ಸಿಎಂ ಠಾಕ್ರೆ ಹೇಳಿಕೆಗೆ ಬಿ ಎಸ್ ವೈ ಗರಂ

0

ಉಡುಪಿ, ಜ. 18- ಯಾವ ಕಾರಣಕ್ಕೂ ರಾಜ್ಯದ ಒಂದಿಂಚು ಭೂಮಿಯನ್ನು ಮಹಾರಾಷ್ಟ್ರಕ್ಕೆ ಬಿಟ್ಟು ಕೊಡುವ ಪ್ರಶ್ನೆ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಆದಿ ಉಡುಪಿಯ ಹೆಲಿಪ್ಯಾಡ್‌ನಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆಯ ಉದ್ಧಟತನದ ಹೇಳಿಕೆ ಭಾರತದ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ. ಮಹಾಜನ್ ವರದಿ ಅಂತಿಮವಾಗಿದ್ದರೂ ಗಡಿ ವಿವಾದ ತೆಗೆಯುತ್ತಿರುವುದು ಖಂಡನೀಯ’ ಎಂದರು.

ರಾಜ್ಯದಲ್ಲಿ ಮರಾಠಿಗರು ಹಾಗೂ ಕನ್ನಡಿಗರು ಒಂದೇ ತಾಯಿ ಮಕ್ಕಳಂತೆ ಬದುಕುತ್ತಿದ್ದಾರೆ. ಗಡಿ ಜಿಲ್ಲೆಗಳಲ್ಲಿ ಸೌಹಾ ರ್ದಯುತ ವಾತಾವರಣ ಕೆಡಿಸುವ ಹಾಗೂ ಅಶಾಂತಿ ಮೂಡಿಸುವ ಕೆಲಸ ಸರಿಯಲ್ಲ. ಗಡಿ ಕುರಿತ ವಿವಾದಾತ್ಮಕ ಹೇಳಿಕೆಗಳು ಉದ್ಧವ್ ಠಾಕ್ರೆಗೆ ಗೌರವ ತರುವಂಥದಲ್ಲ ಎಂದರು.

ಮುಖ್ಯಮಂತ್ರಿ ಯಡಿಯೂರಪ್ಪ ಕೃಷ್ಣಮಠದಲ್ಲಿ ಪರ್ಯಾಯ ಪಂಚ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ದ್ದಾರೆ.