ಇಂದಿನ ದಿನಮಾನಗಳಲ್ಲಿ ಸಾಮಾಜಿಕ ಹೊಂದಾಣಿಕೆ ಅನಿವಾರ್ಯ – ಪ್ರೊ. ಆರ್. ಎನ್. ಮನಗೂಳಿ.

0

ಬೆಳಗಾವಿ-12 : ಇಂದಿನ ಪ್ರಕ್ಷುಬ್ಧ ಬದುಕಿನಲ್ಲಿ ಸಾಮಾಜಿಕ ಹೊಂದಾಣಿಕೆಯು ಅನಿವಾರ್ಯವಾಗಿದೆ. ನಮ್ಮಲ್ಲಿ ಅದು ಇಂದು ಅನಿವಾರ್ಯವಾಗಿರಬೇಕು. ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಪರಸ್ಪರರ ತಿಳುವಳಿಕೆಯು ಅಗತ್ಯವೆಂದು ಸ್ವಾಮಿ ವಿವೇಕಾನಂದ ಅವರು ತಮ್ಮ ಉಪದೇಶಗಳಲ್ಲಿ ತಿಳಿಸಿರುವರು. ಯುವಜನತೆಯಲ್ಲಿ ತಾಳ್ಮೆ, ಸಂಯಮ, ಸೈರಣೆಗಳು ಇರಬೇಕು ಇಲ್ಲದಿದ್ದಲ್ಲಿ ಭಾವಕೈತೆಯ ಕೊರತೆಯುಂಟಾಗುತ್ತದೆ. ಇದರಿಂದ ಸಾಮಾಜಿಕ ವೈಪರಿತ್ಯಗಳು ತಲೆದೂರಬಹುದು ಎಂದು ಸಾಮಾಜಿಕ ಹೊಂದಾಣಿಕೆಯ ಮಹತ್ವವನ್ನು ಪ್ರೊ. ಆರ್. ಎನ. ಮನಗೂಳಿ ಅವರು ಅಭಿಪ್ರಾಯಪಟ್ಟರು. ಅವರು ವಿಶ್ವವಿದ್ಯಾಲಯದ ಎನ್.ಎಸ್.ಎಸ್. ಘಟಕವು ಏರ್ಪಡಿಸಿದ್ದ ‘ರಾಷ್ಟ್ರೀಯ ಯುವ ದಿನೋತ್ಸವ’ದ ಅಂಗವಾಗಿ ಏರ್ಪಡಿಸಿದ್ದ ವಿಶೇಶ ಉಪನ್ಯಾಸದಲ್ಲಿ ಅತಿಥಿಗಳಾಗಿ ಮಾತನಾಡಿದರು. ಉಪನ್ಯಾಸದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರೊ. ಎಸ್. ಎಂ. ಗಂಗಾಧರಯ್ಯ ಅವರು ಮಾತನಾಡುತ್ತಾ ಯುವ ಜನತೆ ಭವಿಷ್ಯದ ಭಾರತವನ್ನು ಬಲಿಷ್ಠಗೊಳಿಸಬೇಕು. ಆ ಪ್ರಯತ್ನದಲ್ಲಿ ಸ್ವಾಮಿವಿವೇಕಾನಂದರ ವಿಚಾರ ಧಾರೆಗಳು ನಮಗೆ ದಾರಿದೀಪವಾಗಿವೆ. ಬಲಿಷ್ಠ ರಾಷ್ಟ್ರದ ಪರಿಕಲ್ಪನೆ ಭವಿಷ್ಯದಲ್ಲಿ ಸಾಂಸ್ಥಿಕ ಸ್ವರೂಪವನ್ನು ಪಡೆದುಕೊಳ್ಳಬೇಕು ಎಂದು ಯುವ ಜನತೆಗೆ ಕರೆಕೊಟ್ಟರು. ಎನ್‍ಎಸ್‍ಎಸ್ ಕಾರ್ಯಕ್ರಮಾಧಿಕಾರಿ ಡಾ. ಪಿ. ನಾಗರಾಜ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ವಾರ್ಷಿಕ ಯೋಜನೆಗಳನ್ನು ಕುರಿತು ವಿವರಿಸಿದರು. ಇನ್ನೋರ್ವ ಎನ್‍ಎಸ್‍ಎಸ್ ಕಾರ್ಯಕ್ರಮಾಧಿಕಾರಿ ಡಾ. ನಂದಿನಿ ದೇವರಮನಿ ವಂದಿಸಿದರು. ವಿಶ್ವವಿದ್ಯಾಲಯದ ಎನ್‍ಎಸ್‍ಎಸ್ ಘಟಕ 1 ಮತ್ತು 2ರ ಸಹಯೋಗದಲ್ಲಿ ಮಂಗಳವಾರ ಸ್ವಾಮಿ ವಿವೇಕಾನಂದ ಜಯಂತಿಯ ಪ್ರಯುಕ್ತ ಹಮ್ಮಿಕೊಂಡಿತ್ತು. ಇದಕ್ಕೂ ಮೊದಲು ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಎನ್‍ಎಸ್‍ಎಸ್ ಸ್ವಯಂ ಸೇವಕರಾದ ಸಂಗಮೇಶ ತೆಲಸಂಗ ಮತ್ತು ಪವಿತ್ರಾ ಗದ್ದನಕೇರಿ ರಾಷ್ಟ್ರೀಯ ಯುವ ದಿನಾಚರಣೆಯ ಕುರಿತು ಮಾತನಾಡಿದರು. ನಿವೇದಿತಾ ಮೂಲಿಮನಿ ಪ್ರಾರ್ಥಿಸಿದರು. ಅಮರ ಹಾಗೂ ಸಂಗಡಿಗರು ಎನ್‍ಎಸ್‍ಎಸ್ ಗೀತೆ ಹಾಡಿದರು. ಪವಿತ್ರಾ ಗದ್ದನಕೇರಿ ನಿರೂಪಿಸಿದರು.