ಜ17 ರಂದು ನಡೆಯುವ ಸಮಾಜ ಸೇವಕ ಸಮಾವೆಶ ಸಮಾರೋಪ ಕಾರ್ಯಕ್ರಮಕ್ಕೆ ಆಗಮಿಸಲಿದ್ದು ಈ ಸಮಾವೇಶದ ಯಶಸ್ವಿಗೆ ಕಾರ್ಯಕರ್ತರು ಶ್ರಮವಹಿಸಬೇಕೆಂದು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಸಂಜಯ ಪಾಟೀಲ ಕಾರ್ಯಕರ್ತರಿಗೆ ಕರೆ

0

ಬೆಳಗಾವಿ:ಭಾರತ ದೇಶದ ಮುಕುಟ ಜಮ್ಮ ಕಾಶ್ಮೀರದಲ್ಲಿದ್ದ ವಿಧಿ375 ಹಾಗೂ 35 ಎ ತಗೆದುಹಾಕಲಿಕ್ಕೆ ಈ ಜನ್ಮದಲ್ಲಿಯೆ ಸಾಧ್ಯವಿಲ್ಲ ಎಂಬ ಮನಸ್ಸಿನ ಸ್ಥಿತಿಯನ್ನು ಕ್ಷಣಾರ್ಧದಲ್ಲಿ ತಗೆದು ಹಾಕಿ ನವ ಭಾರತದ ನಿರ್ಮಾಣಕ್ಕೆ ಹೊಸ ಮನ್ವಂತರ ಹಾಕಿದ ಕೇಂದ್ರ ಗೃಹ ಸಚಿವರಾದ ಅಮಿತ ಷಾ ಜ17 ರಂದು ನಡೆಯುವ ಸಮಾಜ ಸೇವಕ ಸಮಾವೆಶ ಸಮಾರೋಪ ಕಾರ್ಯಕ್ರಮಕ್ಕೆ ಆಗಮಿಸಲಿದ್ದು ಈ ಸಮಾವೇಶದ ಯಶಸ್ವಿಗೆ ಕಾರ್ಯಕರ್ತರು ಶ್ರಮವಹಿಸಬೇಕೆಂದು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಸಂಜಯ ಪಾಟೀಲ ಕಾರ್ಯಕರ್ತರಿಗೆ ಕರೆ ಕೊಟ್ಟರು.

ಬುಧವಾರ ಪಟ್ಟಣದ ಗೋಮಟೇಶ್ವರ ವಿದ್ಯಾ ಪೀಠದ ಸಭಾಭವನದಲ್ಲಿ ಆಯೋಜಿಸಿದ್ದ ಚಿಕ್ಕೋಡಿ, ಬೆಳಗಾವಿ ಗ್ರಾಮಾಂತರ ಹಾಗೂ ಮಹಾನಗರದ ಪ್ರಮುಖ ಕಾರ್ಯಕರ್ತರ ಜವಾಬ್ದಾರಿ ಸಭೆಯಲ್ಲಿ ಮಾತನಾಡಿ ದೇಶದಲ್ಲಿ 5 ನೂರು ವರ್ಷಗಳ ರಾಮಮಂದಿರ ನಿರ್ಮಾಣ, ತ್ರೀ ತಲಾಕ ಜನ್ಮ ಸಿದ್ದ ಹಕ್ಕು ಎನ್ನುವ ನೀತಿಯನ್ನ ಬದಲಾಯಿಸಿ ಪ್ರಪಂಚದಲ್ಲಿ‌ಅತಿ ದೊಡ್ಡದಾದ ಪಕ್ಷವನ್ನು ಕಟ್ಟಿದ ಶ್ರೇಯಸ್ಸಿನ ಅಮಿತ ಷಾ ರವರ ಕಾರ್ಯಕ್ರಮ ಎಂದರೆ ಬಿಜೆಪಿ ಕಾರ್ಯಕರ್ತರ ಹಬ್ಬವಾಗಿ ಆಚರಿಸುವ ಸೌಭಾಗ್ಯ ಉತ್ತರಾಯಣ ಪೂಣ್ಯಕಾಲ ಮಕರ ಸಂಕ್ರಮಣದ ಶುಭ ಸಂದರ್ಭದಲ್ಲಿ ಬಂದಿರುವದು ಬೆಳಗಾವಿ ಅಖಂಡ ಜಿಲ್ಲೆ ವಿಜೃಂಭಿಸುತ್ತಿದೆ ಎಂದರು.

ಪಕ್ಷದ ಹಿರಿಯರಾದ ನ್ಯಾಯವಾದಿ ಎಮ್.ಬಿ.ಝಿರಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಪಕ್ಷವನ್ನು ಬೇರಮಟ್ಟದಲ್ಲಿ ಸಂಘಟಿಸಿ ಹಳ್ಳಿಹಳ್ಳಿಗೆ ಮುಟ್ಟಿಸಲು ಪರಿಶ್ರಮಿಸಿ, ಗ್ರಾಮ ಪಂಚಾಯತಿಯಲ್ಲಿ ಆಯ್ಕೆಯಾದ ಸದಸ್ಯರನ್ನ ಗ್ರಾಮ ಸೇವಕ ಸಮಾವೇಶ ಎಂಬ ವಿಶೇಷ ಹೆಸರಿನಲ್ಲಿ ಆಯೋಜಿಸಿ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮುಡಿಸುತ್ತಿರುವ ನಮ್ಮ ನಾಯಕನ ಆಗಮನದ ಸಮಾರಂಭ ದೇಶಕ್ಕೆ ಮಾದರಿಯಾಗುವ ನಿಟ್ಟಿನಲ್ಲಿ ಆಯೋಜಿಸುವ ಕಲ್ಪನೆಗೆ ತಮ್ಮೆಲ್ಲರ ಸಹಕಾರ ಬೇಕೆಂದರು.

ಕಾರ್ಯಕರ್ತರ ಆಗಮನದಲ್ಲಿ ಅವರ ವಾಹನಗಳ ನಿಲುಗಡೆ, ಭೋಜನ ವ್ಯವಸ್ಥೆ, ಸಭೆಗೆ ಆಸನ ಹಾಗೂ ನೂತನ ಆಯ್ಕೆಯಾದ ಗ್ರಾಮ ಪಂಚಾಯತ ಸದಸ್ಯರ ಸ್ವಾಗತ ಅತ್ಯಂತ ಅಚ್ಚುಕಟ್ಟಾಗಿ ನಡೆಸಬೇಕೆಂದರು.
ರಾಜ್ಯ ಕಾರ್ಯದರ್ಶಿ ಕು.ಉಜ್ವಲಾ ಬಡವಣಾಚೆ ಕಾರ್ಯಕ್ರಮದ ಸಂಪೂರ್ಣ ವಿವರ ಪಡೆದು ಜವಾಬ್ದಾರಿ ಪಡೆದ ಕಾರ್ಯಕರ್ತರಿಂದ ಮಾಹಿತಿ ಪಡೆದರು.

ಚಿಕ್ಕೊಡಿ ಜಿಲ್ಲಾ ಅಧ್ಯಕ್ಷ ಡಾ.ರಾಜೇಶ ನಿರ್ಲಿ, ಮಹಾನಗರ ಅಧ್ಯಕ್ಷ ಶಶಿ ಪಾಟೀಲ ಪಕ್ಷದ ಉಸ್ತುವಾರಿ ಜಿಪಂ ಸದಸ್ಯ ರಮೇಶ ದೇಶಪಾಂಡೆ ಇದ್ದರು.
ಕಾರ್ಯಕ್ರಮದಲ್ಲಿ ಬೆಳಗಾವಿ ಗ್ರಾಮಾಂತರ ಜಿಲ್ಲೆಯ, ಮಹಾನಗರ ಹಾಗೂ ಚಿಕ್ಕೊಡಿ ಜಿಲ್ಲೆಗಳ ಪದಾಧಿಕಾರಿಗಳು, ಮಂಡಳ ಅಧ್ಯಕ್ಷರು ಕಾರ್ಯದರ್ಶಿಗಳು, ಮೊರ್ಚಾಗಳ ನೂರಾರು ಪದಾಧಿಕಾರಿಗಳು ಗ್ರಾಮಾಂತರ ಜಿಲ್ಲಾ ಮಾಧ್ಯಮ ಪ್ರಮುಖ ಎಫ್.ಎಸ್.ಸಿದ್ದನಗೌಡರ, ಖಜಾಂಚಿ ಮಲ್ಲಿಕಾರ್ಜುನ ಮಾದಮ್ಮನವರ ಇದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ ಮೊಹಿತೆ ಸ್ವಾಗತಿಸಿ ನಿರೂಪಿಸಿದರು ಸುಭಾಷ್ ಪಾಟೀಲ ವಂದಿಸಿದರು