ಬೆಳಗಾವಿ ತಲುಪಿದ 1.47 ಲಕ್ಷ ‘ಕೋವಿಶೀಲ್ಡ್’ ಲಸಿಕೆ

0

ಬೆಳಗಾವಿ, ಜ. 13- ಕೋವಿಡ್ ಲಸಿಕೆ ಬುಧವಾರ ನಗರಕ್ಕೆ ಬಂದಿದೆ…

ಪುಣೆಯಿಂದ ಕೋವಿಶೀಲ್ಡ್ ಹೊತ್ತು ತಂದ ವಾಹನ ಇಲ್ಲಿನ ವ್ಯಾಕ್ಸಿನ್ ಡಿಪೊ ಆವರಣಕ್ಕೆ ಬಂದಿದ್ದು, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ 1.47 ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆಯ 13 ಬಾಕ್ಸ್ ಗಳನ್ನು ವಾಕ್ ಇನ್ ಕೂಲರ್ ನಲ್ಲಿ ಇಡಲಾಯಿತು.

ಲಸಿಕೆ ತಂದ ವಾಹನವನ್ನು ಇಲಾಖೆಯ ಮಹಿಳಾ ಸಿಬ್ಬಂದಿ ಆರತಿ ಬೆಳಗಿ ಸ್ವಾಗತಿಸಿದರು. ಬಳಿಕ ಲಸಿಕೆಯ ಬಾಕ್ಸ್ ಗಳನ್ನು ವಾಕ್ ಇನ್ ಕೂಲರ್ ಗೆ ಸ್ಥಳಾಂತರಿಸಲಾಯಿತು. ಬ್ಯಾಂಡ್ ಬಾರಿಸುವ ಮೂಲಕ ಸಂಭ್ರಮದಿಂದ ಸ್ವಾಗತಿಸ ಲಾಯಿತು.

ಜ. 16ರಿಂದ ಲಸಿಕೆ ಅಭಿಯಾನವು 12 ಕೇಂದ್ರಗಳಲ್ಲಿ ಆರಂಭವಾಗಲಿದೆ. ಒಟ್ಟು 180 ಕೇಂದ್ರಗಳನ್ನು ಗುರುತಿಸಿದ್ದೇವೆ. ಸಿದ್ಧತೆ ಮಾಡಿಕೊಂಡಿ ದ್ದೇವೆ. ಹಂತ ಹಂತವಾಗಿ ಲಸಿಕೆ ಕೊಡಲಾಗುವುದು. ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಆರೋಗ್ಯ ಸೇವಾ (ಕೊರೊನಾ ಸೇನಾನಿಗಳು) ಸಿಬ್ಬಂದಿಗೆ ನೀಡಲಾಗುವುದು. ಜಿಲ್ಲೆಯಲ್ಲಿ ಒಟ್ಟು 37 ಸಾವಿರ ಮಂದಿಯ ಪಟ್ಟಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.

ಹಂತ ಹಂತವಾಗಿ ಲಸಿಕೆ ಬರುವುದು, ಕೊಡುವುದು ಮುಂದುವರಿಯಲಿದೆ. ವಿಜಯಪುರ, ಬಾಗಲಕೋಟೆ, ಕೊಪ್ಪಳ, ಗದಗ, ಉತ್ತರ ಕನ್ನಡ, ಹಾವೇರಿ ಹಾಗೂ ಧಾರವಾಡ ಜಿಲ್ಲೆಗಳಿಗೆ ಇಲ್ಲಿಂದಲೇ ಹಂಚಿಕೆ ಆಗಲಿದೆ. ಅಲ್ಲಿನ ವ್ಯಾಕ್ಸಿನ್ ವ್ಯಾನ್ ಗಳು ಬಂದು ಒಯ್ಯಲಿವೆ ಎಂದು ತಿಳಿಸಿದರು.

ಒಂದು ಕೇಂದ್ರದಲ್ಲಿ ಒಂದು ದಿನಕ್ಕೆ 100 ಮಂದಿಗೆ ಲಸಿಕೆ ನೀಡಲಾಗುವುದು. ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ. 176 ಆರೋಗ್ಯ ಸಂಸ್ಥೆಗಳಿವೆ. ಅವುಗಳೊಂದಿಗೆ ಕೆಎಲ್ಇಯಂತಹ ಕೆಲವು ಆಸ್ಪತ್ರೆಗಳ ಕೇಂದ್ರಗಳಲ್ಲೂ ಲಸಿಕೆ ನೀಡ ಲಾಗುವುದು ಎಂದರು.