6 ನೇ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಲಿರುವ ನಿಮಿತ್ಯ ಈ ಲೇಖನ) ವಿಶೇಷ ವರದಿ- ಮಹಾಂತೇಶ ರಾಜಗೋಳಿ, ಬೈಲಹೊಂಗಲ

0

(ಬೈಲಹೊಂಗಲ ತಾಲೂಕಿನ ಯರಡಾಲ ಗ್ರಾಮದಲ್ಲಿ ಜ. 23 ರಂದು ತಾಲೂಕಾ 6 ನೇ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಲಿರುವ ನಿಮಿತ್ಯ ಈ ಲೇಖನ)
ವಿಶೇಷ ವರದಿ- ಮಹಾಂತೇಶ ರಾಜಗೋಳಿ, ಬೈಲಹೊಂಗಲ

 

ಬೈಲಹೊಂಗಲ- (ಜಿ.ಬೆಳಗಾವಿ) ಐತಿಹಾಸಿಕ ನಾಡು, ಶರಣರ ಬೀಡಾದ ಬೈಲಹೊಂಗಲ ತಾಲೂಕು ತನ್ನದೇಯಾದ ವೈಶಿಷ್ಟ್ಯೆವನ್ನು ಹೊಂದಿದೆ. ಹಳ್ಳಿ ಪ್ರದೇಶಗಳಲ್ಲಿ ಹಲವು ಕೌತುಕಗಳನ್ನು ಕಾಣುವ ಇಲ್ಲಿ ಮಿಶ್ರ ಬೆಳೆಗಳನ್ನು ರೈತರು ಬೆಳೆದು ಸುಖ ಸಮೃದ್ದಿ, ಸಮನ್ವಯತೆಯಿಂದ ಬಾಳಿ ಬದುಕುತ್ತಿದ್ದಾರೆ. ಅಂಥಹ ಊರಲ್ಲಿ ತಾಲೂಕಿನ ಯರಡಾಲ ಗ್ರಾಮವು ಸಹ ಹೊರತಾಗಿಲ್ಲ.
ಬೈಲಹೊಂಗಲ ಪಟ್ಟಣದಿಂದ ಎಂ.ಕೆ. ಹುಬ್ಬಳ್ಳಿ ಮಾರ್ಗದಲ್ಲಿ ಬರುವ ಸುಮಾರು 10 ಕಿ.ಮೀ. ಅಂತರವಿರುವ ಯರಡಾಲ ಗ್ರಾಮವು ಚೆನ್ನಮ್ಮನ ಕಿತ್ತೂರು ಮತಕ್ಷೇತ್ರ ಹಾಗೂ ಕೆನರಾ ಲೋಕಸಭಾ ಪ್ರಧೇಶ ವ್ಯಾಪ್ತಿಗೆ ಸೀಮೀತವಾಗಿದೆ. ಊರು ಹುಟ್ಟುವ ಮೊದಲು ಎರಡು ಆಲದ ಮರವಿಲ್ಲಿ ಇದ್ದದ್ದರಿಂದ ಬಸವಾದಿ ಶರಣರು ಬಸವ ಕಲ್ಯಾಣದಿಂದ ಸುಕ್ಷೇತ್ರ ಉಳವಿ ಕಡೆಗೆ ಅಮೋಘವಾದ ವಚನ ಸಾಹಿತ್ಯ ಸಾಗಿಸುವಾಗ ವಿಶ್ರಾಂತಿ ಪಡೆದು ಮುಂದೆ ಸಾಗುವಾಗ ಯರಡಾಲ ಎಂಬ ನಾಮಕರಣ ಮಾಡಿ ಹೋಗಿದ್ದಾರೆಂಬ ಪ್ರತೀತಿ ಇದೆ.


ಸುಮಾರು 450 ಜನ ವಸತಿ ಹೊಂದಿದ ಗ್ರಾಮದಲ್ಲಿ 1500 ಮತದಾರರಿದ್ದಾರೆ. ಫಲವತ್ತಾದ ಭೂಮಿಯನ್ನು ಹೊಂದಿದ ಈ ಪ್ರದೇಶ ಹತ್ತಿ, ಶೇಂಗಾ, ಜೋಳ, ಗೋದಿ, ಕಬ್ಬು, ಕಡಲೆ, ಶೋಯಾಬಿನ್ ಹಾಗೂ ಮಿಶ್ರ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘ, ಅಂಚೆ ಕಛೇರಿ, ಯರಡಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಪಡಿತರ ವಿತರಣಾ ಘಟಕ, ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆ, ಎರಡು ಅಂಗನವಾಡಿ ಕೇಂದ್ರಗಳು ಹಾಗೂ ವಿವಿಧ ಮಹಿಳಾ- ಪುರುಷ ಸಂಘ-ಸಂಸ್ಥೆಗಳು ಸ್ಥಾಪಿತವಾಗಿವೆ.
ಬೈಲವಾಡ ಗ್ರಾ.ಪಂ. ವ್ಯಾಪ್ತಿಯ ಗ್ರಾಮದಲ್ಲಿ 5 ಗ್ರಾ.ಪಂ. ಸದಸ್ಯರನ್ನು ಹೊಂದಿದ್ದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ -ಸೇವೆ ಮಾಡಿದ ಮಹಿಣಿಯರು ಇಲ್ಲಿದ್ದಾರೆ. ರಾಜ್ಯ ಸರಕಾರದ ವಿದ್ಯುತ್ ಪ್ರಸರಣಾ ಇಲಾಖೆ (ಹೆಸ್ಕಾಂ)ಯಲ್ಲಿ ಅತೀ ಹೆಚ್ಚು ಉದ್ಯೋಗಿಗಳಿದ್ದು, ಮನೆಗೊಬ್ಬರು ಈ ಇಲಾಖೆಯನ್ನೆ ಅವಲಂಬಿಸಿದ್ದಾರೆ. ಸುಮಾರು 35 ಕ್ಕೂ ಅಧಿಕ ಜನ ಈಗಾಗಲೇ ನಿವೃತ್ತಿಯಾಗಿದ್ದಾರೆ. ಸದ್ಯ 15 ಜನ ನೌಕರರು ಪ್ರಸ್ತುತ ಸೇವೆಯಲ್ಲಿದ್ದು, 45 ಕ್ಕೂ ಹೆಚ್ಚಿನ ಜನರು ಇದೇ ಇಲಾಖೆಯಲ್ಲಿ ಗುತ್ತಿಗೆ ಆಧಾರಿತ ಕಾರ್ಯದಲ್ಲಿದ್ದಾರೆ. ಹೆಸ್ಕಾಂ(ವಿದ್ಯುತ್) ಇಲಾಖೆಯಲ್ಲಿ ಅತೀ ಹೆಚ್ಚಿನ ನೌಕರರನನ್ನು ಈ ಭಾಗದಲ್ಲಿ ಗ್ರಾಮವು ಹೊಂದಿದೆ ಎಂದು ಹೇಳಲಾಗುತ್ತಿದೆ.

ಗ್ರಾಮದ ಹೊರ ವಲಯದಲ್ಲಿರುವ ಶ್ರೀ ಮರಡಿ ಬಸವೇಶ್ವರ ಹಾಗೂ ಶ್ರೀ ಗುರು ಮಡಿವಾಳೇಶ್ವರ ದೇವಸ್ಥಾನವು ಭಕ್ತರನ್ನು ಆಕರ್ಷಿಸುತ್ತಿವೆ. ವಿಭಿನ್ನ ಶೈಲಿಯಲ್ಲಿ ಶ್ರೀ ಬಸವೇಶ್ವರ ದೇವಸ್ಥಾನವನ್ನು ಕಟ್ಟಲಾಗಿದ್ದು ಹಳೇ ಕಾಲದ ವಾಸ್ತು ಗಮನ ಸೆಳೆಯುತ್ತಿದೆ. ಪ್ರತಿವರ್ಷ ಉತ್ಸವ- ಜಾತ್ರೆಗಳನ್ನು ಆಯೋಜಿಸಲಾಗುತ್ತಿದ್ದು ಭಕ್ತಿ-ಭಾವೈಕ್ಯತೆ ಇಲ್ಲಿ ರಾರಾಜಿಸುತ್ತಿದೆ. ಗ್ರಾಮದಲ್ಲಿ ಸರಕಾರದ ಪ್ರತಿ ಇಲಾಖೆಯಲ್ಲಿ ಸೇವೆಗೈಯುತ್ತಿದ್ದು ಇಲ್ಲಿ ಪಾಟೀಲ ಕುಟುಂಬಗಳನ್ನು ಹೆಚ್ಚಾಗಿ ಕಾಣಬಹುದಾಗಿದೆ. ಚಿಕ್ಕ ಗ್ರಾಮವಾದರೂ ಪ್ರತಿಯೊಂದರಲ್ಲೂ ಚೊಕ್ಕತೆ ಮೆರೆಯುವದರಲ್ಲಿ ಪ್ರಾಧಾನ್ಯತೆ ಪಡೆದಿರುವ ಗ್ರಾಮದಲ್ಲಿ ಗ್ರಾಮ ಮಟ್ಟದಿಂದ ರಾಷ್ಟ್ರ ಮಟ್ಟದವರೆಗೆ ಸರಕಾರಿ ಸೇವೆಯಲ್ಲಿ ತಮ್ಮನ್ನು ತಾವೂ ತೊಡಗಿಸಿಕೊಂಡಿದ್ದಾರೆ.

ಕೃಷಿ ಕಸುಬನ್ನೇ ಜೀವಾಳವಾಗಿಸಿಕೊಂಡ ಇಲ್ಲಿ ಈಗಾಗಲೇ ಗ್ರಾಮದೇವಿ ಜಾತ್ರೆಯು ನೂರಾರು ವರ್ಷಗಳ ನಂತರ ವೈಭವದಿಂದ ನಡೆದು ಹೆಸರುವಾಸಿಯಾಗಿದೆ. ಇದೀಗ ಕನ್ನಂಡಾಭೆ ಜಾತ್ರೆಗೆ ಸಚ್ಚಾಗಿದ್ದು ತಾನಾಗಿಯೇ ಒಳಿದು ಬಂದ ಭಾಗ್ಯವೆಂಬಂತೆ ಜನೇವರಿ 23 ರಂದು ಬೈಲಹೊಂಗಲ ತಾಲೂಕಾ ಆರನೇಯ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿಸಲು ಸಜ್ಜಾಗಿದೆ. ಈ ಕಾರಣಕ್ಕಾಗಿ ಗ್ರಾಮದ ಜನರು ಸಮ್ಮೇಳನ ಯಶಸ್ವಿಯಾಗಿಸಲು ತುದಿಗಾಲ ಮೇಲೆ ನಿಂತಿದ್ದಾರೆ. ಯರಡಾಲ ಗ್ರಾಮದಲ್ಲಿ ಇಂಥಹ ಅಭೂತಪೂರ್ವ ಕಾರ್ಯಕ್ರಮ ನಡೆಯುತ್ತಿರುವದು ಅದು ಪೂರ್ವ ಜನ್ಮದ ಪುಣ್ಯವೇ ಎಂದು ಹೇಳಬಹುದಾಗಿದೆ. ಯಶಸ್ವಿಗೆ ಪ್ರತಿಯೊಬ್ಬರು ಕೈ ಜೋಡಿಸೋಣ. ಜೈ ಕನ್ನಂಡಾಭೆ, ಜೈ ಕರ್ನಾಟಕ