ಇಂದು ಬಿಜೆಪಿ ಚಾಣಕ್ಯ ಅಮೀತ ಶಾ ಬೆಳಗಾವಿಗೆ ಬರುತ್ತಿದ್ದು ,ಸಹಜವಾಗಿ ಬೆಳಗಾವಿಯ ಕೆ ಎಲ್ ಇ ಆಸ್ಪತ್ರೆಯಲ್ಲೂ ಅಮೀತ್ ಶಾ ಕಾರ್ಯಕ್ರಮವೂ ಇದೆ,ಜೊತೆಗೆ ಬಿಜೆಪಿ ಕೋರ್ ಕಮೀಟಿ ಸಭೆ
ಬೆಳಗಾವಿ-ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇರಲಿ ಅಥವಾ ಬಿಜೆಪಿ ಇರಲಿ,ಕೇಂದ್ರ ಸಚಿವರು,ರಾಷ್ಟ್ರೀಯ ನಾಯಕರು ಯಾರೇ ಆಗಲಿ ಅವರು ಬೆಳಗಾವಿಗೆ ಬಂದರೆ,ಅವರು ಕಡ್ಡಾಯವಾಗಿ ಕೆ ಎಲ್ ಇ ಗೆ ಹೋಗಲೇಬೇಕು.
ಈ ವಿಷಯದಲ್ಲಿ ಡಾ. ಪ್ರಭಾಕರ ಕೋರೆ ಯಾವತ್ತೂ ಫೇಲ್ ಆಗಿಲ್ಲ,ಮುಂದೆ ಆಗುವದೂ ಇಲ್ಲ,ಯಾಕಂದ್ರೆ ಪ್ರಭಾಕರ ಕೋರೆ ಎನ್ನುವ ಹೆಸರಿನಲ್ಲೇ ಪವರ್ ಅಡಗಿದೆ,ಮಾಜಿ…ಎನ್ನಯವ ಪದವನ್ನು ಅವರು ಸಹಿಸಿಕೊಂಡಿಲ್ಲ,ಮಾಜಿ ರಾಜ್ಯಸಭಾ ಸದಸ್ಯ ಆಗಿರುವ ಪ್ರಭಾಕರ ಕೋರೆ ಈಗ ಹಾಲಿ ಆಗಲು ಎಲ್ಲಿಲ್ಲದ ಕಸರತ್ತು ನಡೆಸಿದ್ದಾರೆ .
ಪ್ರಭಾಕರ ಕೋರೆ ಮಾಸ್ ಲೀಡರ್ ಅಲ್ಲ ಆದ್ರೆ ಅವರೊಬ್ಬ ಉತ್ತಮ ಅಡಳಿತಗಾರ ಅನ್ನೋದನ್ನು ಅವರು ಜಾಗತಿಕ ಮಟ್ಟದಲ್ಲಿ ಸರ್ಟಿಫಿಕೇಟ್ ಪಡೆದುಕೊಂಡಿದ್ದಾರೆ, ಈಗ ಬೆಳಗಾವಿ ಲೋಕಸಭಾ ಉಪ ಚುನಾವಣೆ ನಡೆಯಲಿದೆ,ಬಿಜೆಪಿ ಟಿಕೆಟ್ ನನಗೆ ಕೊಡಿ,ನನಗೆ ವಯಸ್ಸಾದಲ್ಲಿ ನನ್ನ ಮಗನಿಗೆ ಟಿಕೆಟ್ ಕೊಡಿ ,ಎಂದು ಬಿಜೆಪಿ ಚಾಣಕ್ಯ ಅಮೀತ ಶಾ ಮನವೊಲಿಸಲು ಪ್ರಭಾಕರ ಕೋರೆ ವೇದಿಕೆ ಸಜ್ಜು ಮಾಡಿಕೊಂಡಿದ್ದಾರೆ.
ನಾಳೆ ಕೆ ಎಲ್ ಇ ಸಂಸ್ಥೆಯ ಹಿಂದಿನ ಜೀರಗೆ ಭವನ ಇಂದಿನ ಸೆಂಟೇನರಿ ಹಾಲ್ ನಲ್ಲಿ ಬಿಜೆಪಿ ಕೋರ್ ಕಮೀಟಿ ಸಭೆ ನಡೆಯಲಿದ್ದು ಈ ಸಭೆಯಲ್ಲಿ ಬೆಳಗಾವಿ ಬಿಜೆಪಿ ಅಭ್ಯರ್ಥಿ ಘೋಷಣೆ ಆಗುವ ಸಾಧ್ಯತೆ ಇದೆ.
ಪ್ರಭಾಕರ ಕೋರೆ ಅಧಿಕಾರದಲ್ಲಿ ಇಲ್ಲದಿದ್ದರೂ ಬಿಜೆಪಿ ಪಕ್ಷದಲ್ಲಿ ತಮ್ಮದೇ ಆದ ವರ್ಚಸ್ಸು ಉಳಿಸಿಕೊಂಡಿದ್ದು ಸತ್ಯ,ಈ ವಿಚಾರವನ್ನು ಎಲ್ಲರೂ ನಂಬಲೇಬೇಕು.