ಸೊನಟ್ಟಿಯಲ್ಲಿ ಪೋಲೀಸರಿಂದ ನಾಶವಾದ ಸಾವಿರಾರು ಲೀಟರ್ ಕಳ್ಳಭಟ್ಟಿ..!

0

ಸೊನಟ್ಟಿಯಲ್ಲಿ ಪೋಲೀಸರಿಂದ ನಾಶವಾದ ಸಾವಿರಾರು ಲೀಟರ್ ಕಳ್ಳಭಟ್ಟಿ..!

DCP, ACP ಕೊಟ್ಟ ಪ್ಲ್ಯಾನ್ ಗೆ ಗುರಿಯಿಟ್ಟು ಹೊಡೆದ ಪವರ್ ಪುಲ್ PSI.

ಕಾಕತಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ದಂಧೆಗಳನ್ನು  ಮಟ್ಟಹಾಕಲು ನಗರ ಪೋಲೀಸ್ ಆಯುಕ್ತ ಕಛೇರಿಯ ಹಿರಿಯ ಅಧಿಕಾರಿಗಳು ಗಟ್ಟಿಯಾಗಿ ನಿಂತಂತೆ ಕಾಣುತ್ತಿದೆ.

ಹೀಗಾಗಿಯೇ ಹಲವು ದಿನಗಳಿಂದ ಕಾಕತಿ ಪೋಲಿಸ್ ಠಾಣೆ ಸಮೀಪದ ಸೊನಟ್ಟಿ ಗ್ರಾಮದಲ್ಲಿ ರಾಜಾರೋಷವಾಗಿ ನಡೆಯುತ್ತಿರುವ ಕಳ್ಳಭಟ್ಟಿ ದಂಧೆಗೆ ಸ್ವತಃ ಡಿಸಿಪಿ ಹಾಗೂ ಎಸಿಪಿ ಪ್ಲ್ಯಾನ್ ಮಾಡಿ ಕಾಕತಿ ಪಿಎಸ್ಐ ಮೂಲಕ ದಾಳಿ ನಡೆಸಿದ್ದಾರೆ. ಆಗ ಅಲ್ಲಿ ತಯಾರಿಸಿಟ್ಟಿದ್ದ ಸಾವಿರಾರು ಲೀಟರ್ ಕಳ್ಳಭಟ್ಟಿ ಹಾಗೂ ಕಚ್ಚಾ ವಸ್ತುಗಳನ್ನು ನಾಶಪಡಿಸಿ ಅರೋಪಿಗಳಿಗಾಗಿ ಬಲೆ ಬಿಸಿದ್ದಾರೆ ಎನ್ನುವ ಮಾಹಿತಿ ತಿಳಿದು ಬಂದಿದೆ.

ಹಲವು ದಿನಗಳಿಂದ ಸೊನಟ್ಟಿಯಲ್ಲಿ ಕಳ್ಳಭಟ್ಟಿ ತಯಾರಿಸಲಾಗುತ್ತಿತ್ತು. ಇದನ್ನು ಮಟ್ಟಹಾಕಲು ಹೋಗಿದ್ದ ಅಬಕಾರಿ ಪೋಲಿಸರು ಹಲವು ಬಾರಿ ಪ್ರಯತ್ನಿಸಿ ವಾಪಸಾಗಿದ್ದರು. ಆದರೆ, ಇದರ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡ ಎಸಿಪಿ ಗುಡಾಜಿ  ಅಬಕಾರಿ ಪೋಲಿಸರೊಂದಿಗೆ ಪವರ್ ಪುಲ್ ಪೋಲಿಸ್ ಟೀಂ ಒಂದನ್ನು ರೇಡಿ ಮಾಡಿ ಕಳಿಸಿದ್ದಾರೆ.

ಅಬಕಾರಿ ಇನ್ಸ್ಪೆಕ್ಟರ್ ಲಿಂಗರಾಜ ಪಾಟೀಲ, ಸಿಬ್ಬಂದಿ ಹಾಗೂ ಅವರೊಂದಿಗೆ ಕಾಕತಿ ಪಿಎಸ್ಐ ಅವಿನಾಶ ಯರಗೋಪ್ಪ,ಸಿಬ್ಬಂದಿ ಪ್ರಕಾಶ ಬಲ್ಲಾಳ, ನಾರಾಯಣ ಕಾತ್ರಾಳ ಹಾಗೂ ಮತ್ತಿತರು ಸೇರಿಕೊಂಡು ಸೋಮವಾರ ತಡರಾತ್ರಿ ಸೊನಟ್ಟಿ ಗ್ರಾಮದ ಗುಡ್ಡದಲ್ಲಿ ಕಳ್ಳಭಟ್ಟಿ ತಯಾರಿಸುತ್ತಿದ್ದ ಸ್ಥಳದಲ್ಲಿ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಕಳ್ಳಭಟ್ಟಿ ‍ತಯಾರಿಸಿ ತುಂಬಿಟ್ಟಿದ್ದ 8 ದೊಡ್ಡ ಗಾತ್ರದ ಗಡಿಗೆಗಳು, 10 ಕ್ಕೂ ಹೆಚ್ಚು ಟ್ಯೂಬ್‌ಗಳು ಹಾಗೂ ಸರಾಯಿ ತಯಾರಿಸಲು ಕೊಡಿಟ್ಟ ಕಚ್ಚಾ ಸಾಮಗ್ರಿಗಳನ್ನು ಪೋಲಿಸರನ್ನು ಸುಟ್ಟುಹಾಕಿ ನಾಶಪಡಿಸಿದ್ದಾರೆ. ಕತ್ತಲಾದ ಕಾರಣ ಆರೋಪಿಗಳು ಪೋಲಿಸರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿದೆ.

ಒಟ್ಟಿನಲ್ಲಿ ನಗರ ಪೋಲಿಸ್ ಆಯುಕ್ತರ ವ್ಯಾಪ್ತಿಯಲ್ಲಿನ ಕಳ್ಳಭಟ್ಟಿ ದಂಧೆ ಮಟ್ಟ ಹಾಕುವಲ್ಲಿ ಡಿಸಿಪಿ ವಿಕ್ರಂ ಆಮಟೆ ಹಾಗೂ ಎಸಿಪಿ ಗಣಪತಿ ಗುಡಾಜಿ ಅವರು ಮೊದಲ ಹೆಚ್ಚೆ ಇಟ್ಟಿದ್ದಾರೆ.