ಸಂಶೋಧನೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಿ: ಪ್ರೊ.ರಾಮಚಂದ್ರಗೌಡ

0

 

ಬೆಳಗಾವಿ : ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಇಂಗ್ಲಿಷ್ ಅಧ್ಯಯನ ವಿಭಾಗದಿಂದ ದಿನಾಂಕ 21.01.2021 ರಂದು ಆಯೋಜಿಸಲಾಗಿದ್ದ ಸಂಶೋಧನಾ ವಿಧಾನದ ಕುರಿತ ಒಂದು ದಿನದ ರಾಷ್ಟ್ರೀಯ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಎಂ.ರಾಮಚಂದ್ರಗೌಡ ಅವರು ಸಂಶೋಧನೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವ ಅಗತ್ಯತೆಯನ್ನು ಕುರಿತು ತಿಳಿಸಿದರು.ಇಂಗ್ಲೀಷ್ ವಿಭಾಗದ ಪ್ರಭಾರಿ ಮುಖ್ಯಸ್ಥರಾದ ಡಾ॥ನಾಗರತ್ನ ಪರಾಂಡೆ ಅವರು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ವಿದ್ಯಾರ್ಥಿಗಳಲ್ಲಿ ಸಂಶೋಧನಾ ಸಂಸ್ಕೃತಿಯನ್ನು ಉತ್ತೇಜಿಸುವ ಉದ್ದೇಶದಿಂದ ಈ ಕಾರ್ಯಾಗಾರವನ್ನು ಆಯೋಜಿಸಿಲಾಗಿದೆ ಎಂದು ತಿಳಿಸಿದರು.ಸದಾನಂದ ಢವಳೇಶ್ವರ್ ಪ್ರಾರ್ಥಿಸಿದರು, ಕಾರ್ಯಾಗಾರದ ಸಂಘಟನಾ ಕಾರ್ಯದರ್ಶಿ ಡಾ॥ ಮಧುಶ್ರೀ ಕಳ್ಳೀಮನಿ ಸ್ವಾಗತಿಸಿದರು ಹಾಗೂ ಸಹಕಸರ್ಯದರ್ಶಿ ಡಾ॥ ಕವಿತಾ ಕುಸುಗಲ್ ವಂದಿಸಿದರು.

ಡಾ॥ ಪೂಜಾ ಹಳ್ಯಾಳ ಅತಿಥಿಗಳನ್ನು ಪರಿಚಯಿಸಿದರು ಹಾಗೂ ಸದಾನಂದ ಕುರಿ ನಿರೂಪಿಸಿದರು.ಮೊದಲನೆಯ ಅವಧಿಯಲ್ಲಿ ಪ್ರೊ॥ತೃಪ್ತಿ ಕರೆಕಟ್ಟಿ ಅವರು “ರೀಸರ್ಚ್ ಡಿಸೈನ್” ಎನ್ನುವ ವಿಷಯದ ಕುರಿತು ಉಪನ್ಯಾಸ ಮಂಡಿಸಿದರು.ರೀಸರ್ಚ್ ಡಿಸೈನಿನ ಆಯಾಮಗಳು ಹಾಗೂ ಹಂತಗಳನ್ನು ಸಾದ್ಯಂತವಾಗಿ ವಿವರಿಸಿದ ಅವರು ಶಿಬಿರಾರ್ಥಿಗಳ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಿದರು.ಮಧ್ಯಾಹ್ನದ ಅವಧಿಯಲ್ಲಿ ಪ್ರೊ.ಅಶೋಕ ಹುಲಿಬಂಡಿ ಸಂಶೋಧನಾ ದಾಖಲೀಕರಣದ ಕುರಿತು ಮಾತನಾಡಿ ದಾಖಲೀಕರಣದ ಮಹತ್ವ ಹಾಗೂ ವಿಧಾನಗಳನ್ನು ವಿವರಿಸಿದರು.ಸಮಾರೋಪ ಸಮಾರಂಭದ ಮುಖ್ಯ ಅತಿಥಿ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ.ಬಸವರಾಜ ಪದ್ಮಶಾಲಿ ಮಾತನಾಡಿ ವಿಚಾರ ಸಂಕಿರಣದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ವಿದ್ಯಾರ್ಥಿಗಳ ಸಂಶೋಧನಾ ಕೌಶಲ್ಯಗಳನ್ನು ವೃದ್ಧಿಸಲು ಇಂಥ ವಿಚಾರ ಸಂಕಿರಣಗಳ ಅವಶ್ಯಕತೆಯನ್ನು ವಿವರಿಸಿದರು.

ಸಂಶೋಧನಾ ಅಭ್ಯರ್ಥಿಗಳಾದ ಸಿದ್ದೇಶ್ವರ ಕಮತಿ, ರಾಜಶೇಖರ್ ಮೂಲಿಮನಿ, ಸಮೃದ್ಧಿ ಬಾರವಿ ಹಾಗೂ ವಿನಾಯಕ ನಂದಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.ಡಾ॥ನಾಗರತ್ನ ಪರಾಂಡೆ ಅಧ್ಯಕ್ಷತೆ ವಹಿಸಿದ್ದರು.ದತ್ತು ವಾಘ್ಮಾಡೆ ಸ್ವಾಗತಿಸಿದರು, ಡಾ॥ ಫಯಾಜ್ ಅಹ್ಮದ್ ಇಲ್ಕಲ್ ಕಾರ್ಯಕ್ರಮ ನಡೆಸಿಕೊಟ್ಟರು ಹಾಗೂ ರೇಣುಕಾ ದೇಸಾಯಿ ನಿರೂಪಿಸಿದರು.ಸಮಾರೋಪ ಸಮಾರಂಭದಲ್ಲಿ ರಾಘವೇಂದ್ರ ಬನಹಟ್ಟಿ ಪ್ರಾರ್ಥಿಸಿದರು.ಸುನೀಲ ಮುಚ್ಚಂಡಿ, ಇಮಾಮ್ ಕೊರಬು,ದೀಪಿಕಾ ಸುಳೇಭಾವಿ, ಸೋಮಪ್ಪ ರಾಮಗಿರಿ,ಕಿರಣ್ ನಡಕಟ್ಟಿ ಮತ್ತು ಇನ್ನಿತರ ಸಂಶೋಧನಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.