ನೂತನ ಸಚಿವರಿಗೆ ಖಾತೆ ಹಂಚಿಕೆ

0

ಬೆಂಗಳೂರು, ಜ. 21- ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೇತೃತ್ವದ ಸಚಿವ ಸಂಪುಟಕ್ಕೆ ಇತ್ತೀಚೆಗೆ ಸೇರ್ಪಡೆಗೊಂಡ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ರಾಜ್ಯಪಾಲರ ಅಂಕಿತದ ಬಳಿಕ ಈ ಕುರಿತಂತೆ ಅಧಿಕೃತವಾಗಿ ರಾಜ್ಯ ಪತ್ರದಲ್ಲಿ ಪ್ರಕಟಣೆ ಹೊರಡಿಸಲಾಗಿದೆ. ಕೆಲವು ಸಚಿವರ ಖಾತೆ ಬದಲಾವಣೆ ಸಹ ಮಾಡಲಾಗಿದೆ.

ಸಚಿವರಿಗೆ ಖಾತೆ ಹಂಚಿಕೆಯ ಪಟ್ಟಿ :

1. ಸಿ.ಪಿ.ಯೋಗೇಶ್ವರ್ – ಸಣ್ಣ ನೀರಾವರಿ ಇಲಾಖೆ

2. ಆರ್. ಶಂಕರ್ – ಪೌರಾಡಳಿತ ಇಲಾಖೆ

3. ಎಂಟಿವಿ ನಾಗರಾಜ್ – ಅಬಕಾರಿ ಇಲಾಖೆ

4. ಮುರುಗೇಶ್ ನಿರಾಣಿ – ಗಣಿಗಾಾರಿಕೆೆ ಇಲಾಖೆ

5. ಉಮೇಶ್ ಕತ್ತಿ- ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ

6. ಎಸ್. ಅಂಗಾರ- ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಇಲಾಖೆ

7 ಅರವಿಂದ ಲಿಂಬಾವಳಿ – ಅರಣ್ಯ ಇಲಾಖೆ

8. ನಾರಾಯಣಗೌಡ – ಯುವಜನ ಮತ್ತು ಕ್ರೀಡೆ ಇಲಾಖೆ

9 ಸಿ. ಗೋಪಾಲಯ್ಯ – ತೋಟಗಾರಿಕೆ ಇಲಾಖೆ

10. ಆನಂದ್ ಸಿಂಗ್ – ಪ್ರವಾಸೋದ್ಯಮ ಇಲಾಖೆ

11. ಶಿವರಾಂ ಹೆಬ್ಬಾರ್ – ಕಾರ್ಮಿಕ ಇಲಾಖೆ

12. ಪ್ರಭು ಚವ್ಹಾಣ್ – ಪಶುಸಂಗೋಪನೆ ಇಲಾಖೆ

13. ಕೆ.ಸುಧಾಕರ್ – ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

14. ಬಸವರಾಜ ಬೊಮ್ಮಾಯಿ – ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರ ಇಲಾಖೆ

15. ಜೆ.ಸಿ. ಮಾಧುಸ್ವಾಮಿ – ವೈದ್ಯಕೀಯ ಶಿಕ್ಷಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ

16. ಸಿ.ಸಿ. ಪಾಟೀಲ್ – ಸಣ್ಣ ಕೈಗಾರಿಕೆ ಇಲಾಖೆ

17. ಕೋಟ ಶ್ರೀನಿವಾಸ ಪೂಜಾರಿ – ಮುಜರಾಯಿ ಇಲಾಖೆ

ಸಚಿವ ಮಾಧುಸ್ವಾಮಿಯವರಿಂದ ಕಾನೂನು ಖಾತೆ ಹಿಂಪಡೆದು ಬಸವರಾಜ ಬೊಮ್ಮಾಯಿ ಅವರಿಗೆ ಗೃಹ ಖಾತೆ ಜೊತೆಗೆ ಹೆಚ್ಚುವರಿಯಾಗಿ ಕಾನೂನು ಖಾತೆ ನೀಡಲಾಗಿದೆ. ಕೆ.ಸುಧಾಕರ್ ಅವರಿಂದ ವೈದ್ಯಕೀಯ ಶಿಕ್ಷಣ ಖಾತೆ ಹಿಂಪಡೆದು ಮಾಧುಸ್ವಾಮಿಗೆ ನೀಡಲಾಗಿದೆ.