ರಾಮದುರ್ಗ, ಜ. 19- ಪಟ್ಟಣದ ನವೀಪೇಟೆಯಲ್ಲಿ ಒಂದೇ ಕುಟುಂಬ ನಾಲ್ವರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಗೊಬ್ಬರದ ವರ್ತಕರಾಗಿದ್ದ ಪ್ರವೀಣ ರಮೇಶ ಶೆಟ್ಟರ (37), ಅವರ ಪತ್ನಿ ರಾಜೇಶ್ವರಿ (30), ಮಕ್ಕಳಾದ ಅಮೃತಾ (8) ಮತ್ತು ಅದ್ವಿಕ್ (5) ಮೃತರು ಎಂದು ಗೊತ್ತಾಗಿದೆ.
ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ‘ವ್ಯಾಪಾರ ಚೆನ್ನಾಗಿತ್ತು. ಹೆಂಡತಿ ಮಕ್ಕಳೊಂದಿಗೆ ಚನ್ನಾಗಿ ಇದ್ದರು ಎಂದು ನೆರೆಹೊರೆಯವರು ತಿಳಿಸಿದರು.
ಸ್ಥಳಕ್ಕೆ ಶಾಸಕ ಮಹಾದೇವಪ್ಪ ಯಾದವಾಡ, ಡಿಎಸ್ಪಿ ಶಂಕರಗೌಡ ಪಾಟೀಲ, ಸಿಪಿಐ ಶಶಿಕಾಂತ ವರ್ಮಾ, ಪಿಎಸ್ಐ ನಾಗನಗೌಡ ಕಟ್ಟಿಮನಿ ಗೌಡ್ರು, ಮುಖಂಡ ಮಲ್ಲಣ್ಣ ಯಾದವಾಡ ಭೇಟಿ ನೀಡಿದ್ದರು. ರಾಮದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.