ಓರ್ವ ಮಹಿಳೆ, ಓರ್ವ ಪುರುಷ ನಾಪತ್ತೆ

0

ಅನಗೋಳ ನಿವಾಸಿಯಾದ ಸ್ವಾತಿ ಸದಾನಂದ ಕಮ್ಮಾರ ಜ.೪ ರಂದು ಮುಂಜಾನೆ ೯ ಗಂಟೆಗೆ ಪಾಂಗೂಳ ಗಲ್ಲಿಯಲ್ಲಿರುವ ಸಾಯಿ ಲಕ್ಷ್ಮೀ ಇಂಡೋಲಿಯನ್ ಬಟ್ಟೆ ಅಂಗಡಿಗೆ ಕೆಲಸಕ್ಕೆ ಹೋಗಿ ಬರುತ್ತೇನೆ ಎಂದು ಮನೆಯಲ್ಲಿ ಹೇಳಿ ಅಂಗಡಿ ಕೆಲಸಕ್ಕೆ ಬಂದು ಸಂಜೆ ೪ ಗಂಟೆಯವರೆಗೆ ಅಂಗಡಿಯಲ್ಲಿ ಕೆಲಸ ಮಾಡಿ ನಂತರ ಅಂಗಡಿಯ ಮಾಲಿಕರಿಂದ ೧೪೦೦ ರೂ ತೆಗೆದುಕೊಂಡು ನಾಳೆಯಿಂದ ಅಂಗಡಿ ಕೆಲಸಕ್ಕೆ ಬರುವುದಿಲ್ಲ ಅಂತಾ ಅಂಗಡಿ ಮಾಲಿಕರಿಗೆ ಹೇಳಿ ಮರಳಿ ಮನೆಗೆ ಬಾರದೇ ಎಲ್ಲೀಯೋ ಕಾಣೆಯಾಗಿದ್ದಾರೆ ಎಂದು ಬೆಳಗಾವಿ ಮಾರ್ಕೇಟ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ವಾತಿ ಸದಾನಂದ ಕಮ್ಮಾರ (೧೯ ವರ್ಷ) ೫ ಪೂಟ ೧ ಇಂಚು ಎತ್ತರವಿದ್ದು, ಗೋದಿ ಕೆಂಪು ಮುಖದ ಬಣ್ಣ, ದುಂಡು ಮುಖ, ಚೂಪಾದ ಮೂಗು, ಕಪ್ಪು ಕೂದಲು, ಸದೃಢ ಮೈಕಟ್ಟು ಹೊಂದಿರುತ್ತಾರೆ. ಅರಿಶಿಣ ಕಲರ್ ಚೂಡಿ, ಕಪ್ಪು ಬಣ್ಣದ ಪ್ಯಾಂಟ ಧರಿಸಿರುತ್ತಾರೆ. ಮರಾಠಿ, ಕನ್ನಡ, ಹಿಂದಿ ಭಾಷೆ ಮಾತನಾಡುತ್ತಾರೆ.
ಈ ಪ್ರಕಾರ ಚಹರೆಯುಳ್ಳ ಮಹಿಳೆ ಬಗ್ಗೆ ಸುಳಿವು ಸಿಕ್ಕಲ್ಲಿ ದೂರವಾಣಿ ಸಂಖ್ಯೆ ೦೮೩೧-೨೪೦೫೨೪೨ ಗೆ ಸಂಪರ್ಕಿಸಿ ಎಂದು ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆಯ ಪ್ರಕಟಣೆ ತಿಳಿಸಿದೆ.

ವ್ಯಕ್ತಿ ನಾಪತ್ತೆ

ವಡಗಾವಿ ನಿವಾಸಿಯಾದ ವಿನಾಯಕ ರುದ್ರಪ್ಪ ಶಿರೋಳಕರ ಜ.೧೫ ರಂದು ಮಧ್ಯಾಹ್ನ ೩ ಗಂಟೆಗೆ ಮನೆಯಲ್ಲಿ ಹೇಳದೆ ಕೇಳದೇ ಮನೆಯಿಂದ ಹೋದವನು ಇಲ್ಲಿಯವರೆಗೆ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದಾನೆ ಎಂದು ಶಹಾಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿನಾಯಕ ರುದ್ರಪ್ಪ ಶಿರೋಳಕರ (೪೫ ವರ್ಷ) ಕೋಲು ಮುಖ, ೫ ಪೂಟ ೪ ಇಂಚು ಎತ್ತರ, ನೆಟ್ಟನೆ ಮೂಗು, ಸದೃಢ ಮೈಕಟ್ಟು, ಮೈಬಣ್ಣ ಗೋಧಿಗೆಂಪು, ಗುಟ್ಕಾ ತಿನ್ನುವುದು, ಸಾರಾಯಿ ಕುಡಿಯುವುದು ಹವ್ಯಾಸ ಬಲಗಡೆ ಗಲ್ಲದ ಮೇಲೆ ಹಳೆ ಗಾಯದ ಕಲೆ ಇರುತ್ತದೆ. ಕರಿ ಬಣ್ಣದ ಟೀ-ಶರ್ಟ, ಬಿಳಿ ಬಣ್ಣದ ಬರ್ಮೋಡಾ ಧರಿಸಿದ್ದಾನೆ. ಮರಾಠಿ, ಕನ್ನಡ, ಹಿಂದಿ ಭಾಷೆ ಮಾತನಾಡುತ್ತಾನೆ.
ಈ ಪ್ರಕಾರ ಚಹರೆಯುಳ್ಳ ಕಾಣೆಯಾದ ಗಂಡಸಿನ ಬಗ್ಗೆ ಮಾಹಿತಿ ಸಿಕ್ಕಲ್ಲಿ ಶಹಾಪೂರ ಪೋಲಿಸ್ ಠಾಣೆ ದೂರವಾಣಿ ಸಂಖ್ಯೆ: ೦೮೩೧-೨೪೦೫೨೪೪, ಪಿ. ಐ. ಶಹಾಪೂರ ಪಿಎಸ್. ಮೋ ನಂ: ೯೪೮೦೮೦೪೦೪೬ಗೆ ಸಂಪರ್ಕಿಸಿ ಎಂದು ಶಹಾಪೂರ ಪೋಲಿಸ್ ಠಾಣೆಯ ಪ್ರಕಟಣೆ ತಿಳಿಸಿದೆ.