ಬೆಳಗಾವಿಯಲ್ಲಿ ಸಚಿವ ಸುಧಾಕರ ಕಾರಿಗೆ ಮುತ್ತಿಗೆ

0

ಬೆಳಗಾವಿ: ಗಡಿನಾಡು ಬೆಳಗಾವಿಯಲ್ಲಿ ಆರೋಗ್ಯ ಸಚಿವ ಡಾ. ಕೆ.ಸುಧಾಕರ ಕಾರಿಗೆ ಕರವೇ ಕಾರ್ಯಕರ್ತರು ಅಡ್ಡಗಟ್ಟಿ ಘೇರಾವ ಹಾಕಿದ್ದಾರೆ. ನಾರಾಯಣಗೌಡ ಯಾರು ನನಗೆ ಗೊತ್ತಿಲ್ಲ ಎಂದು ಹೇಳಿದ್ದಕ್ಕೆ ಬೆಳಗಾವಿಯಲ್ಲಿ ಸಚಿವ ಡಾ.ಕೆ.ಸುಧಾಕರ್ ವಿರುದ್ಧ ಕರವೇ ಕಾರ್ಯಕರ್ತರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.‌ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆರೋಗ್ಯ ಇಲಾಖೆ ಪ್ರಗತಿ ಪರಿಶೀಲನೆ ಸಭೆ ಮುಗಿಸಿ ಹೋಗುತ್ತಿದ್ದ ಸಚಿವರಿಗೆ ಕರವೇ ಅಧ್ಯಕ್ಷ ನಾರಾಯಣಗೌಡ ಬಣದ ಕಾರ್ಯಕರ್ತರು ಮುತ್ತಿಗೆ ಹಾಕಿ ಧಿಕ್ಕಾರ ಕೂಗಿದ್ದಾರೆ. ಕರವೇ ಮುಖಂಡರಿಗೆ ನಿಪ್ಪಾಣಿ ಯಲ್ಲಿ ನಾನು ಸರ್ಕಾರಿ ಕಾರ್ಯಕ್ರಮ ಮುಗಿಸಿಕೊಂಡು, ಖಾಸಗಿ ಕಾರ್ಯಕ್ರಮ ಕ್ಕೆ ಹೋಗಿದ್ದೆ ರಾಜೀನಾಮೆ ಕೇಳಿದ ನಾರಾಯಣಗೌಡ ಯಾರು ಅಂತಾ ಗೊತ್ತಿಲ್ಲ ಎಂದು ಹೇಳಿರುವೆ ಎಂದು ಸಚಿವ ಸುಧಾಕರ ಸಮಜಾಯಿಷಿ ಹೇಳಿದ್ದಾರೆ.