ಸ್ವ ಸಹಾಯ ಸಂಘಗಳ ಸಾಧನಾ ಸಮಾವೇಶ

0

ವರದಿ ಉಮೇಶ ಗೌರಿ: ಚನ್ನಮ್ಮನ ಕಿತ್ತೂರು: ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಅವರ ಪರಿಚಯ ಇಲ್ಲದ ಕನ್ನಡಿಗರು ಯಾರು ಇಲ್ಲ. ಸ್ವತಹ ನಮ್ಮ ಕಷ್ಟಗಳಿಗೆ ಸಹಾಯ ಪಡೆಯಲು ಯಾವುದಾದರು ಸಂಘಗಳು ಇದ್ದರೆ ಅವು ಶ್ರೀ ಧರ್ಮಸ್ಥಳ ಸ್ವ ಸಹಾಯ ಸಂಘಗಳು. ಸ್ವತಃ ನಾನು ಬೆಳೆಯಬೇಕು ಎಂದು ಪರಿಶ್ರಮ ಪಟ್ಟರೆ ಅಂತವರ ಜೊತೆ ದೇವರು ಸಹಿತ ಇರುತ್ತಾನೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ. ಟ್ರಸ್ಟ್‍ನ ಅಧ್ಯಕ್ಷ ಡಿ. ವೀರೇಂದ್ರ ಹೆಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಚನ್ನಮ್ಮನ ಕಿತ್ತೂರು, ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಕಿತ್ತೂರು, ಗ್ರಾಮ ಪಂಚಾಯತ ಹಿರೇನಂದಿಹಳ್ಳಿ ಹಾಗೂ ಶ್ರೀ ಲಕ್ಷ್ಮೀದೇವಿ ಕೆರೆ ಅಭಿವೃದ್ಧಿ ಸಮಿತಿ ಇವರ ಸಹಬಾಗಿತ್ವದಲ್ಲಿ “ಕೆರೆ ಸಂಜೀವಿನಿ’’ ಕಾರ್ಯಕ್ರಮದಡಿ ಪುನಶ್ಚೇತನಗೊಳಿಸಿದ ಮಠದ ಕೆರೆ ಹಸ್ತಾಂತರ ಹಾಗೂ ಸ್ವ ಸಹಾಯ ಸಂಘಗಳ ಸಾಧನಾ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಾಸಕ ಮಹಾಂತೇಶ ದೊಡ್ಡಗೌಡರ ಕಾರ್ಯಕ್ರಮದ ಉದ್ಘಾಟನೆ ಮಾಡಿ ಸ್ವಚ್ಛ ಭಾರತದ ಪರಿಕಲ್ಪಣೆ ಇಂದು ಜಾರಿಗೆ ಬಂದಿದೆ ಆದರೆ ಡಾ ವೀರೇಂದ್ರ ಹೆಗಡೆ ಅವರು ಸುಮಾರು 25 ವರ್ಷಗಳ ಹಿಂದೆಯೆ ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛ ಗ್ರಾಮದ ಪರಿಕಲ್ಪಣೆ ನೀಡಿದ್ದರು. ಇಂದು ಸರಕಾರದ ಅನುದಾನದಲ್ಲಿ ಇಂತಹ ಕೆರೆಗಳನ್ನ ನಿರ್ಮಾಣ ಮಾಡಬೇಕೆಂದರೆ ಸುಮಾರು 20 ರಿಂದ 30 ಲಕ್ಷ ಖರ್ಚಾಗುತ್ತದೆ ಆದರೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಧಿಕಾರಿಗಳು ಕೇವಲ 12 ಲಕ್ಷಗಳಲ್ಲಿ ಅದ್ಭುತವಾಗಿ ನಿರ್ಮಾಣ ಮಾಡಿದ್ದಾರೆ ಅವರ ಕಾರ್ಯ ಮೆಚ್ಚುವಂತದ್ದು ಎಂದರು.
ಸ್ಥಳಿಯ ಶ್ರೀ ನಾಗಭೂಷಣ ಶಿವಯೋಗೇಶ್ವರ ಮಠದ ಶ್ರೀ ಪ್ರಣವಾನಂದ ಮಹಾಸ್ವಾಮಿಗಳು ಸಕಲ ಜೀವ ಸಂಕುಲಕ್ಕೆ ನೀರು ಒದಗಿಸಿ ಅಂರ್ತಜಲ ವೃದ್ದಿಸುವ ಹಿನ್ನಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಸಾಕಷ್ಟು ಕೆಲಸಗಳನ್ನು ಮಾಡಿದೆ. ಅತ್ಯಮೂಲ್ಯವಾದ ಜೀವಜಲವನ್ನು ಉಳಿಸಿ ಮುಂದಿನ ಪಪಿಳಿಗೆಗೆ ವರ್ಗಾಯಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಆಶೀರ್ವಚನ ಮಾಡಿದರು.
ಈ ವೇಳೆ ಶ್ರೀ ಲಕ್ಷ್ಮೀದೇವಿ ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಚಂದ್ರಗೌಡ ಪಾಟೀಲ ಅಧ್ಯಕ್ಷೀಯ ನುಡಿಗಳನ್ನಾಡಿದರು.
ಈ ವೇಳೆ ಬೆಳಗಾವಿ ಜಿಲ್ಲಾ ಜನ ಜಾಗೃತಿ ವೇದಿಕೆ ಅಧ್ಯಕ್ಷ ಡಾ ಜಗದೀಶ ಹಾರುಗೊಪ್ಪ, ಜಿ.ಪಂ. ಸದಸ್ಯೆ ಬಸಮ್ಮ ಕೋಲಕಾರ, ಎಪಿಎಮ್‍ಸಿ ಸದಸ್ಯ ನೀಲಪ್ಪ ನೇಗಿನಹಾಳ, ದುಗ್ಗೇಗೌಡ, ಹರೀಶ ರಾವುತ, ವಿಠಲ ಪಿಶೆ ಸೇರಿದಂತೆ ಇನ್ನೂ ಅನೇಕರು ಇದ್ದರು.
ವಿಶ್ವಪ್ರಸಾಧ ಗಾಣಗಿ ಪ್ರಾರ್ಥನಾ ಗೀತೆ ಹಾಡಿದರು, ಪುರುಷೋತ್ತಮ ನಿರೂಪಣೆ ಮಾಡಿದರು, ಪ್ರಶಾಂತ ನಾಯ್ಕ ಸ್ವಾಗತಿಸಿದರು, ಕೃಷ್ಣಪ್ಪ ವಂದಣಾರ್ಪಣೆ ಮಾಡಿದರು.