ಅಪರಿಚಿತ ವ್ಯಕ್ತಿ ಶವ ಪತ್ತೆ

0

ಬೆಳಗಾವಿ, ಜ.16 : ಸುಮಾರು 40 ವರ್ಷದ ಅಪರಿಚಿತ ವ್ತಕ್ತಿಯೊಬ್ಬರು ಬೆಳಗಾವಿ-ದೇಸೂರ ರೈಲು ನಿಲ್ದಾಣಗಳ ಮಧ್ಯೇ ರೈಲ್ವೆ ತಿಳಕವಾಡಿ 3ನೇಯ ರೈಲ್ವೆ ಗೇಟ್ ಹತ್ತಿರ ಚಲಿಸುವ ರೈಲು ಗಾಡಿಗೆ ಸಿಕ್ಕಿ ಮೃತಪಟ್ಟಿರುವ ಘಟನೆ ಜ.15 ರಂದು ಬೆಳಗಾವಿ ರೈಲ್ವೆ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
5 ಇಂಚು 6 ಅಡಿ ಎತ್ತರ, ಸಾಧರಣಾ ಕಪ್ಪು, ಕೋಲು ಮುಖ, ನೀಟಾದ ಮೂಗು ಮತ್ತು ಸಧೃಡ ಮೈಕಟ್ಟು ಹೊಂದಿದ್ದು, ತಿಳಿ ನೀಲ ಬಣ್ಣದ ಪುಲ್ ಟಿ ಶರ್ಟ, ಪಿಂಕ್ ಟಿ ಶರ್ಟ , ಚಾಕಲೇಟ ಬಣ್ಣದ ಅಂಡರ್‍ವೇರ್, ಬೂದು ಬಣ್ಣದ ನೈಟ್ ಪ್ಯಾಂಟ್ ಧರಿಸಿದ್ದಾನೆ.
ಅಪರಿಚಿತ ವ್ಯಕ್ತಿಯ ಸಂಬಂದಿಗಳು ಅಥವಾ ಕಾಣೆಯಾದ ಬಗ್ಗೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೆ ಬೆಳಗಾವಿ ರೈಲ್ವೆ ಪೋಲೀಸ್ ಠಾಣೆ ದೂ. ಸಂಖ್ಯೆ: 0831-2405273, ಪಿಎಸ್‍ಐ ಮೊಬೈಲ್ ನಂ. 9480802127 ಗೆ ಸಂಪರ್ಕಿಸಬಹುದು ಎಂದು ಬೆಳಗಾವಿ ರೈಲ್ವೆ ಪೋಲಿಸ್ ಠಾಣೆ ಆರಕ್ಷಕ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.