ರಾಜ್ಯದ ಆಡಳಿತದಲ್ಲಿ ನನ್ನನು ಪಾಲ್ಗೊಳಿಸಿದ್ದಾರೆ. ನಮ್ಮ ಈ ಭಾಗದ ಜನಕ್ಕೆ ಉಮೇಶ ಕತ್ತಿ ಮಂತ್ರಿ ಆಗಬೇಕಿತ್ತು ಎಂಬ ಆಸೆ ಇತ್ತು ಅದನ್ನು ಮುಖ್ಯಮಂತ್ರಿಗಳು ಈಡೇರಿಸಿದ್ದಾರೆ

0

ಬೆಳಗಾವಿ:   ಬಿ.ಎಸ್.ಯಡಿಯೂರಪ್ಪ ಸಂಪುಟದಲ್ಲಿ ನೂತನ ಸಚಿವರಾಗಿ ತವರು ಜಿಲ್ಲೆ ಕುಂದಾನಗರಿ ಬೆಳಗಾವಿಗೆ ನಿನ್ನೆಯ ದಿನ ಆಗಮಿಸಿದ ಉಮೇಶ ಕತ್ತಿ ಅವರಿಗೆ ಅಭಿಮಾನಿಗಳು ಸಂಭ್ರಮದಿಂದ ಬರಮಾಡಿಕೊಂಡರು. ಹೂಗುಚ್ಛ ನೀಡಿ ಸೆಲ್ಫಿ ಕ್ಲಿಕ್ಕಿಸಿಕೊಡು ಘೋಷಣೆಗಳನ್ನು ಕೂಗಿದರು. ಮೊದಲು ನಗರದಲ್ಲಿರುವ ಚೆನ್ನಮ್ಮಾ ಮೂರ್ತಿಗೆ ಮಾಲಾರ್ಪಣೆ ಮಾಡಿದ ಸಚಿವ ಉಮೇಶ ಕತ್ತಿ ನಂತರ ಮಾಧ್ಯಮದವರ ಜೊತೆ ಮಾತನಾಡಿ ಮುಖ್ಯಮಂತ್ರಿಗಳು ರಾಜ್ಯದ ಆಡಳಿತದಲ್ಲಿ ನನ್ನನು ಪಾಲ್ಗೊಳಿಸಿದ್ದಾರೆ. ನಮ್ಮ ಈ ಭಾಗದ ಜನಕ್ಕೆ ಉಮೇಶ ಕತ್ತಿ ಮಂತ್ರಿ ಆಗಬೇಕಿತ್ತು ಎಂಬ ಆಸೆ ಇತ್ತು ಅದನ್ನು ಮುಖ್ಯಮಂತ್ರಿಗಳು ಈಡೇರಿಸಿದ್ದಾರೆ ಜಿಲ್ಲೆಯಲ್ಲಿ 5 ಜನ ಮಂತ್ರಿಗಳು ಇದ್ದೇವೆ ಎಲ್ಲರೂ ಕೂಡಿ ರಾಜ್ಯವನ್ನು ಅಭಿವೃದ್ಧಿ ಮಾಡುತ್ತೇವೆ. ನಾನು ಈಗಾಗಲೇ ಐದಾರು ಖಾತೆಗಳನ್ನು ನಿಭಾಯಿಸಿದ್ದೇನೆ ಯಾವುದೇ ಖಾತೆ ಕೊಟ್ಟರು ಜವಾಬ್ದಾರಿಯಾಗಿ ನಿಭಾಯಿಸುತ್ತೇನೆ. ರಾಜ್ಯದ ಅಭಿವೃದ್ಧಿಗೆ ಒತ್ತು ಕೊಡುತ್ತೇನೆ. ಯಾವುದೇ ಒಂದು ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಭಿನ್ನಮತ ಸಾಮಾನ್ಯ ಯಡಿಯೂರಪ್ಪ ಸರ್ಕಾರ ಸುಭದ್ರವಾಗಿದೆ, ಎರಡೂವರೆ ವರ್ಷ ಯಶಸ್ವಿಯಾಗಿ ಮುಗಿಸಿ ಮುಂದೆವು ಬಿಜೆಪಿ ಸರ್ಕಾರವನ್ನು ನಾವು ಅಧಿಕಾರಕ್ಕೆ ತರುತ್ತೇವೆ. ಒಬ್ಬೊಬ್ಬರದು ಒಂದೊಂದು ಅಭಿಪ್ರಾಯ ಇರುತ್ತೆ ಅದಕ್ಕೆಲ್ಲಾ ಬೆಲೆ ಕೊಡುವ ಅಗತ್ಯವಿಲ್ಲ ಎಂದು ನೂತನ ಸಚಿವ ಉಮೇಶ ಕತ್ತಿ ಬೆಳಗಾವಿಯಲ್ಲಿ ಹೇಳಿಕೆ ನೀಡಿದ್ದಾರೆ.