ಹೆಸರಿಗೆ ಕಿರಾಣಿ ಅಂಗಡಿ ಹಾಕಿಕೊಂಡು ಒಳಗೆ ಮಟಕಾ ದಂಧೆ ನಡೆಸುತ್ತಿದ್ದ ಕಿಲಾಡಿಯನ್ನು ಡಿಸಿಪಿ ವಿಕ್ರಂ ಆಮಟೆ ಮಾರ್ಗದರ್ಶನದಲ್ಲಿ  ಕಾಕತಿ ಪಿಎಸ್ಐ ಅವಿನಾಶ ಯರಗೊಪ್ಪ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

0

ಹೆಸರಿಗೆ ಕಿರಾಣಿ ಅಂಗಡಿ ಹಾಕಿಕೊಂಡು ಒಳಗೆ ಮಟಕಾ ದಂಧೆ ನಡೆಸುತ್ತಿದ್ದ ಕಿಲಾಡಿಯನ್ನು ಡಿಸಿಪಿ ವಿಕ್ರಂ ಆಮಟೆ ಮಾರ್ಗದರ್ಶನದಲ್ಲಿ  ಕಾಕತಿ ಪಿಎಸ್ಐ ಅವಿನಾಶ ಯರಗೊಪ್ಪ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಳಗಾವಿ ತಾಲೂಕಿನ ಕಾಕತಿ, ಹೊನಗಾ, ಜುಮನಾಳ, ದೇವಗಿರಿ ಹಾಗೂ ಅನೇಕ ಗ್ರಾಮಗಳಲ್ಲಿ ಹಲವು ಬಾರಿ ಮಟಕಾ ಆರೋಪದ ಪ್ರಕರಣಗಳಲ್ಲಿ ಜೈಲು ಸೇರಿ ಪೋಲೀಸರಿಂದ ಗಡಿಪಾರಿಗೆ ಶಿಪಾರಸ್ಸು ಮಾಡಿರುವ ವ್ಯಕ್ತಿ ಮತ್ತೆ ಹೊನಗಾ ಗ್ರಾಮದ ಬಸ್ ಸ್ಟ್ಯಾಂಡ್ ನಲ್ಲಿ ಎರಡು ಅಂಗಡಿಗಳನ್ನು ಹಾಕಿಕೊಂಡು ಕಿರಾಣಿ, ಪಾನ ಮಸಾಲಾ, ಕಾಯಿಪಲ್ಲೆ ಮಾರುವಂತೆ ಸೋಗು ಹಾಕಿ ಹಲವು ದಿನಗಳಿಂದ ವ್ಯವಸ್ಥಿತವಾಗಿ ಮಟಕಾ ದಂಧೆ ನಡೆಸುತ್ತಿದ್ದನು. ಇದರ ಬಗ್ಗೆ  ಮಾಹಿತಿ ಪಡೆದ ಹಿರಿಯ ಪೋಲಿಸ್ ಅಧಿಕಾರಿಗಳು ಕಾಕತಿ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ಪಿಎಸ್ಐ ಅವಿನಾಶ ಹಾಗೂ ಸಿಬ್ಬಂದಿ ಆರೋಪಿ ಬೈರು ಅಪ್ಪಯ್ಯಾ ನಾಯಿಕ (44) ಎನ್ನುವನನ್ನು ಬಂಧಿಸಿದ್ದಾರೆ.

ಇಂದು (ಜ.19) ರಂದು ಬೆಳಗ್ಗೆ ದಾಳಿ ನಡೆಸಿದ ಪೋಲಿಸರು ಆರೋಪಿ ಭೈರು ಕಡೆಯಿಂದ ಸಾವಿರಾರು ರೂಪಾಯಿ ನಗದು, ಮಟಕಾ ಚೀಟಿ ವಶಪಡಿಸಿಕೊಂಡಿದ್ದಾರೆ. ದಾಳಿ ನಡೆದ ವೇಳೆಯಲ್ಲಿ ಈತ ಪರಾರಿಯಾಗಲು ಪ್ರಯತ್ನಿಸಿದ್ದಾನೆ. ಅಷ್ಟರಲ್ಲಿ ಪಿಎಸ್ಐ ವಶಕ್ಕೆ ಪಡೆದಿದ್ದಾರೆ. ಪಕ್ಕದ ಪಾನ್ ಶಾಪ್ ಅಂಗಡಿಯಲ್ಲಿ ಆತನ ಹೆಂಡತಿ ಕೂಡ ಮಟಕಾ ನಡೆಸುತ್ತಿದ್ದಾಗಿ ತಿಳಿದು ಬಂದಿದೆ. ಆದರೆ ಸಾಕ್ಷಿ ಕೊರತೆಯಿಂದಾಗಿ ಬಚಾವ ಆಗಿರುವುದಾಗಿ ತಿಳಿದಿದೆ.

ಗಡಿಪಾರ ಆಗಬೇಕಿದ್ದವ ಈಗ ಡೀಲ್ ಮಾಸ್ಟರ್ ..!

ಹಿಂದಿನ ಪಿಐ ಶ್ರೀಶೈಲ ಕೌಜಲಗಿ ಭೈರು ನಾಯಿಕನ ಮಟಕಾ ದಂಧೆ ಉಪಟಳ ತಾಳಲಾರದೆ ಈತನನ್ನು ಕಾಕತಿ ಪೋಲಿಸ್ ಠಾಣೆ ವ್ಯಾಪ್ತಿಯಿಂದ ಗಡಿಪಾರ ಮಾಡುವಂತೆ ಶಿಫಾರಸ್ಸು ಮಾಡಿದ್ದರು. ಆದರೆ, ಅಷ್ಟರಲ್ಲೇ ಅವರ ವರ್ಗಾವಣೆಯಾದ ಕಾರಣ ಆ ಫೈಲ್ ಧೂಳು ತಿನ್ನುತ್ತಿದೆ.

ಇದೇ ಅವಕಾಶಕ್ಕಾಗಿ ಕಾಯುತ್ತಿದ್ದ ಭೈರು 25000/- ರೂಪಾಯಿ ಡೀಲ್ ಮಾಡಿಕೊಂಡು ಬಸ್ ಸ್ಟ್ಯಾಂಡ್ ನಲ್ಲೇ ಮಟಕಾ ದಂಧೆ ನಡೆಸುತ್ತಿದ್ದಾನೆ. ಆತ 25000/- ರೂಪಾಯಿ ಕೊಟ್ಟು ಮಟಕಾ ದಂಧೆ ನಡೆಸುತ್ತಿರುವ ಬಗ್ಗೆ ಊರೆಲ್ಲ ಡಂಗುರ ಸಾರಿ ಆ ಅಧಿಕಾರಿಗೆ  “ಪಂಚವೀಸ್ ಅಧಿಕಾರಿ” ಎಂದು ಹೆಸರಿಟ್ಟು ಮಾನ ಕಳೆಯುತ್ತಿದ್ದಾಗಿ ತಿಳಿದಿದೆ.

ಇಂದು ಡಿಸಿಪಿ ಆಮಟೆ ಅವರ ಮಾರ್ಗದರ್ಶನದಲ್ಲಿ ನಡೆದ ದಾಳಿ ನಾಳೆಯಿಂದ ಕಾಕತಿ, ಹೊನಗಾದಲ್ಲಿ ಮಟಕಾ ದಂಧೆ ನಿಲ್ಲಿಸುತ್ತಾ? ಕಾದು ನೋಡಬೇಕಿದೆ.

ಕಾಕತಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಐ  ಹಳ್ಳೂರ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.