ಹುಬ್ಬಳ್ಳಿಯಲ್ಲಿ ಫೆ. 27 & 28ಕ್ಕೆ ಉದ್ಯಮಿಗಳ ಬೃಹತ್ ಸಮಾವೇಶ: ಟೈಕಾನ್ 2021

0

 

ಬೆಳಗಾವಿ:ಆರಂಭಿಕ ಯುವ ಉದ್ಯಮಿಗಳಿಗೆ ಶಿಕ್ಷಣ, ತರಬೇತಿ , ಮಾರ್ಗದರ್ಶನ, ಆರ್ಥಕ ಸಹಾಯ ಹಾಗೂ ಪ್ರೇರಣೆ ನೀಡಲು
ಟೈ ಹುಬ್ಳಿ ಫೋಸ್ಟರಿಂಗ್ ಶ್ರಮಿಸುತ್ತಿದೆ ಎಂದು ಸಂಸ್ಥೆಯ ಹುಬ್ಬಳ್ಳಿ ಚಾಪ್ಟರ್ ಅಧ್ಯಕ್ಷ ಅಜಯ ಹಂಡಾ ತಿಳಿಸಿದರು.
ಇಂದು ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಯುವ ಉದ್ದಮಿಗಳು, ಹೊಸ ಉದ್ಯಮಶೀಲ ಜನತೆಗೆ ಅವರನ್ನು ಬೆಳೆಸುವಲ್ಲಿ ಅತಿದೊಡ್ಡ ಜಾಗತಿಕ ಲಾಭರಹಿತ ಸಂಸ್ಥೆಯಾಗಿ ಇಂದು ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ ಎಂದರು.
ಉತ್ತರ ಕರ್ನಾಟಕದ ಹೆಮ್ಮೆ(Pride of North Karnataka), ಉತ್ತರ ಕರ್ನಾಟಕ ಕುಶಲತೆ ಪಡೆದಿದೆ( North Karnataka Got Talent), ಪಿಚ್ ಹಬ್(Pitch Hub) ಮತ್ತು ಎಕ್ಸಪೋ ಅಲ್ಫಾ( Expo Alpha) ಕಾರ್ಯಕ್ರಮಗಳನ್ನು ಯುವ ಉದ್ಯಮಿಗಳಾಗಿ ಬೆಳೆಯುವ ಉತ್ಸಾಹಿಗಳು ಹಾಗೂ ಹೊಸ ಉದ್ಯಮದಾರರು(start ups)ಗಳಿಗೆ ಆಯೋಜಿಸುತ್ತಿದೆ ಎಂದರು.
ಫೆ. 27 ಮತ್ತು 28ರಿಂದ ಎರಡು ದಿನ ಈ ಟೈಕಾನ್-2021 ಬೃಹತ್ ಬ್ಯುಸಿನೆಸ್ ಮೇಳ ಹುಬ್ಬಳ್ಳಿಯಲ್ಲಿ ಎರಡು ದಿನ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಟೈಕಾನ್ ಸದ್ಯ 22ದೇಶಗಳಲ್ಲಿ 13 ಸಾವಿರ ಮೇಲ್ಪಟ್ಟು ಹೆಚ್ಚು ಸದಸ್ಯರನ್ನು ಹೊಂದಿದ್ದು, ಕರ್ನಾಟಕ ಒಳಗೊಂಡು ದೇಶ ವಿದೇಶಗಳ ಉದ್ಯಮಿಗಳು ಸಮಾವೇಶಕ್ಕೆ ಆಗಮಿಸುವ ನಿರೀಕ್ಷೆ ಇದೆ ಎಂದರು.
ಉದ್ಯಮಿಗಳ ಸಮಾವೇಶದಲ್ಲಿ ಭಾಗವಹಿಸುವ ಉದ್ಯಮಿಗಳು, ಉದ್ಯಮ ಆರಂಭಿಸುವ ಕನಸು ಹೊತ್ತವರು ಸಮಾವೇಶದ ಸದುಪಯೋಗ ಪಡೆಯಬಹುದು. ಆಸಕ್ತರು

http://tiecon.tiehubli.org ಸಂಪರ್ಕಿಸಬಹುದು ಎಂದರು.
ಸಮಾವೇಶದಲ್ಲಿ ವಿಶೇಷ ಸ್ಪೀಕರ್ ಆಗಿ ದೇಶಪಾಂಡೆ ಪೌಂಡೇಶನ್ ಚೇರಮನ್ ಡಾ. ಗುರುರಾಜ ದೇಶಪಾಂಡೆ, ಜೆಎಸ್ ಡಬ್ಲೂ ಎಂಡಿ ಸಜ್ಜನ್ ಜಿಂದಾಲ್, ಸೋನಮ್ ವಾಂಗ್ಚುಕ್, ಮಿಖಾ ಸಿಂಗ್, ಸಚಿವ ಕೃಷ್ಣಬೈರೇಗೌಡ, ಪ್ರೊ. ಡಾ‌ ಯಷಾ ಮೋಹನದಾಸ, ಡಾ. ಗೌತಮ ಬನ್ಸಾಲ್, ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ, ಸ್ಪೋರ್ಟ್ಸ್ ಮಾಡೆಲ್ ಡಾ. ಕೋಮಲ ರಾವ್ ಇತರರು ಆಗಮಿಸಲಿದ್ದಾರೆ.
ಸಂಯೋಜಕ ವಿಜಯ ಮಾನೆ, ಕಾರ್ಯನಿರ್ವಾಹಕ ನಿರ್ದೇಶಕ ವಿಶಾಲ ನಾಡಗೌಡ ಇತರರು ಉಪಸ್ಥಿತರಿದ್ದರು.