ನಗರದ ವಿವಿಧ ಪ್ರದೇಶಗಳಲ್ಲಿ ಯು.ಜಿ.ಡಿ ಪೈಪಲೈನ ಅಳವಡಿಕೆ ಮತ್ತು ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಅನಿಲ ಬೆನಕೆ ಚಾಲನೆ :

0

ಬೆಳಗಾವಿ 12:ಮಂಗಳವಾರದಂದು ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆರವರು ನಗರದ ವಿವಿಧ ಪ್ರದೇಶಗಳಲ್ಲಿ ಮಹಾನಗರ ಪಾಲಿಕೆಯ ಅನುದಾನದಡಿಯಲ್ಲಿ ಯು.ಜಿ.ಡಿ ಪೈಪಲೈನ ಅಳವಡಿಕೆ ಹಾಗೂ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಭೂಮಿ ಪೂಜೆಯನ್ನು ಸಲ್ಲಿಸುವುದರೊಂದಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಮಹಾನಗರ ಪಾಲಿಕೆಯ ಅನುದಾನದಲ್ಲಿ ನಗರದ ಆಟೋ ನಗರ, ಶಿವಬಸವ ನಗರ, ಸೈನಿಕ ನಗರದ ಲಕ್ಷ್ಮಿ ಟೇಕ್ ದಲ್ಲಿ ಯು.ಜಿ.ಡಿ ಪೈಪಲೈನ ಅಳವಡಿಕೆ ಕಾಮಗಾರಿಯನ್ನು ಕೈಗೊಳ್ಳಲು ಅದರಂತೆಯೇ ಸೆಕ್ಟರ ನಂ.5 ವಂಟಮೂರಿ ಕಾಲೋನಿಯ ಅನುಭವ ಮಂಟಪದ (ಗ್ಲಾಸ ಹೌಸ್)ಎದುರು ಹಾಗೂ ಬಿ. ಆರ್. ಅಂಬೇಡ್ಕರ ಭವನದ ಎದುರು ಸಿ.ಸಿ. ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಇಂದು ಚಾಲನೆ ನೀಡಲಾಗಿದ್ದು, ಒಟ್ಟಾರೆ ರೂ. 35.05 ಲಕ್ಷಗಳಲ್ಲಿ ಸದರಿ ಕಾಮಗಾರಿಗನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಕಾಮಗಾರಿಗಳ ಗುಣಮಟ್ಟತೆಯನ್ನು ಕಾಯ್ದುಕೊಂಡು ನಿಗದಿತ ಸಮಯದಲ್ಲಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದ ಅವರು ಇಲ್ಲಿನ ಸ್ಥಳೀಯರ ಬಹು ವರ್ಷಗಳ ಬೇಡಿಕೆಯನ್ನು ಇಂದು ಈಡೇರಿಸಲಾಗಿದ್ದು, ಬರುವ ದಿನಗಳಲ್ಲಿ ಕ್ಷೇತ್ರದಲ್ಲಿನ ರಸ್ತೆ, ಗಟಾರು, ಒಳಚರಂಡಿ, ಉದ್ಯಾನವನಗಳ ಹಾಗೂ ಇನ್ನಿತರೆ ಅಭಿವೃಧ್ದಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಶಾಸಕ ಅನಿಲ ಬೆನಕೆ, ಮಹಾನಗರ ಪಾಲಿಕೆ ಅಧಿಕಾರಿಗಳಾದ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರುಗಳಾದ ಮಹೇಶ ನರಸನ್ನವರ, ಸಚಿನ ಕಾಂಬಳೆ, ಕಾರ್ಯನಿರ್ವಾಹಕ ಇಂಜಿನೀಯರುಗಳಾದ ಬೆಣ್ಣಿ, ಈಶ್ವರ, ಆಸ್ಪಕ, ಗುತ್ತಿಗೆದಾರರಾದ ಅಭಿಜಿತ ಚೌಗಲಾ, ರಮೇಶ ಶಹಾಪೂರಕರ, ಸೂರ್ಯಕಾಂತ ಡೋನಕರ ಹಾಗೂ ಅಲ್ಲಿನ ಸ್ಥಳೀಯರು ಉಪಸ್ಥಿತರಿದ್ದರು.