ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಸಮಾಜದಲ್ಲಿ ವೈಚಾರಿಕ ಚಿಂತನೆ ಬೆಳಸಿದ ಮೊದಲ ಶರಣರು ಅಂಬಿಗರ ಚೌಡಯ್ಯ: ಡಾ. ವಾಯ್.ಎಂ. ಯಾಕೊಳ್ಳಿ

0

ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ
ಸಮಾಜದಲ್ಲಿ ವೈಚಾರಿಕ ಚಿಂತನೆ ಬೆಳಸಿದ ಮೊದಲ ಶರಣರು ಅಂಬಿಗರ ಚೌಡಯ್ಯ: ಡಾ. ವಾಯ್.ಎಂ. ಯಾಕೊಳ್ಳಿ

ಬೆಳಗಾವಿ, ಜ. 21 : ಸಮಾಜದ ತಪ್ಪು ತಿದ್ದುವಲ್ಲಿ ಶಿಕ್ಷಕನ ಪಾತ್ರ ನಿರ್ವಹಿಸಿ, ಸಮಾಜ ಬದಲಾವಣೆಯಲ್ಲಿ ವಚನಗಳ ಮೂಲಕ ನೇರವಾಗಿ ವೈಚಾರಿಕ ಚಿಂತನೆ ಬೆಳಸಿದ ಮೊದಲ ಶರಣರು ಅಂಬಿಗರ ಚೌಡಯ್ಯನವರು ಎಂದು ಯಕ್ಕುಂಡಿಯ ಸರಕಾರಿ ಪದವಿಪೂರ್ವ ಕಾಲೇಜು ಪ್ರಾಚಾರ್ಯರಾದ ಡಾ. ವಾಯ್.ಎಂ. ಯಾಕೊಳ್ಳಿ ಅವರು ತಿಳಿಸಿದರು. ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಂಯುಕ್ತ ಆಶ್ರಯದಲ್ಲಿ ಗುರುವಾರ (ಜ.21) ಬಸವರಾಜ ಕಟ್ಟೀಮನಿ ಸಭಾಂಗಣದಲ್ಲಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಉತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಚನ ಸಾಹಿತ್ಯದ ಶರಣರಲ್ಲಿ ಚೌಡಯ್ಯನವರು ವಿಶೇಷ ಶರಣರು, ಸಮಾಜದಲ್ಲಿ ನಡೆಯುವ ತಪ್ಪುಗಳನ್ನು ಬಹಳ ಕಟುವಾಗಿ ಟೀಕಿಸಿದರು. ಸಮಾಜದಲ್ಲಿ ವೈಚಾರಿಕ ಚಿಂತನೆ ಬೆಳಸುವುದರ ಜೊತೆಗೆ ಅವರು ಸಮಾಜದ ತಪ್ಪುಗಳನ್ನು ತಮ್ಮ ವಚನ ಸಾಹಿತ್ಯದ ಮೂಲಕ ನೇರವಾಗಿ ವಿರೋಧಿದರು ಎಂದು ಹೇಳಿದರು.
ಸಮಾಜದಲ್ಲಿನ ಲೋಪದೋಷಗಳನ್ನು ವ್ಯಂಗ್ಯ ಮಾಡುವುದರ ಮೂಲಕ ಬದಲಾವಣೆ ತಂದವರು ಹಾಗೂ ಯುವ ಜನತೆ ನಿಜಶರಣ ವಯಕ್ತಿಕ ಜೀವನದ ಕುರಿತು ತಿಳಿದುಕೊಳ್ಳಬೇಕು, ಅವರ ಪುಸ್ತಕ ಓದಿ ಮಾನವೀಯ ಮೌಲ್ಯಗಳನ್ನು ಯುವಕರು ಅರಿತುಕೊಳ್ಳಬೇಕು ಎಂದು ತಿಳಿಸಿದರು.
ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಜೀವನ ಚರಿತ್ರೆ, ವಚನ ಸಾಹಿತ್ಯ, ಅವರ ಮಾನವೀಯ ಮೌಲ್ಯಗಳ ಬಗ್ಗೆ ಉಪನ್ಯಾಸ ನೀಡಿದರು ಮತ್ತು ಜ್ಯೋತಿ ಬಸವರಾಜ ಕುರೇರ ಮತ್ತು ತಂಡದವರಿಂದ ವಚನ ಸಂಗೀತ ಕಾರ್ಯಕ್ರಮ ಪ್ರಸ್ತುತಪಡಿಸಿಲಾಯಿತು.
ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಅವರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಅಂಬಿಗರ ಸಮಾಜದ ಮುಖಂಡರಾದ ಮದುಶ್ರಿ ಪೂಜೇರಿ, ರಮೇಶ ಗಸ್ತಿ, ರವಿಶಂಕರ ಚನಾಳ, ಎಸ್.ಕೆ ಗುಸ್ರೆ, ಗೂಳಪ್ಪ ಉದಯನ್ನವರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.////

 

 

ಜ.29 ರಂದು ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆ

ಬೆಳಗಾವಿ, ಜ. 21 : ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆ ಜ.29 ಬೆಳಿಗ್ಗೆ 11 ಗಂಟೆಗೆ ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ./////

ಗಣರಾಜ್ಯೋತ್ಸವ: 26 ರಂದು ವಿಶೇಷ ಪ್ರಾರ್ಥನೆ

ಬೆಳಗಾವಿ, ಜ. 21  : ಜ.26 ಗಣರಾಜ್ಯೋತ್ಸವ ದಿನಾಚರಣೆ ನಿಮಿತ್ಯ ಅಂದು ಬೆಳಿಗ್ಗೆ 6 ರಿಂದ 7 ಗಂಟೆಯವರೆಗೆ ಎಲ್ಲ ಸಾರ್ವಜನಿಕ ದೇವಾಲಯ, ಮಂದಿರ, ಮಸೀದಿ, ಚರ್ಚ್, ಗುರುದ್ವಾರ, ಬೌದ್ಧ ಮಂದಿರ, ಹಾಗೂ ಜೈನ ಬಸದಿಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ./////

ಜ.27 ರಂದು ಉದ್ಯೋಗ ಮೇಳ

ಬೆಳಗಾವಿ, ಜ. 21 : “ರಾಷ್ಟ್ರೀಯ ವೃತ್ತಿ ಸೇವಾ ಯೋಜನೆ” (ಓಅS) ಅಡಿಯಲ್ಲಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಬೆಳಗಾವಿ ವತಿಯಿಂದ ಜ.27 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 3.30 ಗಂಟೆಗಳ ವರೆಗೆ ಭಾವುರಾವ್ ಕಾಕತ್ಕರ್ ಪದವಿ ಮಹಾವಿದ್ಯಾಲಯ, ಕ್ಲಬ್ ರಸ್ತೆ, ಬೆಳಗಾವಿ ಇಲ್ಲಿ “ಉದ್ಯೋಗ ಮೇಳ” ವನ್ನು ಹಮ್ಮಿಕೊಳ್ಳಲಾಗಿದೆ.
ಎಸ್.ಎಸ್.ಎಲ್.ಸಿ., ಪಿ.ಯು.ಸಿ., ಐ.ಟಿ.ಐ., ಡಿಪ್ಲೋಮಾ, ಪದವಿ (ಇಂಜಿನಿಯರಿಂಗ್ ಪದವಿ ಹೊರೆತುಪಡಿಸಿ) ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗಾಗಿ ಈ ಉದ್ಯೋಗಮೇಳವನ್ನು ಆಯೋಜಿಸಲಾಗಿದೆ. ಉದ್ಯೋಗಾವಕಾಶವು ಉಚಿತವಾಗಿದ್ದು, ಇನ್ನುಳಿದ ಯಾವುದೇ ಸೌಲಭ್ಯಗಳು ಇರುವುದಿಲ್ಲ. ಉದ್ಯೋಗಮೇಳ ನಡೆಯುವ ಸ್ಥಳದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು.
ಸದರಿ ಮೇಳದಲ್ಲಿ 20ಕ್ಕೂ ಹೆಚ್ಚು ಖಾಸಗಿ ಕಂಪನಿಗಳು ಭಾಗವಹಿಸಲಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಳಿಗಾಗಿ ಈ ಕಛೇರಿಯನ್ನು ಖುದ್ದಾಗಿ ಅಥವಾ ಮೊಬೈಲ್ ಸಂಖ್ಯೆ: 9743166178/ 8867262751 ಸಂಪರ್ಕಿಸಿ ಎಂದು ಬೆಳಗಾವಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಸಹಾಯಕ ನಿರ್ದೇಶಕರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ./////

ಎಫ್‍ಡಿಎ ಪರೀಕ್ಷೆ: ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆ

ಬೆಳಗಾವಿ, ಜ. 21 : ಸಹಾಯಕ/ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ಪರೀಕ್ಷಾ (ಜ.24) ರಂದು ನಡೆಯುವ ಸಮಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಹಿತ ದೃಷ್ಟಿಯಿಂದ ಪರೀಕ್ಷಾ ಕೇಂದ್ರಗಳ ಸುತ್ತ ಮುತ್ತ ಮುಂಜಾಗ್ರತಾ ಕ್ರಮವಾಗಿ 200 ಮೀ. ವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ನಿಷೇಧಾಜ್ಞೆ ಹೊರಡಿಸಿದ್ದಾರೆ. ಕಾನೂನು ಭಂಗ ಉಂಟು ಮಾಡುವ ಉದ್ದೇಶದಿಂದ ಐದು ಅಥವಾ ಐದಕ್ಕಿಂತ ಹೆಚ್ಚು ಜನರು ಗುಂಪು ಸೇರಿ ತಿರುಗಾಡುವುದನ್ನು, ಪರೀಕ್ಷೇಯಲ್ಲಿ ಭಾಗವಹಿಸುತ್ತಿರುವ ವಿದ್ಯಾರ್ಥಿಗಳಿಗೆ ನಕಲು ಮಾಡಲು ಸಹಾಯ ಮಾಡುವ ಉದ್ದೇಶದಿಂದ ಪರೀಕ್ಷಾ ಕೇಮದ್ರದ ಹತ್ತಿರ ಬರುವುದನ್ನು, ಸಾರ್ವಜನಿಕ ಸಭೆ, ಮೆರವಣಿಗೆ ಮಾಡುವುದನ್ನು ನಿಷೇಧಿಸಿದ್ದಾರೆ.
ಆಯುಧ, ಮಾರಕಾಸ್ತ್ರ, ಸ್ಫೋಟಕ ವಸ್ತುಗಳನ್ನು ತೆಗೆದುಕೊಂಡು ತಿರುಗಾಡುವುದನ್ನು, ಪಟಾಕಿ, ಸಿಡಿಮದ್ದು ಸಿಡಿಸುವುದನ್ನು, ಸರ್ಕಾರಿ ಬಸ್ಸು ಹಾಗೂ ಇತರೆ ವಾಹನಗಳಿಗೆ ಅಡೆತಡೆ ಉಂಟುಮಾಡುವುದನ್ನು, ಪರೀಕ್ಷಾ ಕೇಂದ್ರಗಳ 200 ಮೀ. ಒಳಗಿನ ಝೆರಾಕ್ಸ್ ಅಂಗಡಿಗಳನ್ನು ಬಂದ್ ಮಾಡಲಾಗುತ್ತದೆ.
ವಿದ್ಯಾರ್ಥಿಗಳು, ಸಿಬ್ಬಂದಿಗಳು, ಸರ್ಕಾರದಿಂದ ನೇಮಿಸಿದ ಅಧಿಕಾರಿಗಳು ಹಾಗೂ ಪರೀಕ್ಷಾ ಕೇಂದ್ರಗಳಿಗೆ ನಿಯೋಜಿಸಿದ ಆರಕ್ಷಕ ಸಿಬ್ಬಂದಿಗಳನ್ನು ಹೊರತುಪಡಿಸಿ ಉಳಿದವರಿಗೆ ಶಾಲಾ ಆವರಣದಲ್ಲಿ ಪ್ರವೇಶವನ್ನು ನಿರ್ಬಂಧಿಸಿದೆ.
ಈ ವಿಷಯವಾಗಿ ಮುಂದಿನ ಸೂಕ್ತ ಕ್ರಮವನ್ನು ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅವರು ಆದೇಶ ಹೊರಡಿಸಿದ್ದಾರೆ./////

ಲೋಕಾಯುಕ್ತ ಅಧಿಕಾರಿಗಳಿಂದ ಜ. 25 ರಿಂದ ದೂರು ಸ್ವೀಕಾರ

ಬೆಳಗಾವಿ, ಜ. 21 : ಕರ್ನಾಟಕ ಲೋಕಾಯುಕ್ತ ಬೆಳಗಾವಿ ಇವರಿಂದ ಜ.25 ರಿಂದ 30 ರವರೆಗೆ ಕರ್ನಾಟಕ ಲೋಕಾಯುಕ್ತ ಕಾಯ್ದೆ ಅಡಿಯಲ್ಲಿ ಸಾರ್ವಜನಿಕರಿಂದ ಭರ್ತಿ ಮಾಡಿದ ಮತ್ತು ನೋಟರಿಯಿಂದ ಅಪಡವಿಟ್ ಮಾಡಿಸಿದ ಅರ್ಜಿಗಳನ್ನು ಸ್ವೀಕರಿಸಲಾಗುವುದು ಎಂದು ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ. ರಾಮದುರ್ಗ ತಾಲೂಕಿನ ಸಂಬಂಧಿಸಿದಂತೆ (ಜ. 25) ರಂದು ರಾಮದುರ್ಗ ಪ್ರವಾಸಿ ಮಂದಿರದಲ್ಲಿ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 02 ಗಂಟೆಯವರೆಗೆ ಡಿ.ಎಸ್.ಪಿ. ಜೆ.ರಘು ಅವರು ಹಾಗೂ ಸವದತ್ತಿ ತಾಲೂಕಿನ ಸಂಬಂಧಿಸಿದಂತೆ (ಜ. 25) ರಂದು ಸವದತ್ತಿ ಪ್ರವಾಸಿ ಮಂದಿರದಲ್ಲಿ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 02 ಗಂಟೆಯವರೆಗೆ ಪೊಲೀಸ್ ಇನ್‍ಸ್ಪೆಕ್ಟರ್ ಎಂ.ಎಂ.ತಹಶೀಲ್ದಾರ ಅವರು ಅಹವಾಲು ಸ್ವೀಕರಿಸುತ್ತಾರೆ.
ಖಾನಾಪೂರ ತಾಲೂಕಿನ ಸಂಬಂಧಿಸಿದಂತೆ (ಜ. 27) ರಂದು ಖಾನಾಪೂರ ಪ್ರವಾಸಿ ಮಂದಿರದಲ್ಲಿ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 02 ಗಂಟೆಯವರೆಗೆ ಪೊಲೀಸ್ ಇನ್‍ಸ್ಪೆಕ್ಟರ್ ಯಶೋಧಾ ವಂಟಗೋಡಿ ಅವರು ಹಾಗೂ ಅಥಣಿ & ಕಾಗವಾಡ ತಾಲೂಕಿನ ಸಂಬಂಧಿಸಿದಂತೆ (ಜ. 27) ರಂದು ಅಥಣಿ ಪ್ರವಾಸಿ ಮಂದಿರದಲ್ಲಿ ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಪೊಲೀಸ್ ಇನ್‍ಸ್ಪೆಕ್ಟರ್ ಎಸ್.ಡಿ.ಹಳ್ಳೂರ ಅವರು ಅಹವಾಲು ಸ್ವೀಕರಿಸುತ್ತಾರೆ.
ಗೋಕಾಕ & ಮೂಡಲಗಿ ತಾಲೂಕಿನ (ಜ. 28) ಗೋಕಾಕ ಪ್ರವಾಸಿ ಮಂದಿರದಲ್ಲಿ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 02 ಗಂಟೆಯವರೆಗೆ ಡಿ.ಎಸ್.ಪಿ. ಜೆ.ರಘು ಅವರು ಹಾಗೂ ಚಿಕ್ಕೋಡಿ & ನಿಪ್ಪಾಣಿ ತಾಲೂಕಿನ (ಜ. 28) ಅಥಣಿ ಪ್ರವಾಸಿ ಮಂದಿರದಲ್ಲಿ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಪೊಲೀಸ್ ಇನ್‍ಸ್ಪೆಕ್ಟರ್ ಪಿ.ಆರ್.ಧಬಾಲಿ ಅವರು ಹಾಗೂ ರಾಯಬಾಗ ತಾಲೂಕಿನ (ಜ.28) ರಾಯಬಾಗ ಪ್ರವಾಸಿ ಮಂದಿರದಲ್ಲಿ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಪೊಲೀಸ್ ಇನ್‍ಸ್ಪೆಕ್ಟರ್ ಎಸ್.ಡಿ.ಹಳ್ಳೂರ ಅವರು ಅಹವಾಲು ಸ್ವೀಕರಿಸುತ್ತಾರೆ.
ಬೈಲಹೊಂಗಲ & ಕಿತ್ತೂರ ತಾಲೂಕಿನ (ಜ. 29) ಬೈಲಹೊಂಗಲ ಪ್ರವಾಸಿ ಮಂದಿರದಲ್ಲಿ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 02 ಗಂಟೆಯವರೆಗೆ ಪೊಲೀಸ್ ಇನ್‍ಸ್ಪೆಕ್ಟರ್, ಎಂ.ಎಂ.ತಹಶೀಲ್ದಾರ ಅವರು ಅಹವಾಲು ಸ್ವೀಕರಿಸುತ್ತಾರೆ.
ಹುಕ್ಕೇರಿ ತಾಲೂಕಿನ (ಜ. 27) ಹುಕ್ಕೇರಿ ಪ್ರವಾಸಿ ಮಂದಿರದಲ್ಲಿ ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಪೊಲೀಸ್ ಇನ್‍ಸ್ಪೆಕ್ಟರ್ ಪಿ.ಆರ್.ಧಬಾಲಿ ಅವರು ಅಹವಾಲು ಸ್ವೀಕರಿಸುತ್ತಾರೆ.
ಸರ್ಕಾರಿ ಕಛೇರಿಗಳಲ್ಲಿ ಅಧೀಕೃತ ಕೆಲಸಗಳನ್ನು ಮಾಡಿಕೊಡುವಲ್ಲಿ ವಿಳಂಬ ಹಾಗೂ ಇನ್ನಿತರೆ ತೊಂದರೆ ನೀಡುತ್ತಿರುವ ಅಧಿಕಾರಿ/ನೌಕರರ ವಿರುದ್ಧ ಸಾರ್ವಜನಿಕರು ದೂರುಗಳನ್ನು ನಿಗದಿತ ಪ್ರಪತ್ರದಲ್ಲಿ ನೀಡುವುದು.

ಸ್ಥಳದಲ್ಲಿ ಪರಿಹಾರ ಕಂಡುಕೊಳ್ಳಬಹುದಾದ ದೂರುಗಳನ್ನು ಅಲ್ಲಿನ ಸ್ಥಳೀಯ ಅಧಿಕಾರಿಗಳ ಸಹಕಾರದೊಂದಿಗೆ ಇತ್ಯರ್ಥಪಡಿಸಲು ಪ್ರಯತ್ನಿಸಲಾಗುವುದು. ಹೆಚ್ಚಿನ ವಿವರಗಳಿಗಾಗಿ ಈ ಕಛೇರಿ ದೂರವಾಣಿ ಸಂಖ್ಯೆ: 0831-2950756 ಮತ್ತು 0831-2421922, ಸಂಪರ್ಕಿಸಿ ಎಂದು ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ./////

ವ್ಹಿ.ಆರ್.ಡಬ್ಲ್ಯೂ.ಗಳ ನೇಮಕಾತಿ: ವಿಕಲಚೇತನ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಬೆಳಗಾವಿ, ಜ. 21 : ಗೋಕಾಕ ಮತ್ತು ಮೂಡಲಗಿ ತಾಲೂಕಿನ ವ್ಯಾಪ್ತಿಯ ಒಟ್ಟು 16 ಗ್ರಾಮ ಪಂಚಾಯತಿಗಳಲ್ಲಿ ಖಾಲಿ ಇರುವ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ (ವ್ಹಿ. ಆರ್. ಡಬ್ಲ್ಯೂ.) 16 ಹುದ್ದೆಗಳನ್ನು ಇಲಾಖೆಯ ಗ್ರಾಮೀಣ ಪುನರ್ವಸತಿ ಯೋಜನೆಯಡಿ ವಿಕಲಚೇತನ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿದಾರರು ವಿಕಲಚೇತನರಿದ್ದು, ಕನಿಷ್ಟ 40% ರಷ್ಟು ವಿಕಲತೆ ಪ್ರಮಾಣ ಹೊಂದಿರತಕ್ಕದ್ದು. ಅರ್ಜಿದಾರರು ಆಯಾ ಗ್ರಾಮ ಪಂಚಾಯತಿಗಳ ವ್ಯಾಪ್ತಿಗೊಳಪಟ್ಟಿರಬೇಕು. ಅರ್ಜಿದಾರರು ಕನಿಷ್ಠ ಎಸ್.ಎಸ್.ಎಲ್.ಸಿ. ತೇರ್ಗಡೆಯಾಗಿರಬೇಕು ಮತ್ತು ಕಂಪ್ಯೂಟರ ಜ್ಞಾನ ಹೊಂದಿರಬೇಕು.
ವಿಕಲಚೇತನ ಮಹಿಳಾ, ಪ.ಜಾತಿ ಮತ್ತು ಪ. ಪಂಗಡದ ಅಭ್ಯರ್ಥಿಗಳು ಹಾಗೂ ಇಲಾಖೆಯ ಯೋಜನೆಗಳ ಬಗ್ಗೆ ಜ್ಞಾನ ಹೊಂದಿರುವವರಿಗೆ ಆಧ್ಯತೆ ನೀಡಲಾಗುವುದು.
ಅರ್ಜಿ ನಿಗದಿಪಡಿಸಿದ ದಿನಾಂಕದಂದು ಅಭ್ಯರ್ಥಿಗಳ ವಯಸ್ಸು 18 ವರ್ಷ ಹಾಗೂ ಗರಿಷ್ಠ 45 ವರ್ಷದೊಳಗಿರಬೇಕು. ಆಸಕ್ತಿಯುಳ್ಳ ಅಭ್ಯರ್ಥಿಗಳು ಫೆ.20 ಸಂಜೆ 5-00 ಗಂಟೆಯೊಳಗಾಗಿ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬೇಕು.
ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಗೋಕಾಕ ತಾಲೂಕು ಪಂಚಾಯತ ಕಾರ್ಯಾಲಯ ಕಾರ್ಯನಿರ್ವಾಹಕ ಅಧಿಕಾರಿಗಳು ಇವರನ್ನು ಸಂಪರ್ಕಿಸಿ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////

ಉಚಿತ ಕೌಶಲ್ಯ ಆಧಾರಿತ ತರಬೇತಿಗಳಿಗೆ ಅರ್ಜಿ ಆಹ್ವಾನ

ಬೆಳಗಾವಿ, ಜ. 21 : ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಕೆನೆರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟ್ ಸಂಸ್ಥೆಯು 18 ರಿಂದ 45 ನಿರುದ್ಯೋಗಿ ಯುವಕರಿಗಾಗಿ 13 ದಿನಗಳ ಉಚಿತ ಟ್ರಾವೆಲ್ಸ್ ಮತ್ತು ಟುರಿಸ್ಟ್ ಗೈಡ್ ತರಬೇತಿಯನ್ನು ಜ.08 ರಂದು ಪ್ರಾರಂಭಿಸಲಾಗಿದೆ.
ಈ ತರಬೇತಿಯು ಸ್ವ-ಉದ್ಯೋಗ ಪ್ರಾರಂಭಿಸಿ, ಸ್ವಾವಲಂಬಿ ಜಿವನ ನಡೆಸಲು ಅನುಕೂಲವಾಗಲಿದೆ. ಈ ತರಬೇತಿಯು ಊಟ ವಸತಿಯೊಂದಿಗೆ ಉಚಿತವಾಗಿರುತ್ತದೆ.
ಮೊದಲು ಬಂದವರಿಗೆ ಹಾಗೂ ಗ್ರಾಮೀನ ಭಾಗದವರಿಗೆ ಮೊದಲ ಆದ್ಯತೆ. ತರಬೇತಿಯಲ್ಲಿ ಸಾಫ್ಟ್ ಸಿಲ್ಕ್ಸ್, ಯೋಗ ತರಬೇತಿ ಹಾಗೂ ಬ್ಯಾಂಕಿಂಗ್, ಸರಕಾರಿ ಯೋಜನೆಗಳು ಮತ್ತು ಯೋಜನಾ ವರದಿ ತಯಾರಿಕೆ ಬಗೆಗಿನ ಮಾಹಿತಿಯನ್ನೂ ಉಚಿತವಾಗಿ ನೀಡಲಾಗುವುದು.
ಆಸಕ್ತರು ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟ್ ಸಂಸ್ಥೆ, ಹಳಿಯಾಳ, ಉತ್ತರ ಕನ್ನಡ ಜಿಲ್ಲೆ ಈ ವಿಳಾಸಕ್ಕೆ ಸಂಪರ್ಕಿಸಲು ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ದೂರವಾಣಿ ಸಂಖ್ಯೆ: 9449782425,9483485489, 08284-220807, 08284-295307 ಅನ್ನು ಸಂಪರ್ಕಿಸಲು ಉತ್ತರ ಕನ್ನಡ ಜಿಲ್ಲೆ ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟ್ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದ್ದಾರೆ./////

ಜ.26 ರಂದು ಪ್ಲಾಸ್ಟಿಕ್ ನಿಷೇಧ

ಬೆಳಗಾವಿ, ಜ. 21 : ಗಣರಾಜ್ಯೋತ್ಸವ ದಿನಾಚರಣೆ 26 ರಂದು ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆಸುತ್ತಿರುವ ಎಲ್ಲ ಬಗೆಯ ಅಂಗಡಿ-ಮುಂಗಟ್ಟುಗಳು, ವ್ಯಾಪಾರ-ವಹಿವಾಟುಗಳುಗಳಲ್ಲಿ ಪ್ಲಾಸ್ಟಿಕ್ ರಾಷ್ಟ್ರದ್ವಜಗಳ ಮಾರಾಟ ಹಾಗೂ ರಾಷ್ಟ್ರದ್ವಜದ ಚಿಹ್ನೆಯುಳ್ಳ ಮಾಸ್ಕಗಳ ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಸದರಿ ನಿಷೇಧಿತ ಪ್ಲಾಸ್ಟಿಕ್ ರಾಷ್ಟ್ರದ್ವಜಗಳ ಮಾರಾಟ ಹಾಗೂ ರಾಷ್ಟ್ರದ್ವಜದ ಚಿಹ್ನೆಯುಳ್ಳ ಮಾಸ್ಕಗಳ ಮಾರಾಟ ಮಾಡುವುದು ಸರ್ಕಾರಿ ಆದೇಶದ ಉಲ್ಲಂಘನೆಯಾಗುತ್ತಿದ್ದು, ವ್ಯಾಪಾರಸ್ಥರು ಹಾಗೂ ಸಾರ್ವಜನಿಕರಿಗೆ ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////

ವಿದ್ಯುತ್ ವ್ಯತ್ಯಯ

ಬೆಳಗಾವಿ, ಜ. 21 : ಲೋಕೋಪಯೋಗಿ ಇಲಾಖೆ ವತಿಯಿಂದ ರಸ್ತೆ ಅಗಲೀಕರಣ ಕೆಲಸವನ್ನು ಕೈಗೊಳ್ಳುತ್ತಿರುವುದರಿಂದ ವಿದ್ಯುತ್ ಮಾರ್ಗಗಳ ಸ್ಥಳಾಂತರ ಕಾರ್ಯವನ್ನು ಕೈಗೊಳ್ಳುತ್ತಿರುವ ಕಾರಣ ಜ. 23 ಬೆಳಿಗ್ಗೆ 11.00 ಘಂಟೆಯಿಂದ ಸಂಜೆ 6 ಘಂಟೆಯವರೆಗೆ 110 ಕೆ.ವ್ಹಿ. ಮಚ್ಛೆ ಉಪಕೇಂದ್ರದಿಂದ ವಿತರಣೆಯಾಗುವ ಬೆಳಗಾವಿ ತಾಲೂಕಿನ ಮಚ್ಛೆ ಹಾಗೂ ಪೀರಣವಾಡಿ ಗ್ರಾಮಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬೆಳಗಾವಿ ಹುವಿಸಕಂ ನಿಗಮದ ಕಾರ್ಯನಿರ್ವಾಹಕ ಇಂಜಿನೀಯರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ./////