ವಿ.ವಿ. ನೂತನ ಕುಲಪತಿಯಾಗಿ ಪ್ರೊ.ದಯಾನಂದ ಅಗಸರ ನೇಮಕ

0

ಕಲಬುರ್ಗಿ, ಜ. 22- ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ಇದೇ ವಿ.ವಿ.ಯ ಸೂಕ್ಷ್ಮಜೀವಿಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ದಯಾ ನಂದ ಅಗಸರ ಅವರನ್ನು ವಿ.ವಿ. ಕುಲಾಧಿಪತಿಯೂ ಆದ ರಾಜ್ಯಪಾಲರು ಶುಕ್ರವಾರ ನೇಮಕ ಮಾಡಿದ್ದಾರೆ.

ಸುಮಾರು ಒಂದೂವರೆ ವರ್ಷದಿಂದ ಖಾಲಿಯಿದ್ದ ಈ ಹುದ್ದೆಗೆ ಇದೀಗ ನೇಮಕವಾಗಿದೆ.. ಪ್ರೊ. ಅಗಸರ ಅವರಿಗೆ ಹಂಗಾಮಿ ಕುಲಪತಿ ಪ್ರೊ. ಚಂದ್ರಕಾಂತ ಯಾತನೂರ ಅವರು ಅಧಿಕಾರ ಹಸ್ತಾಂತರಿಸಿದರು.

ಮೂಲತಃ ಕಲಬುರ್ಗಿ ಜಿಲ್ಲೆ ಆಳಂದ ತಾಲ್ಲೂಕಿನ ಬೆಳಮಗಿ ಗ್ರಾಮದವರಾದ ಪ್ರೊ. ಅಗಸರ ಅವರು ಗುಲಬರ್ಗಾ ವಿ.ವಿ. ಕುಲಸಚಿವರಾಗಿ ಹಿಂದೆ ಕರ್ತವ್ಯ ನಿರ್ವಹಿಸಿದ್ದರು.

ವಿ.ವಿ.ಯಲ್ಲಿ ಶೇ 70ರಷ್ಟು ಬೋಧಕ–ಬೋಧಕೇತರ ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ಭರ್ತಿ ಮಾಡುವ ಹಾಗೂ ಸಕಾಲಕ್ಕೆ ಪರೀಕ್ಷೆಗಳನ್ನು ನಡೆಸಿ ಫಲಿತಾಂಶ ಪ್ರಕಟಿಸುವ ಸವಾಲು ನೂತನ ಕುಲಪತಿಯ ಮುಂದಿದೆ.