ಭಾಷಣದ ವೇಳೆ ಮೋದಿ ಮತ್ತು ಅಮಿತ್ ಶಾ ಅವರನ್ನು ಕೊಂಡಾಡಿದ ಸಿ.ಟಿ.ರವಿ

0

ಬೆಳಗಾವಿ: ಸಮಾವೇಶದಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ‌. ರವಿ ಭಾಷಣ ವೇಳೆ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ. ಮೋದಿ ಶಾ ಜೋಡಿ ಸ್ವಾತಂತ್ರ್ಯ ಪೂರ್ವ ಇದ್ದಿದ್ದರೇ ಪಾಕಿಸ್ತಾನ ಇರತಿತ್ತಾ.

ಪಾಕಿಸ್ತಾನ ಮಾಡಲು ಹೊರಟವರು ತುಂಡಾಗಿ ಹೋಗುತ್ತಿದ್ದರು ಎಂದು ಮೋದಿ, ಅಮಿತ್ ಶಾ ಅವರನ್ನು ಕೊಂಡಾಡಿದ ಸಿ.ಟಿ.ರವಿ. ರೈತ ಪರ ಯೋಜನೆಗಳನ್ನ ಪ್ರಧಾನಮಂತ್ರಿ ಮೋದಿ ಜಾರಿಗೆ ತಂದಿದ್ದಾರೆ.

ರೈತರಿಗೆ ಯೋಜನೆ ರೂಪಿಸಿದ ಪಿಎಂ ಮೋದಿ ರೈತ ವಿರೋಧಿ ಆಗ್ತಾರಾ. ಜನಸೇವಕ ಸಮಾವೇಶದಲ್ಲಿ ಕೃಷಿ ತಿದ್ದುಪಡಿ ಕಾಯ್ದೆ, ಎಪಿಎಂಸಿ ಕಾಯ್ದೆ ಸಮರ್ಥಿಸಿಕೊಂಡ ಸಿ.ಟಿ.ರವಿ. ರೈತರು,

ಕಾರ್ಯಕರ್ತರು ಪ್ರಧಾನಮಂತ್ರಿ ನರೇಂದ್ರ ಪರ ಕೈ ಎತ್ತಿ ಹೇಳಬೇಕೂ. ನಮ್ಮ ಪ್ರಧಾನಮಂತ್ರಿ ಪ್ರಧಾನಸೇವಕರಾಗಿ ಕೆಲಸ ಮಾಡಿದ್ದಾರೆ. ನಮ್ಮ ಪ್ರಧಾನಮಂತ್ರಿ ಪಾಕಿಸ್ತಾನ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಮಾಡಿದ್ರು.

ಹಾಗೇ ನಾವೆಲ್ಲರೂ ಗ್ರಾಮೀಣ ಪ್ರದೇಶದಲ್ಲಿ ಅನ್ಯಾಯ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಮಾಡಬೇಕೆಂದು ಎಂದು ಮಾತನಾಡಿದರು.