ಕಾರ್ಮಿಕರ ಸೌಲಭ್ಯ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ

0

ಬೆಳಗಾವಿ, ಜ.12 : ಬೆಳಗಾವಿ ಜಿಲ್ಲೆಯ ಕಾರ್ಮಿಕ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಕಾರ್ಮಿಕ ಬಂಧುಗಳಿಗೆ ಕಾರ್ಮಿಕ ಕಾನೂನುಗಳು ಹಾಗೂ ಮಂಡಳಿಗಳ ಸೌಲಭ್ಯಗಳ ಕುರಿತು ಜ.12 ರಂದು ಕಾರ್ಮಿಕ ಭವನದಲ್ಲಿ ಹಮ್ಮಿಕೊಳ್ಳಲಾದ ತರಬೇತಿ ಕಾರ್ಯಕ್ರಮಕ್ಕೆ ಕಾರ್ಮಿಕ ಆಯುಕ್ತರಾದ ಅಕ್ರಂ ಪಾಷಾ ಅವರು ಚಾಲನೆ ನೀಡಿದರು.
ವೆಂಕಟೇಶ ಅ. ಶಿಂದಿಹಟ್ಟಿ ಉಪ ಕಾರ್ಮಿಕ ಆಯುಕ್ತರು , ಮೊಹಮ್ಮದ ಅನ್ಸಾರಿ ಸಹಾಯಕ ಕಾರ್ಮಿಕ ಆಯುಕ್ತರು, ಕಾರ್ಮಿಕ ಅಧಿಕಾರಿಗಳಾದ ಅಶೋಕ ಬಾಳಿಗಟ್ಟಿ ಹಾಗೂ ತರನ್ನುಂ ಬೆಂಗಾಲಿ ಉಪಸ್ಥಿತರಿದ್ದರು. ////

ಜ.15 ಭ್ರಷ್ಟಾಚಾರ ನಿಗ್ರಹ ದಳ ಕಾರ್ಯವೈಖರಿ ಕುರಿತು ಸಭೆ

ಬೆಳಗಾವಿ, 12: ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಭ್ರಷ್ಟಾಚಾರ ನಿಗ್ರಹ ದಳ ಕಾರ್ಯವೈಖರಿ ಕುರಿತು ಅರಿವು ಸಭೆ ಶುಕ್ರವಾರ (ಜ.15) ರಂದು ಮಧ್ಯಾಹ್ನ 03 ರಿಂದ 5 ಗಂಟೆಯವರೆಗೆ ರಾಯಬಾಗ ತಾಲೂಕಿನ ತಹಶೀಲ್ದಾರ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ ಠಾಣೆಯ ಪೋಲಿಸ್ ಉಪಾಧೀಕ್ಷಕರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಉಪಾಧೀಕ್ಷಕರು ದೂರವಾಣಿ ಸಂಖ್ಯೆ : 0831-2422999, ಪೊಲೀಸ್ ಇನ್ಸ್‍ಪೆಕ್ಟರ್ 9480806299, 9480806321 ಅನ್ನು ಸಂಪರ್ಕಿಸಬಹುದು.
ಸಾರ್ವಜನಿಕರು ಸಭೆಯಲ್ಲಿ ಪಾಲ್ಗೊಂಡು ಕಾರ್ಯಕ್ರವiದ ಸದುಪಯೋಗ ಪಡೆಯಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ./////