಅಹ್ವಾನ

0

ಬೆಳಗಾವಿ, 12: ಬೆಳಗಾವಿ ಜಿಲ್ಲೆಯ ಗೃಹರಕ್ಷಕ ದಳದಲ್ಲಿ ಖಾಲಿ ಇರುವ ಒಟ್ಟು 360 ಸ್ವಯಂ ಸೇವಕ ಗ್ರಹರಕ್ಷಕ ಸದಸ್ಯ ಸ್ಥಾನಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು ಆಯ್ಕೆ ಪ್ರಕ್ರಿಯೇಗೆ ಜ. 18 ಹಾಗೂ 19 ರವರೆಗೆ ನಗರ ಪೊಲೀಸ್ ಕವಾಯತು ಮೈದಾನದಲ್ಲಿ ನಡೆಯಲಿದೆ ಎಂದು ಜಿಲ್ಲೆಯ ಆರಕ್ಷಕ ಅಧೀಕ್ಷಕರು ತಿಳಿಸಿದ್ದಾರೆ.
ಜ. 18 ರಂದು ಬೆಳಗಾವಿ, ಖಾನಾಪುರ, ಬೈಲಹೊಂಗಲ, ಸವದತ್ತಿ, ರಾಮದುರ್ಗ, ಗೋಕಾಕ ಹಾಗೂ ಮೂಡಲಗಿ ತಾಲೂಕಿನ ವ್ಯಾಪ್ತಿಯ ಅಭ್ಯರ್ಥಿಗಳಿಗೆ ಮತ್ತು ಜ. 19 ರಂದು ಚಿಕ್ಕೋಡಿ, ಹುಕ್ಕೇರಿ, ನಿಪ್ಪಾಣಿ, ರಾಯಬಾಗ, ಅಥಣಿ, ಕಾಗವಾಡ ಹಾಗೂ ಕಿತ್ತೂರು ತಾಲೂಕಿನ ವ್ಯಾಪ್ತಿಯ ಅಭ್ಯರ್ಥಿಗಳಿಗೆ ಆರಕ್ಷಕರ ಅಧೀಕ್ಷಕರು ಕವಾಯತ್ತು ಮೈದಾನದಲ್ಲಿ ಬೆಳಿಗ್ಗೆ 7 ಗಂಟೆಯಿಂದ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದ್ದಾರೆ.