ಎಂಇಎಸ್ ಮತ್ತೆ ಪುಂಡಾಟಿಕೆ; ಬೆಳಗಾವಿಯಲ್ಲಿ ಬಿಗುವಿನ ವಾತಾವರಣ

0

ಬೆಳಗಾವಿ: ಗಡಿನಾಡು ಬೆಳಗಾವಿಯಲ್ಲಿ ಎಂಇಎಸ್ ಕಾರ್ಯಕರ್ತರು ಮತ್ತೆ ಪುಂಡಾಟಿಕೆ ಮುಂದುವರೆಸಿದ್ದಾರೆ. ಬೆಳಗಾವಿಯ ಮಹಾನಗರ ಪಾಲಿಕೆ ಮುಂದೆ ಭಗ್ವಾಧ್ವಜ ಹಾರಿಸಲು ಶಿವಸೇನೆ ಹುನ್ನಾರ ನಡೆಸಿದ್ದಾರೆ. ಎಂಇಎಸ್ ನಡೆಸುವ ರ್ಯಾಲಿಯನ್ನು ರದ್ದು ಪಡಿಸಿದ ಬೆನ್ನಲ್ಲೇ ಮಹಾರಾಷ್ಟ್ರ ಕೋಲ್ಲಾಪುರದಿಂದ ಶಿವಸೇನೆ ಪುಂಡರು ಬೆಳಗಾವಿ ಕಡೆ ಆಗಮಿಸುತ್ತಿದ್ದಾರೆ.

ಇವರನ್ನು ಕರ್ನಾಟಕ ಪೋಲಿಸ್ ಅಧಿಕಾರಿಗಳು ದಾರಿ ಮಧ್ಯದಲ್ಲೇ ತಡೆಹಿಡಿದಿದ್ದಾರೆ. ಈಗಾಗಲೇ ಬೆಳಗಾವಿ ಪಾಲಿಕೆ ಮುಂದಿನ ಕನ್ನಡ ಧ್ವಜಕ್ಕೆ ಬೀಗಿ ಪೊಲೀಸ್ ಭದ್ರತೆ ಒದಗಿಸಲಾಗಿದ್ದು, ಜಿಲ್ಲೆಯ ನಿಪ್ಪಾಣಿ ಬಳಿಯ ಕುಗನ್ನೊಳ್ಳಿ ಚೆಕ್ ಪೋಸ್ಟ್ ಮತ್ತು ಬೆಳಗಾವಿ ತಾಲ್ಲೂಕಿನ ಶಿನ್ನೂಳ್ಳಿ ಚೆಕ್ ಪೋಸ್ಟ್ ಬಳಿ ಬೀಗ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಪೋಲಿಸ್ ಸರ್ಪಗಾವಲಿನಲ್ಲಿ ಜನರ ಸಂಚಾರ ನಡಿತಾಯಿದೆ. ಮಹಾರಾಷ್ಟ್ರದ ನಾಯಕರನ್ನ ಪೊಲೀಸರು ವಾಪಸ್ ಕಳಿಸುತ್ತಿದ್ದಾರೆ ಇದರ ಮಧ್ಯ ಪೊಲೀಸರೊಂದಿಗೆ ಶಿವಸೇನಾ ಪುಂಡರು ಮಾತಿನ

ವಾಗ್ವಾದಕ್ಕಿಳದಿದ್ದಾರೆ. ಇಂತಹ ಪುಂಡರ ಪುಂಡಾಟಿಕೆಯನ್ನು ನಮ್ಮ ಕರ್ನಾಟಕ ಸರ್ಕಾರ ಮೆಟ್ಟಿ ನಿಂತು ಕನ್ನಡಿಗರಿಗೆ, ಕನ್ನಡ ನಾಡು, ನುಡಿಗೆ ರಕ್ಷಣೆ ನೀಡಬೇಕೆಂಬುವುದು ಕನ್ನಡಿಗರ ಆಶೆಯವಾಗಿದೆ.