ಬೆಳಗಾವಿ : ಬಿಸಿ ನೀರು ಬಿದ್ದು ಗಾಯಗೊಂಡಿದ್ದ ಒಂದುವರೆ ವರ್ಷದ ಪುಟ್ಟ ಕಂದಮ್ಮ ಸಾವು

0

ಬೆಳಗಾವಿ :  ಮೈ ಮೇಲೆ ಬಿಸಿ ನೀರು ಬಿದ್ದು ಗಂಭೀರ ಗಾಯಗೊಂಡಿದ್ದ ಒಂದುವರೆ ವರ್ಷದ ಮಗು ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಬೆಳಿಗ್ಗೆ ಅಸುನೀಗಿದೆ.

ಸವದತ್ತಿ ತಾಲ್ಲೂಕಿನ ಅಸುಂಡಿ ಗ್ರಾಮದ ಸವಿತಾ ಹಾಳಮನಿ ( 1 ) ಮೃತ ಮಗು.

ಮಗುವಿನ ತಂದೆ ಶ್ರೀಕಾಂತ ಶಿವಪ್ಪ ಹಾಳಮನಿ ಬೆಳಗಾವಿ ನಗರದಲ್ಲಿ ಪೊಲೀಸ್  ಪೇದೆಯಾಗಿ ಕಾರ್ಯನಿರ್ವಹಿಸುತ್ತಾರೆ. ರಜೆ ಮೇಲೆ ಹೆಂಡತಿ-ಮಗುವಿನೊಂದಿಗೆ ಗ್ರಾಮಕ್ಕೆ ತೆರಳಿದ್ದರು. ಜ.16ರಂದು ಮಗುವಿಗೆ ಸ್ನಾನ ಮಾಡಿಸಲು ಮಗು ತಾಯಿ,  ನೀರನ್ನು ಹೆಚ್ಚು ಬಿಸಿ ಮಾಡಿದ್ದಾರೆ. ಬಳಿಕ ನೀರನ್ನು ಸ್ನಾನದ ಕೋಣೆಯಲ್ಲಿ ಇಟ್ಟು, ಮನೆಯೊಳಗೆ ಬಂದಿದ್ದಾರೆ.

ಬರಿ ಮೈಯಲ್ಲಿದ್ದ ಮಗು ಆಟವಾಡುತ್ತಾ ಸ್ನಾನದ ಕೋಣೆಯತ್ತ ಹೋಗಿ ನೀರು ತುಂಬಿದ ಬಕೀಟ್ ಅನ್ನು ಎಳೆದಿದೆ. ಇದರಿಂದ ನೀರು ಮಗುವಿನ ಮೇಲೆ ಬಿದ್ದಿತ್ತು. ತಕ್ಷಣ   ಪೋಷಕರು  ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಚಿಕಿತ್ಸೆ ಫಲಿಸದೆ ಮಗು ಇಂದು ಮೃತಪಟ್ಟಿದೆ.