ನಾಳೆ ಅಮೀತ ಶಾ ಕಾರ್ಯಕ್ರಮಕ್ಕೆ ಲಕ್ಷ..ಲಕ್ಷ..ಜನ…

0

ಬೆಳಗಾವಿ- ಕೇಂದ್ರ ಗೃಹ ಸಚಿವ,ಬಿಜೆಪಿಯ ಚಾಣಕ್ಯ ಎಂದೇ ಪ್ರಸಿದ್ಧಿ ಪಡೆದಿರುವ ಅಮೀತ ಶಾ ಅವರು ನಾಳೆ ಕುಂದಾನಗರಿ ಬೆಳಗಾವಿಗೆ ಆಗಮಿಸುತ್ತಿದ್ದು ಬೆಳಗಾವಿ ಈಗ ಬಿಜೆಪಿ ಮಯವಾಗಿದೆ.

ನಾಳೆ ಮಧ್ಯಾಹ್ನ ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಅಮೀತ ಶಾ ಅವರ ಕಾರ್ಯಕ್ರಮ ನಡೆಯಲಿದ್ದು,ಇಲ್ಲಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ.ಈ ಕಾರ್ಯಕ್ರಮಕ್ಕೆ ಲಕ್ಷ.. ಲಕ್ಷ ಜನ ಸೇರುವ ನಿರೀಕ್ಷೆ ಇದೆ.

ಬೆಳಗಾವಿಯಲ್ಲಿ ಅಮೀತ ಶಾ ಅವರಿಗೆ ಸ್ವಾಗತ ಕೋರಿ ದೊಡ್ಡ ದೊಡ್ಡ ಬ್ಯಾನರ್ ಗಳನ್ನು ಕಟೌಟ್ ಗಳನ್ನು ಹಾಕಲಾಗಿದ್ದು,ಬೆಳಗಾವಿಯ ಎಲ್ಲ ಪ್ರಮುಖ ವೃತ್ತಗಳಲ್ಲಿ ಬಿಜೆಪಿ ಧ್ವಜಗಳನ್ನು ಹಚ್ಚಲಾಗಿದ್ದು ಬೆಳಗಾವಿ ನಗರ ಈಗ ಸಂಪೂರ್ಣವಾಗಿ ಕೇಸರಿಮಯವಾಗಿದೆ.
ಅಮೀತ ಶಾ ಅವರು ನಾಳೆ ದಿವಂಗತ ಸುರೇಶ ಅಂಗಡಿ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಲಿದ್ದಾರೆ..

ಅಮೀತ ಶಾ ಬೆಳಗಾವಿ ಭೇಟಿ ,ಬೆಳಗಾವಿ ಲೋಕಸಭಾ ಉಪ ಚುನಾವಣೆಯ ಆಕಾಂಕ್ಷಿಗಳಲ್ಲಿ ಕುತೂಹಲ ಕೆರಳಿಸಿದ್ದು,ನಾಳೆ ಬಿಜೆಪಿ ಅಭ್ಯರ್ಥಿಯನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ಅಮೀತ ಶಾ ಅವರು ರಾಜ್ಯದ ಬಿಜೆಪಿ ನಾಯಕರ ಜೊತೆ ಚರ್ಚೆ ಮಾಡುವ ಸಾದ್ಯತೆ ಇದೆ.